Follow Us On

WhatsApp Group
Big News
Trending

ಬೈಕ್ ಸವಾರರಿಗೆ ಶಾಕ್: 20 ವಾಹನಗಳು ವಶಕ್ಕೆ: 20 ಸಾವಿರ ದಂಡ ಪಡೆದು ಪ್ರಕರಣ ದಾಖಲು

ಭಟ್ಕಳದಲ್ಲಿ ರಸ್ತೆಗಿಳಿದ ಜನರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ಅನಗತ್ಯವಾಗಿ ಓಡಾಡುತ್ತಿದ್ದ 20 ಬೈಕ ವಶಕ್ಕೆ ಪಡೆದು ಕೋವಿಡ ವಿಪತ್ತು ತಡೆ ನಿರ್ವಹಣೆ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ತಲಾ 1 ಸಾವಿರ ದಂಡ ವಿಧಿಸಲಾಗಿದೆ. ಇಷ್ಟು ದಿನದ ಜನತಾ ಕರ್ಪ್ಯೂ ಒಂದು ಲೆಕ್ಕ ಇನ್ನು ಮುಂದೆ ಒಂದು ಲೆಕ್ಕ ಎಂಬoತೆ ಪೊಲೀಸರು ಅಗತ್ಯಕ್ಕೆ ಓಡಾಟಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ.

ಬೆಳಿಗ್ಗೆ ಅಗತ್ಯ ವಸ್ತು ಖರೀದಿಯ ಅವಧಿಯಲ್ಲಿಯೇ 6 ಗಂಟೆಯಿoದ 10 ಗಂಟೆಯ ವರೆಗೆ ಪೋಲಿಸರು ಜನ ಸೇರದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದು 10 ಗಂಟೆಯ ಅವಧಿಯ ನಂತರ ನೇರವಾಗಿ ಹಳೆಬಸ್ ನಿಲ್ದಾಣದಲ್ಲಿ ನಗರ ಠಾಣೆ ಪಿಎಸೈ ಕುಡಗುಂಟಿ ಹಾಗೂ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಗಳು ರಸ್ತೆಯಲ್ಲಿ ಓಡಾಡುವ ಪ್ರತಿಯೊಂದು ಬೈಕ ಕಾರನ್ನು ಪರಿಶೀಲಿಸಿದರು.. ಇದರ ಪರಿಣಾಮವಾಗಿ ಬೇಕಾಬಿಟ್ಟಿ ಓಡಾಡುವ ಜನರಿಗೆ ಕಡಿವಾಣ ಹಾಕಿದಂತಾಯಿತು.

ಸರಿ ಸುಮಾರು 2 ಗಂಟೆಯ ಅವಧಿಯ ವರೆಗೆ ಸಾಕಷ್ಟು ವಾಹನಗಳನ್ನು ಪರಿಶೀಲನೆಗೈದ ಪೋಲಿಸರು 15 ದ್ವಿಚಕ್ರ ಸವಾರರ ಬೈಕ ವಶಕ್ಕೆ ಪಡೆದರು. ಈ ಮಧ್ಯೆ ಕೆಲ ಬೈಕ ಸವಾರರು ಪೋಲೀಸರಿಗೆ ಕಾನೂನಿನ ಪಾಠ ಮಾಡಲು ಬಂದ ಹಿನ್ನೆಲೆ ಪೋಲಿಸರು ತಪ್ಪುನ್ನು ಸಮರ್ಥಿಸಿಕೊಳ್ಳಲು ಬರಬೇಡಿ ಎಂದು ಎಚ್ಚರಿಕೆ ನೀಡಿದರು.

ಈ ಮಧ್ಯೆ ಕೆಲವರು ನೈಜವಾಗಿ ಔಷಧಿ ಸೇರಿದಂತೆ ಉಳಿದ ತುರ್ತು ಪರಿಸ್ಥಿತಿಯ ಹಿನ್ನೆಲೆ ಓಡಾಡಿದ್ದರ ಕಾರಣ ಪೋಲಿಸರು ವಾಹನ ನಿಲ್ಲಿಸದೇ ಕಳುಹಿಸಿಕೊಟ್ಟರು.

ಪಿಎಸೈ ಕುಡಗುಂಟಿ ನೇತ್ರತ್ವದಲ್ಲಿ 15 ವಾಹನಕ್ಕೆ ತಲಾ 1 ಸಾವಿರದಂತೆ 15 ಸಾವಿರ ದಂಡ ವಸೂಲಿ ಮಾಡಿ ಎಲ್ಲರ ಮೇಲೆ ಕೋವಿಡ್ ವಿಪತ್ತು ತಡೆ ನಿರ್ವಹಣಾ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ವಾಹನ ಬಿಡಲಾಯಿತು.

ನಂತರ ಸಂಶುದ್ದೀನ್ ಸರ್ಕಲನಲ್ಲಿ ಪಿಎಸ್ಐ ಸುಮಾ ಬಿ. ಸಹ ಅವರ ನೇತ್ರತ್ವದ ತಂಡವೂ ವಾಹನ ತಪಾಸಣೆಗಿಳಿದಿದ್ದು, ಅವರು ಸಹ 5 ದ್ವಿಚಕ್ರ ವಾಹನ ವಶಕ್ಕೆ ಪಡೆದು ತಲಾ 1 ಸಾವಿರದಂತೆ ದಂಡ ಹಾಕಿ ಅವರ ಮೇಲೆ ಕೋವಿಡ್ ವಿಪತ್ತು ತಡೆ ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಾಹನ ಬಿಡಲಾಯಿತು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button