Important
Trending

ಕುಮಟಾದಲ್ಲಿ 20 ಕರೊನಾ ಕೇಸ್ ದೃಢ

ಎಲ್ಲಾ ಕಡೆ ವ್ಯಾಪಿಸುತ್ತಿದೆ ಕರೊನಾ
ಖಾಸಗಿ ಆಸ್ಪತ್ರೆಯ ವೈದ್ಯರಿಗೂ ಸೋಂಕು ದೃಢ
[sliders_pack id=”1487″]

ಕುಮಟಾ: ತಾಲೂಕಿನ ಎಲ್ಲೆಡೆ ಕರೊನಾ ವ್ಯಾಪಿಸುತ್ತಿದ್ದು, ಜನತೆಯಲ್ಲಿ ಆತಂಕ ಶುರುವಾಗಿದೆ. ದಿನ ನಿತ್ಯವು ಸಹ ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಯೆ ಸೋಂಕಿತ ಪ್ರಕರಣ ದಾಖಲಾಗುತ್ತಿದೆ. ಇಂದೂ ಸಹ 20 ಕರೋನಾ ಪ್ರಕರಣದ ದಾಖಲಾಗಿದ್ದು, ಕುಮಟಾದ ಖ್ಯಾತ ಖಾಸಗಿ ಆಸ್ಪತ್ರೆಯ ವ್ಯದ್ಯರೊಬ್ಬರಿಗೂ ಸೋಂಕು ತಗುಲಿದೆ. ಕುಮಟಾದ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾದ ಅಚ್ಚುತ್ ಪಂಡಿತ್ ಆಸ್ಪತ್ರೆಯ ಖ್ಯಾತ ವೈದ್ಯರಿಗೆ ಕರೊನಾ ಸೋಂಕು ತಗುಲಿದೆ ಎನ್ನಲಾಗಿದೆ.(©Copyright reserved by Vismaya tv )
ಇನ್ನು ಕುಮಟಾ ತಾಲೂಕಿನ ಕೊಡ್ಕಣಿಯ 53 ವರ್ಷದ ಪುರುಷ, ಶಶಿಹಿತ್ಲದ 30 ವರ್ಷದ ಮಹಿಳೆ, ಗುಂದಾದ 3 ವರ್ಷದ ಮಗು, ಸುಭಾಷ್ ರೋಡ್ ಸಮೀಪದ 67 ವರ್ಷದ ಪುರುಷ, ಹಂದಿಗೋಣಿನ 26 ವರ್ಷದ ಯುವಕ, ಧಾರೇಶ್ವರದ 44 ವರ್ಷದ ಮಹಿಳೆ, ಕುಮಟಾದ 47 ವರ್ಷದ ಮಹಿಳೆ, ಗುಡೆಅಂಗಡಿಯ 32 ವರ್ಷದ ಮಹಿಳೆ, ಬಾಡದ 54 ವರ್ಷದ ಮಹಿಳೆ, ಮೂರೂರ್ ರೋಡ್ ಸಮೀಪದ 64 ವರ್ಷದ ಪುರುಷ, ಮಣ್ಕಿ ಸಮೀಪದ 59 ವರ್ಷದ ಮಹಿಳೆ, ಮಣ್ಕಿ ಸಮೀಪದ 62 ವರ್ಷದ ಪುರುಷ, ಹಂದಿಗೋಣಿನ 64 ವರ್ಷದ ಮಹಿಳೆ, ಕುಮಟಾದ 59 ವರ್ಷದ ಪುರುಷ, ಚಿತ್ರಗಿಯ 65 ವರ್ಷದ ಪುರುಷ, (©Copyright reserved by Vismaya tv ) ಹಳೆ ಬಸ್‌ಸ್ಟ್ಯಾಂಡ್ ಸಮೀಪದ 39 ವರ್ಷದ ಪುರುಷ, ನೆಹರು ನಗರದ 25 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ.

ಸಾರ್ವಜನಿಕ ಪ್ರಕಟಣೆ:
ಇದೇ ವೇಳೆ, ಕುಮಟಾ ಅಚ್ಚುತ್ ಪಂಡಿತ್ ಆಸ್ಪತ್ರೆಯ ಡಾ. ಪ್ರಕಾಶ ಪಂಡಿತ್ ಅವರ ಬಳಿ ಜುಲೈ 7 ರಿಂದ ಜುಲೈ 16 ರ ವರೆಗೆ ಚಿಕಿತ್ಸೆ ಪಡೆದಿರುವಂತಹ ಎಲ್ಲಾ ರೋಗಿಗಳು ಸಹ ಕುಮಟಾ ಸರ್ಕಾರಿ ಆಸ್ಪತ್ರೆಗೆ ತೆರಳಿ ವ್ಯದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button