ಅಂಕೋಲಾ: ಲಕ್ಷಾಂತರ ರೂಪಾಯಿ ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡಿದ್ದ ವುಡ್ ಮಿಲ್ ಜಪ್ತು ಮಾಡಿದ ಘಟನೆ ಅಂಕೋಲಾ ತಾಲೂಕಿನ ಅಗ್ರಗೋಣದಲ್ಲಿ ನಡೆದಿದೆ.
ಕಾರು ಅಪಘಾತ: ನಿಶ್ಚಿತಾರ್ಥವಾಗಿದ್ದ ಯುವಕ ಸಾವು
ಜಾನಕಿ ವುಡ್ ಇಂಡಸ್ಟ್ರೀಸ್ ಹೆಸರಿನ ಈ ಕಟ್ಟಿಗೆ ಮಿಲ್ ನಲ್ಲಿ ಅನಧಿಕೃತವಾಗಿ ದಾಸ್ತಾನಿಟ್ಟ ಹಾಗೂ ಕೊರೆಯುತ್ತಿದ್ದ 15 ನಗಗಳಿಗೆ 0.555 ಘ. ಮೀ ಸಾಗವಾನಿ ನಾಟನ್ನು ಜಪ್ತು ಪಡಿಸಿಕೊಂಡು, ಮಿಲ್ ಗೆ ಬೀಗ ಜಡಿಯಲಾಗಿದೆ.ವಶಪಡಿಸಿಕೊಂಡ ಕಟ್ಟಿಗೆ ಮೌಲ್ಯ ಲಕ್ಷಾಂತರ ರೂ ಎಂದು ಅಂದಾಜಿಸಲಾಗಿದೆ.
ಅಕ್ರಮವಾಗಿ ಕಟ್ಟಿಗೆ ದಾಸ್ತಾನು ಮಾಡಿದ ಖಚಿತ ಮಾಹಿತಿಯ ಮೇರೆಗೆ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಡಾ. ಪ್ರಶಾಂತ ಕೆ.ಸಿ ಇವರ ಮಾರ್ಗದರ್ಶನದಲ್ಲಿ ಅಂಕೋಲಾ ಎಸಿಎಫ್ ಕೃಷ್ಣ ಗೌಡ ಹಾಗೂ ಹೊಸಕಂಬಿ ಉಪ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ ನೇತೃತ್ತದಲ್ಲಿ ದಾಳಿ ನಡೆಸಿದ ಅರಣ್ಯ ಇಲಾಖೆಯ ಇತರೆ ಅಧಿಕಾರಿಗಳು, ಮತ್ತು ಸಿಬ್ಬಂದಿಗಳು ಅಗ್ರಗೊಣದ ಜಾನಕಿ ವುಡ್ ಇಂಡಸ್ಟ್ರೀಸ್ ಜಪ್ತು ಮಾಡಿ ವುಡ್ ಮಿಲ್ ಮಾಲೀಕರಾದ ಶಂಕರ್ ರಾಮಾ ಶೇಟ -ವೆರ್ಣೇಕರ್ ಹಾಗೂ ರಾಮಾರಾಜ್ ಶಂಕರ ಶೇಟ್ ವೆರ್ಣೇಕರ್ ರವರ ಮೇಲೆ ಅರಣ್ಯ ಮೊಕದ್ದಮ್ಮೆ ದಾಖಲಿಸಿದ್ದಾರೆ.
ಪ್ರಕರಣದ ಮುಖ್ಯ ಆರೋಪಿ ಮೊರಳ್ಳಿಯ ಮಂಜುನಾಥ ನಾಯ್ಕ ಹಾಗೂ ಇತರೆ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಸತೀಶ್ ಕಾಂಬ್ಳೆ, ರಾಘವೇಂದ್ರ ಜಿರಗಾಳೆ, ಪ್ರಶಾಂತ ಪಟಗಾರ, ಗೌರಿಶಂಕರ ರಾಯ್ಕರ, ಅಕ್ಷಯ ಕುಲಕರ್ಣಿ, ಬಾಬು , ಬಸನವನಗೌಡ, ವೆಂಕಟೇಶ, ಪುಂಡಲೀಕ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.ಮುಖ್ಯ ಆರೋಪಿಯನ್ನು ವಲಯ ಅರಣ್ಯಾ ಧಿಕಾರಿಗಳ ಮುಂದೆ ಹಾಜರು ಪಡಿಸಿ, ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿದ್ದು, ಮಿಲ್ ನ ಪರವಾನಿಗೆಯನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿರಿಸಿ ಬೀಗ ಮುದ್ರೆ ಜಡಿಯಲಾಗಿದೆ. ಪ್ರಕರಣಕ್ಕೆ ಸಂಬಂಸಿದಂತೆ ಇಲಾಖೆ ಹೆಚ್ಚಿನ ತನಿಖೆ ಕೈಗೊಂಡಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