Big News
Trending

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||

ಲೇಖನ-ಉಮೇಶ ಮುಂಡಳ್ಳಿ ಭಟ್ಕಳ
ಸಾಹಿತಿಗಳು: 9945840552

ಸ್ವಾತಂತ್ರ ಬಂದು ಇಂದಿಗೆ ೭೫ ವರ್ಷಗಳೇ ಕಳೆದು ಹೋಗಿವೆ. ಭಾರತ ಬ್ರಿಟಿಷರ ಕಪಿಮುಷ್ಠಿಯಿಂದ ಅವರ ದಾಸ್ಯದಿಂದ ಮುಕ್ತಿಗೊಂಡ ದಿನ ಇದು. ಅಮೃತ ಮಹೋತ್ಸವದ ಸಂಭ್ರಮದಲ್ಲಿ ಎಲ್ಲ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿ ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಿ ಎಲ್ಲರೂ ಸಂಭ್ರಮಿಸುತ್ತಿದ್ದಾರೆ.

ಭಾರತೀಯರಲ್ಲಿ ಆಂತರಿಕ ಒಳಜಗಳ ಕಚ್ಚಾಟ ಮೇರೆ ಮೀರಿ ಕಾಲದಲ್ಲಿ ಕೇವಲ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು ಇಲ್ಲಿಯ ಕುತಂತ್ರಿ ಬಾಲುಬಡುಕರ ಸಹಾಯ ಪಡೆದು ಭಾರತವನ್ನು ತಮ್ಮ ರಾಜಕೀಯ ದಾಸ್ಯದಲ್ಲಿ ಇಟ್ಟುಕೊಳ್ಳುವಂತಾಯಿತು. ಜಗತ್ತಿಗೆ ಶಾಂತಿಮಂತ್ರಿ ಬೋಧಿಸಿದ ಭಾರತದ ಮಣ್ಣಿನಲ್ಲಿ ಅಧಿಕಾರದಾಹ ಮನೆಮಾಡಿ ನೈತಿಕ ಅಧಃಪತನಕ್ಕೂ ಅದು ಕಾರಣವಾಯಿತು.

ಸ್ವಾರ್ಥಕ್ಕಾಗಿ ಇಂದಿಗೂ ಬಯೊತ್ಪಾದಕರನ್ನು ಸಮರ್ಥಿಸಿ ಕೊಳ್ಳುವವರು ಇರುವಂತೆ ಅಂದಿಗೂ ತಮ್ಮ ಸ್ವಾರ್ಥ ಸಾಧನೆ ಲಾಭಕ್ಕಾಗಿ ಅನೇಕ ಕ್ರಾಂತಿಕಾರಿಗಳನ್ನು ಬ್ರೀಟಿಷರಿಗೆ ಒಪ್ಪಿಸಿದ್ದ ದೇಶದ್ರೊಹಿಗಳು ಇದ್ದರು. ಇಂತಹ ವಂಚಕರ ನಡುವಲ್ಲಿಯೂ ಅನೇಕ ವೀರರ ಸತತ ಹೋರಾಟ, ಬಲಿದಾನದ ಫಲದಿಂದ ಮತ್ತೆ ದಾಸ್ಯದಿಂದ ಮುಕ್ತಿಯೂ ದೊರಕಿತು.ಆದರೆ ಆ ಅವಮಾನಕಾರಿ ಪ್ರಸಂಗ ಮತ್ತೆ ಬಾರದಂತೆ ನಿಜವಾದ ಭಾರತ ಕಟ್ಟಬೇಕಾದದ್ದು ನಮ್ಮಗಳ ನಿಜವಾದ ಆತ್ಮಪರಿವರ್ತನೆಯಿಂದ ಎಂಬುದನ್ನು ಭಾರತೀಯರು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸ್ವತಂತ್ರ ಬುದ್ದಿ ಚಿಂತನೆ ದೇಶದ ಬಗೆಗಿನ ನಿಜವಾದ ಕಾಳಜಿ ಈ ದಿಸೆಯಲ್ಲಿ ಅತ್ಯಗತ್ಯ.

