Follow Us On

WhatsApp Group

ಟಿಕ್‍ಟ್ಯಾಕ್

ಟಿಕ್‍ಟ್ಯಾಕ್ ಆ್ಯಪ್ ಬಗ್ಗೆ ಈ ಮೊದಲಿನಿಂದಲೂ ಅಪಸ್ವರ ಕೇಳಿಬರುತ್ತಲೇ ಇದೆ. ಆದ್ರೆ, ಕೆಲದಿನಗಳ ಹಿಂದೆ ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಮೋದಿ ಕರೆಕೊಟ್ಟ ಬಳಿಕ ಈ ಕೂಗಿಗೆ ಮತ್ತಷ್ಟು ಬಲಬಂದಿದೆ. ಬಹುತೇಕ ಕನ್ನಡ ಚಿತ್ರರಂಗದ ತಾರೆಯರು ಟಿಕ್‍ಟಾಕ್ ಬ್ಯಾನ್ ಮಾಡಬೇಕೆಂಬ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಆದ್ರೆ, ಈ ನಟಿಯೊಬ್ಬಳು ಮಾತ್ರ ಟಿಕ್‍ಟಾಕ್ ಬ್ಯಾನ್ ಮಾಡೋದು ಬೇಡ, ಇದರಿಂದ ಏನು ಪ್ರಯೋಜನ ಎಂದಿದ್ದಾರೆ. ಕಿರಿಕ್ ಪಾರ್ಟಿಯ ನಟಿ ಸಂಯುಕ್ತಾ ಹೆಗ್ಡೆ ಟ್ವೀಟ್ ಮಾಡಿ, ಟಿಕ್‍ಟಾಕ್ ಬ್ಯಾನ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಇದನ್ನು ಬ್ಯಾನ್ ಮಾಡಿದ್ರೆ ಜನರು ಮತ್ತೊಂದು ಇದೇ ತರಹದ ಆ್ಯಪ್ ಬಳಸುತ್ತಾರೆ. ಜನರೇ ಬದಲಾಗಬೇಕು. ಜನರೇ ಬದಲಾಗಿ,ಇಂಥ ಆ್ಯಪ್‍ಗಳಿಂದ ದೂರವಿರಬೇಕೆಂದು ಸಲಹೆ ನೀಡಿದ್ದಾರೆ.

Back to top button