Follow Us On

WhatsApp Group
Focus News
Trending

ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯಕ್ಕೆ ಹರಿದುಬಂದ ಭಕ್ತಸಾಗರ: ಹತ್ತು ಸಾವಿರ ಲ್ಯಾಮಿನೇಟೆಡ್ ಫೋಟೋ ಅನಾವರಣ

ಭಟ್ಕಳ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಭಟ್ಕಳ ತಾಲೂಕಿನ ಕರಿಕಲ್ ನಲ್ಲಿರುವ ಶಾಖಾ ಮಠದಲ್ಲಿ ಕೈಗೊಂಡಿರುವ ಚಾತುರ್ಮಾಸ್ಯ ವ್ರತಾಚರಣೆಯ 34 ನೇ ದಿನದ ಕಾರ್ಯಕ್ರಮವು ಸಾವಿರಾರು ಸದ್ಭಕ್ತರ ಉಪಸ್ಥತಿಯಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಣ್ಕುಳಿಯ ನಾಮಧಾರಿ ಕೂಟ ಇಂದು ಶ್ರೀ ಮಠದಲ್ಲಿ ಸೇವಾಕೈಂಕರ್ಯವನ್ನು ಕೈಗೊಂಡು ಶ್ರೀಗುರುಗಳ ಪಾದಪೂಜೆಯನ್ನು ನೆರವೇರಿಸಿತು.

ಮುರುಡೇಶ್ವರದ ಹೊಟೆಲ್ ಉದ್ಯಮಿ ಮಂಜುನಾಥ ನಾಯ್ಕ ಮತ್ತು ಉದ್ಯಮಿ ನೇತ್ರಾಣಿ ಗಣೇಶ ಶ್ರೀ ಗುರುಗಳ ಪಾದಪೂಜೆ ನಡೆಸಿ ಆಶಿರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಉದ್ಯಮಿ ನೇತ್ರಾಣಿ ಗಣೇಶ ಮದ್ರಿಸಿ ನೀಡಿದಂತ ಶ್ರೀಗುರುಗಳ ಭಾವಚಿತ್ರ ಹೊಂದಿರುವ ಹತ್ತು ಸಾವಿರ ಲ್ಯಾಮಿನೇಟೆಡ್ ಫೋಟೋವನ್ನು ಶ್ರೀ ಗುರುಗಳು ಚಾತುರ್ಮಾಸ ವೇದಿಕೆಯಲ್ಲಿ ಬಿಡುಗಡೆಗೊಳಿಸಿರು. ಅಂದಹಾಗೇ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಹಮ್ಮಿಕೊಂಡಿರುವ ಚಾತುರ್ಮಾಸ ವ್ರತಾಚರಣೆಯು ಅಗಸ್ಟ್ 30 ರಂದು ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದಲ್ಲಿ ಸೀಮೊಲ್ಲಂಘನೆಯೊoದಿಗೆ ಸಂಪನ್ನಗೊಳ್ಳಲಿದೆ.

ವಿಸ್ಮಯ ನ್ಯೂಸ್ ಈಶ್ವರ ನಾಯ್ಕ, ಭಟ್ಕಳ

Back to top button