ಅಂದು ಬ್ರಿಟಿಷರು ಭಾರತವನ್ನು ವ್ಯವಸ್ಥಿತವಾಗಿ ಕೊಳ್ಳೆ ಹೊಡೆದರು. ಸಂಪ್ಪತ್ತು ಹಾಳು ಮಾಡಿದರು. ಅವರ ದಾಸ್ಯದಿಂದ ಮುಕ್ತಿ ಪಡೆಯಲು ಎಷ್ಟೊಂದು ಹೋರಾಟ ನಡೆಯಿತು.. ಸಾವಿರಾರು ದೇಶಭಕ್ತರು ಪ್ರಾಣತ್ಯಾಗ ಮಾಡಿದರು.. ಅವರೆಲ್ಲ ಗಳಿಸಿಕೊಟ್ಟ ಸ್ವಾತಂತ್ರ್ಯದ ಸಂಭ್ರಮದ ಸವಿಯನ್ನು ಇಂದು ನಾವು ಸವಿಯುತ್ತಿದ್ದೇವೆ.

ಆದರೆ, ನಿಜವಾಗಿ ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳು ಮತ್ತು ಸೋಗಲಾಡಿ ಸಮಾಜ ಸೇವಕರು ಚಿಂತಕರು ಮಾಡಿರುವುದೇನು ಎಂದು ಗಮನಿಸಿದರೆ, ಭಾರತದ ನಿಜವಾದ ಶತ್ರುವಾದ ಜಾತಿವ್ಯವಸ್ಥೆ ಮತ್ತು ವರ್ಗ ಸಂಘರ್ಷಕ್ಕೆ ಮತ್ತಷ್ಟು ನೀರೆರೆದಿರುವುದು ಗೋಚರಿಸುತ್ತದೆ. ಜಾತ್ಯಾತೀತ ಜ್ಯಾತ್ಯಾತೀತ ಎನ್ನುತ್ತಲೇ ಸಮಾಜವನ್ನು ಜಾತಿಯ ಆಧಾರದ ಮೇಲೆ ವಿಂಗಡಿಸಿ ಅವರನ್ನು ಅಭಿವೃದ್ಧಿ ಮಾಡುತ್ತೇವೆ ಎಂದರು ನಾಯಕರು.

Job Alert: ಇಲ್ಲಿದೆ ಉದ್ಯೋಗಾವಕಾಶ

ಬೆಳೆಸಿದ್ದು ಮಾತ್ರ ಕೇವಲ ಜಾತೀಯತೆಯನ್ನು. ಜೊತೆಗೆ ಕೋಮು ಸೌಹಾರ್ದತೆಗೆ ಯಾವ ಪ್ರಯತ್ನವನ್ನು ಮಾಡದೆ ಓಟಿಗಾಗಿ ಹಿಂದು ಮುಸ್ಲಿಂ ಅಂತರವನ್ನು ಹೆಚ್ಚಿಸುತ್ತಾ ನಡೆದಿದ್ದು. ಅಲ್ಪಸಂಖ್ಯಾತ ರನ್ನು ಓಟಿಗಾಗಿ ಬಳಸಿಕೊಳ್ಳಲು ಬಹುಸಂಖ್ಯಾತರಿಂದ ದೂರವೇ ಇರಿಸಿದ್ದು ಕೂಡ.ವ್ಯಾಪಕ ಭ್ರಷ್ಟಾಚಾರ ಮತ್ತು ಅನಿಶ್ಚಿತತೆಯಿಂದ ಸರ್ಕಾರಕ್ಕೆ ಪಾರ್ಶವಾಯು ಬಡಿದು ಜನರು ಅಸಹಾಯಕರಾಗಿದ್ದು ದೇಶದಲ್ಲಿ ಆರ್ಥಿಕ ಅಭದ್ರತೆ ಕಾಡುತ್ತಿದಂತಹ ಸಂದರ್ಭ .ಇದೀಗ ಒಂದು ಸಮಾಧಾನಕರ ಭರವಸೆಯ ಅಂಶವೆಂದರೆ ಸರಿ ಸುಮಾರು ಅರವತೈದು ವರ್ಷ ಗಳ ನಂತರ ಭಾರತದಲ್ಲಿ ಬದಲಾವಣೆ ಗಾಳಿ ಬೀಸಲಾರಂಭಿಸಿದೆ

