Important
Trending

ಬಾಡದ ಕಡಲತೀರದಲ್ಲಿ ಕೇರಳದ ಅಪರಿಚಿತ ದೋಣಿ ಪತ್ತೆ

ರಹಸ್ಯ ಬೆನ್ನತ್ತಿದ ಪೊಲೀಸ್ ಟೀಮ್

ಕುಮಟಾ: ಕೇರಳ ನೋಂದಣಿ ಸಂಖ್ಯೆ ಹೊಂದಿರುವ ದೋಣಿಯೊಂದು ತಾಲೂಕಿನ ಬಾಡಗುಡೆ ಅಂಗಡಿಯ ಸಮುದ್ರತೀರದಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದ್ದು, ಮೀನುಗಾರರ ಆತಂಕಕ್ಕೂ ಕಾರಣವಾಗಿದೆ. ದೋಣಿಯನ್ನು ನೋಡಿದ ಸ್ಥಳೀಯರು ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ಆಗಮಿಸಿ, ಪೊಲೀಸ್ ತಂಡದೊಂದಿಗೆ ತೆರಳಿ ಪರಿಶೀಲನೆ ನಡೆಸಿದರು. ದೋಣಿ ತೇಲಿಬಂದಿರುವ ಸಾಧ್ಯತೆಯಿದೆ ಎನ್ನಲಾಗಿದ್ದು, ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ವಿಸ್ಮಯ ನ್ಯೂಸ್, ಕುಮಟಾ

[sliders_pack id=”1487″]

Back to top button