Important
Trending

ಎರಡು ಪ್ರತ್ಯೇಕ ಪ್ರಕರಣ: ಇಬ್ಬರ ಸಾವು

ಹಳಿಯಾಳ: ತಾಲೂಕಿನಲ್ಲಿ ಒಂದೇ ದಿನ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಓರ್ವ ಯುವಕ ಹಾಗೂ ಓರ್ವ ಮೆಕಾನಿಕ್ ದಾರುಣ ಸಾವು ಕಂಡ ದುರ್ಘಟನೆ ನಡೆದಿದೆ. ಮೊದಲ ಘಟನೆಯಲ್ಲಿ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ಯುವಕ ಮಂಜುನಾಥ ಇಂಗಳಗಿ ಬೆಳಗಿನ ಜಾವ ವಾಕಿಂಗ್ ತೆರಳಿದ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕ ಸಾವನಪ್ಪಿದ್ದಾನೆ. ವಾಹನ ಸವಾರ ವಾಹನ ಸಮೇತ ಪರಾರಿಯಾಗಿದ್ದು, ಈ ಕುರಿತಾಗಿ ಹಳಿಯಾಳ ಠಾಣೆಯಲ್ಲಿ ಹಿಟ್ ಆ್ಯಡ್ ರನ್ ಪ್ರಕರಣ ದಾಖಲಾಗಿದೆ.

ಮತ್ತೊಂದು ಘಟನೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಅನತಿ ದೂರದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಶಿವಮೊಗ್ಗ ಮೂಲದ ಮೆಕಾನಿಕ್ ಹಬೀಬ್ ಖಾನ್ ಪಠಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಟ್ಟಣದ ಕಾರ್ಮೆಲ್ ಶಾಲೆಗೆ ತೆರಳುವ ತಿರುವಿನಲ್ಲಿರುವ ರಾಜ್ಯದ ಹೆದ್ದಾರಿ ಪಕ್ಕದ ಟ್ರಾಕ್ಟರ್ ರಿಪೇರಿ ಗ್ಯಾರೇಜ್‌ನಲ್ಲಿ ಈ ಅವಘಡ ಸಂಭವಿಸಿದೆ. ಈ ಕುರಿತಾಗಿಯೂ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button