ಭಾರತೀಯ ಇತಿಹಾಸದಲ್ಲಿ ಸೇವೆಯೇ ಅತ್ಯಂತ ಪರಮೋಚ್ಛ ಕರ್ತವ್ಯ. “ಸೇವೆಯೇ ಪರಮ ಧರ್ಮ’’ಎನ್ನುತ್ತೇವೆ.
ಭಾರತದ ಬಗ್ಗೆ ನಂಬಿಕೆ ಕಳೆದುಹೋಗುತ್ತಿದ್ದ ದಿನಗಳಲ್ಲಿ ಕತ್ತಲು ತುಂಬಿದ ಬದುಕಲ್ಲಿ ,ಬೆಳಕ್ಕೊಂದು ಮೂಡಿದಂತೆ ಒಂದು ಆಶಾಜ್ಯೋತಿ ಮೂಡಿದೆ.

ಈ ದೇಶ ಎಂದೂ ಕಂಡರಿಯದ ದೇಶ ಸೇವಕನ್ನೊಬ್ಬನನ್ನು ಪ್ರಧಾನಮಂತ್ರಿಯನ್ನಾಗಿ ಪಡೆದುಕೊಂಡಿತು. ಹೆಮ್ಮೆಯ ಭಾರತ ಸಮರ್ಥ ನಾಯಕನ ಮುಂದಾಳತ್ವದಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಸವಾಲುಗಳನ್ನು ಎದುರಿಸುತ್ತಾ ಹೋಯಿತು. ಆರ್ಥಿಕ ಪುನಃಶ್ಚೇತನವಾಗಿ ಅದಕ್ಕೆ ಸ್ಥಿರತೆ ನೀಡುವ ಜೊತೆಗೆ ಪೂರಕ ನೀತಿ ನಿರ್ಧಾರಗಳು ರೂಪಗೊಂಡು ಕ್ರಿಯಾಶೀಲ ಆಡಳಿತ ಪ್ರಾರಂಭವಾಯಿತು. ವಿಶೇಷ ತನಿಖಾ ತಂಡದೊಂದಿಗೆ ಕಪ್ಪು ಹಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಯಿತು. ಕಪ್ಪು ಹಣ ನಿಯಂತ್ರಣಕ್ಕೆ ಕಠಿಣ ಕಾನೂನುಗಳನ್ನು ಅನುಮೋದಿಸಿ ಅದಕ್ಕೆ ಅಂತಾರಾಷ್ಟ್ರೀಯ ಸಹಮತ ಮೂಡಿಸಲಾಯಿತು.

ವಿಭಿನ್ನವಾಗಿ ಅಮೃತ ಮಹೋತ್ಸವ ಆಚರಣೆ: ಬೆಳ್ಳಿಯಲ್ಲಿ ಚಿಕ್ಕದಾಗಿ ಸಂಸತ್ ಭವನ ನಿರ್ಮಾಣ ಮಾಡಿ ಗಮನಸೆಳೆದ ಕಲಾವಿದ

