ಕಾಡಿನಲ್ಲಿ ಹೆಚ್ಚಿದ ಪಕ್ಷಿಗಳ ಕಲರವ

ಲಾಕ್‍ಡೌನ್ ಎಫೆಕ್ಟ್

ಕುಮಟಾ: ಒಂದೆಡೆ ಮನುಷ್ಯ ಜೀವಿ ಕೊರೊನಾ ಕಂಟಕದಿಂದ ಲಾಕ್‍ಡೌನ್, ಕೊರಂಟೈನ್ ಹಿಂಸೆ ಅನುಭವಿಸುತ್ತಿದ್ದರೆ, ಅತ್ತ ಸುತ್ತಲಿನ ಬೆಟ್ಟ, ಗುಡ್ಡಗಳ ಪೊದೆಗಳಲ್ಲಿ ಹಣ್ಣುಗಳು ತುಂಬುಕ್ಕಿ, ಪಕ್ಷಿಗಳ ಕಲರವ ಹೆಚ್ಚಿದೆ.. ಕಾಡಿನ ತುಂಬೆಲ್ಲ ಹಣ್ಣು-ಹಂಪಲು ಯಥೇಚ್ಛವಾಗಿದ್ದು, ಪಕ್ಷಿಗಳಿಗೆ ಹಬ್ಬವೇ ಹಬ್ಬ..
ಹೌದು, ಸಾಮಾನ್ಯವಾಗಿ ಮಾರ್ಚ್ ಏಪ್ರಿಲ್ ಸಮಯದಲ್ಲಿ ಸುತ್ತಲಿನ ಹಳ್ಳಿಗಳಿಂದ ರೈತ ಮಹಿಳೆಯರು ಪುಟ್ಟ ಪುಟ್ಟ ಬುಟ್ಟಿಗಳಲ್ಲಿ ಕಾಡು ಹಣ್ಣುಗಳನ್ನು ಆಯ್ದು ಕುಮಟಾ ತಾಲೂಕಿನ ಮಾಸ್ತಿಕಟ್ಟೆ, ಗಿಬ್‍ಸರ್ಕಲ್, ರೇಲ್ವೆ ಬ್ರಿಜ್ ಬಳಿ ಸಾಲುಗಟ್ಟಿ ಕುಳಿತು ಮಾರುತ್ತಿದ್ದ ದ್ರಶ್ಯ ಕಣ್ಮುಂದೆ ಕಾಣುತ್ತಿತ್ತು. ಆದರೆ ಈ ವರ್ಷ ಕೆವಲ ನೆನಪು ಮಾಡಿಕೊಂಡು ಬಾಯಿ ಚಪ್ಪರಿಸಬೇಕಷ್ಟೆ. ಬಾಯಿಯಲ್ಲಿ ಬೆಣ್ಣೆಯಂತೆ ಕರಗುವ ಬಿಳೇ ಮುಳ್ಳಣ್ಣು, ಹಳದಿ ಕಾರೇ ಹಣ್ಣು, ಹುಳಿ- ಸಿಹಿ ಸಂಪಿಗೆ ಹಣ್ಣು, ನೇರಳೆ ಹಣ್ಣುಗಳನ್ನು ಕಾಡಿನಿಂದ ಕೊಯ್ದು, ಪಟ್ಟಣಕ್ಕೆ ತಂದು ಮಾರಲಾಗುತ್ತಿತ್ತು. ಆದ್ರೆ, ಈ ಹಣ್ಣುಗಳನ್ನು ಮರದಿಂದ ಕೊಯ್ಯುವವರೇ ಇಲ್ಲ.. ಹಾಲು ಕುಡಿಯತ್ತಿರುವ ಕರುವನ್ನು ಆಚೆ ದೂಡಿ ಹಾಲು ಕರೆವಂತೆ, ಕಾಡುಹಣ್ಣುಗಳನ್ನು ಕೊಯ್ದು ತರುತ್ತಿದ್ದರಿಂದ, ಪಕ್ಷಿಗಳು ಇವುಗಳಿಂದ ವಂಚಿತವಾಗುತ್ತಿದ್ದವು. ಆದರೆ ಈಗ ಭರಪೂರ ತಿಂದುಂಡು, ಕಾಡಿನ ತುಂಬೆಲ್ಲಾ ಪಕ್ಷಿಗಳು ಸುನಾದ, ಕಲರವ ಹೊರಹೊಮ್ಮಿಸುತ್ತಿವೆ….

ವಿಸ್ಮಯ ನ್ಯೂಸ್, ಯೋಗೇಶ್, ಮಡಿವಾಳ, ಕುಮಟಾ

Exit mobile version