Follow Us On

WhatsApp Group
Focus News
Trending

ಗೋ ಕಳ್ಳರ ಹೊಸ ಐಡಿಯಾ! ಪಿಪಿಇ ಕಿಟ್ ರೀತಿಯ ಮುಸುಕು ಧರಿಸಿ, ಕಾರಿನಲ್ಲಿ ಬಂದು ಗೋಕಳ್ಳತನ: ಸಿಸಿಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ

ಜಿಲ್ಲೆಯಲ್ಲಿ ದಿನೇ ದಿನೇ ಅಕ್ರಮ ಗೋಸಾಗಾಟ ಮತ್ತು ಗೊಕಳ್ಳತನ ಹೆಚ್ಚುತ್ತಲೇ ಇದೆ. ಪೊಲೀಸ್ ಇಲಾಖೆಯ ಹಲವು ಗೋ ಸಾಗಾಟ ಹಾಗೂ ಗೋ ಮಾಂಸ ಸಾಗಾಟ ಪ್ರಕರಣಗಳನ್ನು ಬೇಧಿಸುತ್ತಿದ್ದರೂ, ಗೋಕಳ್ಳರ ದುಷ್ಕೃತ್ಯ ನಿಂತಿಲ್ಲ.

ಇದೀಗ ಪಿಪಿಇ ಕಿಟ್ ನಂತಹದ್ದನ್ನು ಧರಿಸಿ, ವಾಹನದಲ್ಲಿ ಬಂದು ಇಂದು ಮುಂಜಾನೆ ಗೋವುಗಳನ್ನು ಕದ್ದೊಯ್ದಿದ್ದಾರೆ. ಶಿರಸಿಯಲ್ಲಿ ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಕಳ್ಳರು ಕಾರಿನಲ್ಲಿ ಗೋವುಗಳನ್ನು ಕದ್ದೊಯ್ದಿದ್ದಾರೆ.

ಐಷಾರಾಮಿ ಕಾರಿನಲ್ಲಿ ಬಂದ ಗೋ ಕಳ್ಳರು ಬೆಳಗಿನ ಜಾವ ಗೋ ಕಳ್ಳತನಕ್ಕೆ ಯೋಜನೆ ರೂಪಿಸಿದ್ದಾರೆ,. ರಸ್ತೆಯ ಪಕ್ಕದಲ್ಲಿದ್ದ ಗೋವುಳನ್ನು ಕಾರಿನಲ್ಲಿ ತುಂಬಿಕೊoಡು ಪರಾರಿಯಾಗಿದ್ದು, ಈ ಘಟನೆ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ. ಈ ಸಂಬoಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಆರಂಭಗೊoಡಿದೆ.

ಹೌದು, ಬೀದಿಯಲ್ಲಿ ಇರುವ ಬಿಡಾಡಿ ದನಗಳನ್ನು ಕಾರಿನಲ್ಲಿ ತುಂಬಿ ಕಳ್ಳತನ ಮಾಡಿದ ಘಟನೆ ಶಿರಸಿ ನಗರದ ಮರಾಠಿಕೊಪ್ಪದಲ್ಲಿ ಇಂದು ನಡೆದಿದೆ. ವಾಹನದಲ್ಲಿ ಬಂದ ಮುಸುಕುದಾರಿ ವ್ಯಕ್ತಿಗಳು ಬೀದಿಯಲ್ಲಿ ಮಲಗಿದ್ದ ದನಗಳನ್ನು ಹಿಡಿದು ವಾಹನಕ್ಕೆ ತುಂಬಿ ಹೊತ್ತೊಯ್ಯುವ ವಿಡಿಯೊ ಸಿಸಿ ಟಿ.ವಿಯಲ್ಲಿ ಸೆರೆಯಾಗಿದ್ದು ಇದೀಗ ಈ ವಿಡಿಯೊ ಪೊಲೀಸರಿಗೆ ದೊರತಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಶಿರಸಿ

Back to top button