ಆಡಳಿತ ವೈಖರಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವುದರ ಜೊತೆ ಜೊತೆಗೆ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮರಳಿ ಸ್ಥಾಪಿಸುವಲ್ಲಿ ಯಶಸ್ಸಿಯಾಗಿದೆ ಭಾರತ.ಅಂತ್ಯೋದಯ ತತ್ವದಿಂದ ಉತ್ತೇಜಿತವಾಗಿರುವ ಸರ್ಕಾರ, ಬಡವರು, ದುರ್ಬಲ ವರ್ಗದವರು ಹಾಗೂ ಸಮಾಜದಲ್ಲಿ ತೀರಾ ಹಿಂದುಳಿದವರ ಏಳಿಗೆಗೆ ತನ್ನನ್ನು ಸಮರ್ಪಿಸಿಕೊಂಡಿದೆ. ಬಡತನ ನಿರ್ಮೂಲನೆ ಯುದ್ದದಲ್ಲಿ ಅವರನ್ನು ಯೋಧರನ್ನಾಗಿ ಮಾಡಲು, ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.ಅದಕ್ಕಾಗಿಯೇ ಹಲವು ಕ್ರಮಗಳು ಹಾಗೂ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಅವುಗಳೆಂದರೆ- ಶಾಲೆಗಳ ಶೌಚಾಲಯ ನಿರ್ಮಾಣದಿಂದ ಹಿಡಿದು ಐಐಟಿ, ಐಐಎಂ ಮತ್ತು ಏಮ್ಸಗಳ ಸ್ಥಾಪನೆವರೆಗೆ; ಮಕ್ಕಳಿಗೆ ಲಸಿಕೆ ಹಾಕುವುದರಿಂದ ಹಿಡಿದು ಸ್ವಚ್ಛ ಭಾರತ್ ಯೋಜನೆ ಜಾರಿವರೆಗೆ; ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪಿಂಚಣಿ ನೀಡುವುದರಿಂದ ಹಿಡಿದು ಸಾಮಾನ್ಯ ಜನರಿಗೆ ಸುರಕ್ಷತೆಗೆ ಒದಗಿಸುವವರೆಗೆ; ರೈತರಿಗೆ ನೈಸರ್ಗಿಕ ಪ್ರಕೋಪಗಳ ಸಂದರ್ಭಗಳಲ್ಲಿ ಅವರ ನೆರವಿಗೆ ಧಾವಿಸುವುದರಿಂದ ಹಿಡಿದು ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಅವರ ಹಿತ ಕಾಯುವವರೆಗೆ; ಒಬ್ಬರನ್ನು ಸಬಲೀಕರಣಗೊಳಿಸುವುದರಿಂದ ಹಿಡಿದು ಸಬ್ಸಿಡಿ ಮತ್ತಿತರ ಪ್ರಯೋಜನಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುವವರೆಗೆ; ಬ್ಯಾಂಕಿಂಗ್ ವ್ಯವಸ್ಥೆ ಏಕರೂಪಗೊಳಿಸುವುದರಿಂದ ಹಿಡಿದು ಸಣ್ಣ ಉದ್ಯಮಿಗಳಿಗೆ ಸಾಲದ ನೆರವು ನೀಡುವವರೆಗೆ; ಭೂಮಿಗೆ ನೀರಾವರಿ ಒದಗಿಸುವುದರಿಂದ ಹಿಡಿದು ಗಂಗಾ ಪುನರುಜ್ಜೀವನವರೆಗೆ,ಸೂರಿಲ್ಲದವರಿಗೆ ಮನೆಗಳನ್ನು ನಿರ್ಮಿಸಿಕೊಡುವುದರಿಂದ ಹಿಡಿದು ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವವರೆಗೆ; ಉತ್ತರ ಮತ್ತು ಪೂರ್ವವನ್ನು ಬೆಸೆಯುವುದರಿಂದ ಹಿಡಿದು ಈಶಾನ್ಯ ಭಾರತದ ಅಭಿವೃದ್ಧಿಗೆ ಒತ್ತು ನೀಡುವವರೆಗೆ ಹಲವು ದಿಟ್ಟ ಕ್ರಮಗಳನ್ನು ಭಾರತ ಸರ್ಕಾರ ಕೈಗೆತ್ತಿಕೊಂಡಿದೆ.

