Important
Trending

ವಿಭಿನ್ನವಾಗಿ ಅಮೃತ ಮಹೋತ್ಸವ ಆಚರಣೆ: ಬೆಳ್ಳಿಯಲ್ಲಿ ಚಿಕ್ಕದಾಗಿ ಸಂಸತ್ ಭವನ ನಿರ್ಮಾಣ ಮಾಡಿ ಗಮನಸೆಳೆದ ಕಲಾವಿದ

ಕಾರವಾರ: ಈಗ ಎಲ್ಲೆಡೆ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ-ಸಡಗರ. ಅತ್ಯಂತ ವಿಭಿನ್ನವಾಗಿ ವಿಶೇಷವಾಗಿ ಈ ಬಾರಿ ಸ್ವಾತಂತ್ರ‍್ಯೋತ್ಸವವನ್ನು ಆಚರಿಸಲಾಗುತ್ತಿದೆ. ಇಂಥ ವಿಭಿನ್ನ ಆಚರಣೆಗೆ ಈ ಕಲಾವಿದ ತನ್ನದೇ ಆದ ಕೊಡುಗೆ ನೀಡಿದ್ದಾನೆ.

ಹೆದ್ದಾರಿ ಪಕ್ಕ ಲಾರಿಯೊಂದು ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಚಾಲಕ, ನಿರ್ವಾಹಕ

ಹೌದು, ಚಿನ್ನಾಭರಣ ಕುಶಲಕರ್ಮಿಯೊಬ್ಬ ದೇಶದ ಹೆಮ್ಮೆಯ ಪ್ರತೀಕ ಪ್ರಜಾಪ್ರಭುತ್ವದ ಗೌರವದ ಸಂಕೇತವಾದ ಸಂಸತ್ ಭವನವನ್ನು ಬೆಳ್ಳಿಯಲ್ಲಿ ನಿರ್ಮಿಸಿದ್ದಾನೆ. ಹೌದು, ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 35 ಗ್ರಾಂ ತೂಕದ ಬೆಳ್ಳಿಯನ್ನು ಬಳಸಿಕೊಂಡು ಚಿಕ್ಕದಾಗಿ ಸಂಸತ್ ಭವನ ನಿರ್ಮಾಣ ಮಾಡಿ, ದೇಶಾಭಿಮಾನ ಮೆರೆದಿದ್ದಾನೆ ಈ ಕಲಾವಿದ.

ಈತನ ಹೆಸರು ಮಿಲಿಂದ ಉದಯಕಾಂತ ಅಣ್ವೇಕರ.ಇಲ್ಲಿನ ಕಡವಾಡದ ನಿವಾಸಿ. ಇವರು ಬೆಳ್ಳಿಯಲ್ಲಿ ನಿರ್ಮಾಣ ಮಾಡಿದ ಸಂಸತ್ ಭವನ 2 ಇಂಚು ಎತ್ತರ, 1.5 ಇಂಚು ಸುತ್ತಳತೆಯನ್ನು ಹೊಂದಿದೆ. ನಿಜ ಸಂಸತ್ ಭವನದಂತೆಯೇ ಕಮಾನುಗಳು, ಮೆಟ್ಟಿಲು, ಭವನದ ಮೇಲೆ ಧ್ವಜವನ್ನೂ ನಿರ್ಮಿಸಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button