Follow Us On

WhatsApp Group
Big News
Trending

ಸಿನಿಮೀಯ ರೀತಿ ಚೇಸ್:ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆತ್ನಿಸಿದ ಕುಡುಕ ಕಳ್ಳ: ತಪ್ಪಿಸಿಕೊಳ್ಳಲು ಏನೇನು ಮಾಡಿದ ನೋಡಿ!? ಖತರ್ನಾಕ್ ಕಳ್ಳ ಅಂದರ್

ಕಾರವಾರ: ಇದೊಂದು ರೀತಿಯ ಸೀನಿಮೀಯ ಶೈಲಿಯ ಚೇಸ್. ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಡೆದಂತೆ ಇಲ್ಲೂ ನಡೆದಿದೆ.

ಹೌದು, ಆ ಆರೋಪಿ ತಲೆಮರೆಸಿಕೊಂಡಿದ್ದ. ಈತನ ಬೇಟೆಗೆ ಮುಂದಾದ ಪೊಲೀಸರಿಗೆ ಯಾಮಾರಿಸಲು ನೋಡಿದ. ಎಲ್ಲೆಂದರಲ್ಲಿ ಸಿನಿಮಾ ಶೈಲಿಯಲ್ಲಿ ಕಾರು ಚಲಾಯಿಸಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಪೊಲೀಸರು ಬಿಡಲಿಲ್ಲ. ಆರೋಪಿಯನ್ನು ಕೊನೆಗೂ ಸಿನಿಮಿಯ ರೀತಿಯಲ್ಲಿ ಚೇಸ್ ಮಾಡಿ ಹೆಡೆಮುರಿ ಕಟ್ಟಿರುವ ಘಟನೆ ಕಾರವಾರ ನಗರದಲ್ಲಿ ನಡೆದಿದೆ.

ಕಾರವಾರ ಸಿದ್ದರದ ಮನೆಯೊಂದರಲ್ಲಿ ಗಲಾಟೆ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ಪಿಎಸ್ ಐ ರೇವಣ್ಣ ಸಿದ್ದಪ್ಪ ಸ್ಥಳಕ್ಕೆ ತೆರಳಿದ್ದರು. ಆರೋಪಿ ಸಂದೀಪ ಗಾಂವಕರ ( 40) ಎಂಬಾತ ತನ್ನ ತಾಯಿಗೆ ಹೊಡೆದು ಗಲಾಟೆ ಮಾಡಿಕೊಂಡಿದ್ದ.

ಸ್ಥಳಕ್ಕೆ ತೆರಳಿದ ವೇಳೆ ಆರೋಪಿ ಕಳ್ಳತನ ಪ್ರಕರಣದಲ್ಲಿ ಬೇಕಾಗಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಆತನ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರಿಗೂ ಟೋಪಿ ಹಾಕಿ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ತೆರಳಿದ್ದ. ತಕ್ಷಣ ಪೊಲೀಸರು ಆತನನ್ನು ಬೆನ್ನು ಹತ್ತಿದ್ದರಾದರು ಸಿಕ್ಕ ವಾಹನಗಳಿಗೆ, ಕಾಂಪೌಂಡ್ ಗಳಿಗೆ ಗುದ್ದಿ ಪರಾರಿಯಾಗಲು ಯತ್ನಿಸಿದ್ದ.!

ಗೀತಾಂಜಲಿ ಚಿತ್ರಮಂದಿರದ ಬಳಿ ಪೊಲೀಸರೊಂದಿಗೆ ಬ್ಯಾರಿಕೇಡ್ ಹಾಕಿ ತಡೆಯಲು ಯತ್ನಿಸಿದ್ದರು. ಆದರೆ ವೇಗವಾಗಿ ತೆರಳಿ ತಪ್ಪಿಸಿಕೊಂಡು ಪರಾರಿಯಾಗಿದ್ದ. ಈ ವೇಳೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಪೊಲೀಸರಿಗೆ ಕೊನೆಗೂ ಕಾಳಿ ನದಿ ತೀರದ ಖಾಪ್ರಿಯ ದೇವಸ್ಥಾನ ಹಿಂಬದಿ ಇರುವ ರಸ್ತೆಯ ಒಣಿಯಲ್ಲಿನ ಕೃಷ್ಣಾನಂದ ಜೋಶಿ ಎಂಬುವವ ಮನೆಯ ಕಂಪೌಡ್ ಗೋಡೆಗೆ ಡಿಕ್ಕಿ ಹೊಡೆದು ಓಡಿಹೋಗಲು ಮತ್ತೆ ಯತ್ನಿಸಿದ್ದ.

ಈ ವೇಳೆ ಹಿಂದೆಯೇ ಚೇಸ್ ಮಾಡಿಕೊಂಡು ತೆರಳಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಜನರ ಜೀವದ ಜೊತೆ ಚಲ್ಲಾಟವಾಡಿದ ಆರೋಪಿಗೆ ಸರಿಯಾಗೇ ಟ್ರೀಟಮೇಂಟ್ ನೀಡಿದ್ದಾರೆ. ಎರಡು ಕೈಗೆ ಹಗ್ಗ ಬಿಗಿದು ಠಾಣೆಗೆ ಕರೆದೊಯ್ಯಲಾಗಿದೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್ ಕಾರವಾರ

Back to top button