ಇದು ಭಾರತದ ನಿಜವಾದ ಸ್ವಾತಂತ್ರ್ಯ. ಒಂದು ದೇಶ ಒಂದು ಕಾನೂನು. ಭಾರತದ ಅಭಿವೃದ್ಧಿಗೆ ಅತ್ಯವಶ್ಯಕ ವಾಗಿತ್ತು .ಆ ದಿಶೆಯಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿಥ್ ಶಾ ಅವರ ಸಮರ್ಥ ನಾಯಕತ್ವದಲ್ಲಿ ೩೭೦ ಹಾಗೂ ೩೫ ಎ ಕಲಂ ನ್ನು ರದ್ದುಗೊಳಿಸುವ ದಿಟ್ಟ ನಿರ್ಧಾರ ಕೈಗೊಂಡು. ಕಾಶ್ಮೀರಕ್ಕೆ ನಿಜವಾದ ಸ್ವಾತಂತ್ರ್ಯ ನೀಡಿ ತನ್ಮೂಲಕ ಇಡಿ ಭಾರತಕ್ಕೆ ನಿಜವಾಗಿಯೂ ಸ್ವಾತಂತ್ರ್ಯ ವನ್ನು ತಂದುಕೊಟ್ಟಿದ್ದಾರೆ. ಭಾರತದ ಮುಕುಟ ಇಂದು ಶೋಭಿಸುತ್ತಿದೆ. ಕಾಶ್ಮೀರದಲ್ಲಿ ಇಂದು ಭಾರತದ ಅಭಿಮಾನ ಮೊಳಗುತ್ತಿದೆ. ಅಸಾಧ್ಯ ಎಂಬುದುದೆಲ್ಲವೂ ಸಾಧ್ಯವಾಗುತ್ತಿದೆ. ಈ ದಿನ ಪ್ರತಿ ಪ್ರತಿ ಮನೆಮನೆಯಲ್ಲೂ ದೇಶಾಭಿಮಾನ ಮೊಳಗಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಕರೋನಾ ಜಗತ್ತನ್ನೆ ತನ್ನ ಕಬಂಧ ಬಾಹುವಿನಲ್ಲಿ ಬಿಗಿದಪ್ಪಿಕೊಂಡಾಗ ಜಗತ್ತಿಗೆ ಭಾರತ ಎಲ್ಲ ವಿದಗಳಿಂದಲೂ ಸಾಂತ್ವನ ನೀಡಿ ಶ್ರೀರಕ್ಷೆಯಾಗಿ ನಿಂತಿತು.ಪ್ರಕೃತಿ ವಿಕೋಪ ಸಿಲುಕಿದ ಅದೆಷ್ಟೋ ರಾಷ್ಟ್ರಗಳಿಗೆ ಭಾರತದ ಸಾಂತ್ವದ ನೆರವು ದೊರಕುತ್ತಿದೆ. ಜಗತ್ತಿಗೆ ಭಾರತ ಮುಕುಟವಾಗುತ್ತಿದೆ.ಇನ್ನೆಂದಿಗೂ ತಲೆಭಾಗದು ಭಾರತ. ಇಂದು ನಿಜವಾಗಿಯೂ ಸ್ವಾತಂತ್ರ್ಯೋತ್ಸವ ಆಚರಣೆಗೆ ಅರ್ಥಬಂದಿದೆ. ಸಮರ್ಥ ನಾಯಕರು ಸಕ್ರಿಯ ಸಜ್ಜನರು ಕಾಲಕಾಲಕ್ಕೆ ಹುಟ್ಟಿಬರುತ್ತಾರೆ ಎಂಬ ಈ ನೆಲದ ನಂಬಿಕೆ ಸುಳ್ಳಾಗಲೇ ಇಲ್ಲ.ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ| ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಭಾರತ ಮಾತಾಕಿ ಜೈ

ಉಮೇಶ ಮುಂಡಳ್ಳಿ ಭಟ್ಕಳ

Back to top button