Focus News
Trending

ಮಾಜಿ ಸಚಿವ ಅಸ್ನೋಟಿಕರ್ ಸುದ್ದಿಗೋಷ್ಠಿ : ರಾಜಕೀಯ ‘ಸಂಕ್ರಮಣ’ ಕಾಲ ಸನ್ನಿಹಿತ

ಬಿಜೆಪಿಗೆ ನೀಡಿದ ಜೆಡಿಎಸ್ ಬೆಂಬಲಕ್ಕೆ ಸಮರ್ಥನೆ :
‘ಆನಂದ’ದ ರಾಜಕೀಯ ಭವಿಷ್ಯ ಕ್ಷೇತ್ರದ ಜನತೆ ನಿರ್ಧರಿಸಲಿದ್ದಾರೆ.
ಕಾರವಾರ-ಅಂಕೋಲಾ ಸ್ಥಳೀಯ ಸಂಸ್ಥೆ ಗೆದ್ದ ಮಾತ್ರಕ್ಕೆ ಮುಂದೆಯೂ ಶಾಸಕರೆಂಬ ಕಲ್ಪನೆ ಬೇಡ ?

[sliders_pack id=”1487″]

ಅಂಕೋಲಾ : ಮಾಜಿ ಸಚಿವ ಆನಂದ ಅಸ್ನೋಟಿಕರ್ ಭಾನುವಾರ ಪಟ್ಟಣದ ಖಾಸಗಿ ಹೋಟೇಲೊಂದರಲ್ಲಿ ಸುದ್ದಿಗೋಷ್ಠಿ ಕರೆದು, ಪ್ರಸಕ್ತ ವಿದ್ಯಮಾನ ಸೇರಿದಂತೆ ತನ್ನ ರಾಜಕೀಯ ಮನದ ಇಂಗಿತ ವ್ಯಕ್ತ ಪಡಿ ಸಿದರು.
ಕಾರವಾರ ನಗರಸಭೆ ಆಡಳಿತ ಬಿಜೆಪಿಗೆ ದೊರಕಿಸಿಕೊಟ್ಟು, ಅಸ್ನೋಟಿಕರ್ ತನ್ನ ರಾಜಕೀಯ ಭವಿಷ್ಯ ಹಾಳುಗೆಡವಿಕೊಂಡರು ಎನ್ನುವ ಸುದ್ದಿಗೆ ಸಂಬoಧಿಸಿದoತೆ ಪ್ರತಿಕ್ರಿಯಿಸಿದ ಮಾಜಿ ಸಚಿವ, ಕಳೆದ 2 ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತವಿಲ್ಲದ ಸ್ಥಳೀಯ ಸಂಸ್ಥೆಗಳಿಗೆ ಕೊರೊನಾ ಸಂದರ್ಭದಲ್ಲಿ ರಾಜಕೀಯ ಮಾಡುವುದಕ್ಕಿಂತ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ದೃಷ್ಟಿಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕರಿಸುವುದು ಸೇರಿದಂತೆ ಜನಪರ ಕಾಳಜಿಯಿಂದ ಜೆಡಿಎಸ್ ಬೇಷರತ್ ಬೆಂಬಲ ನೀಡಿದೆ ಎಂದು ತನ್ನ ರಾಜಕೀಯ ನಡೆ ಕುರಿತು ಸಮರ್ಥಿಸಿಕೊಂಡರು.


ರಾಜಕೀಯ ಹಿನ್ನಲೆ : ನಾನು ಸಹ 19ನೇ ವರ್ಷದಲ್ಲಿ ರಾಜಕೀಯಕ್ಕೆ ಧುಮುಕಿದ್ದು, ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಚಿವ ಸ್ಥಾನವನ್ನು ಗಳಿಸಿಕೊಂಡಿದ್ದೆ. ನನ್ನ ತಂದೆ-ತಾಯಿಗಳು ರಾಜಕೀಯವಾಗಿ ಉನ್ನತ ಸ್ಥಾನ ಅಲಂಕರಿಸಿದ ಕೌಟುಂಬಿಕ ಹಿನ್ನಲೆ ವಿವರಿಸಿದ ಅಸ್ನೋಟಿಕರ್, ನನ್ನ ರಾಜಕೀಯ ಭವಿಷ್ಯದ ಚಿಂತೆ ಸದ್ಯ ಬೇರೆಯವರು ಮಾಡಬೇಕಾಗಿಲ್ಲ. ಜನತೆಯೇ ಮುಂದೊಮ್ಮೆ ಮತ್ತೆ ಅವಕಾಶ ಮಾಡಿಕೊಟ್ಟರೆ ಈ ಕ್ಷೇತ್ರದ ಶಾಸಕ ಹೇಗಿರಬೇಕೆನ್ನುವುದನ್ನು ಮಾಡಿ ತೋರಿಸುತ್ತೇನೆ. ಸದ್ಯ ನನಗೆ ಜಾಹೀರಾತು ರೂಪದ ಅಭಿನಂದನೆ ರಾಜಕೀಯ ಬೇಕಿಲ್ಲಾ; ನನ್ನದೇನಿದ್ದರೂ ಅಭಿವೃದ್ಧಿಯ ರಾಜಕೀಯ ಎಂದು ಹೇಳಿದರು.

ಶಾಸಕರ ಆಯ್ಕೆ ಜನತೆಯ ನಿರ್ಧಾರ :

ಕಾರವಾರ ನಗರಸಭೆ ಮತ್ತು ಅಂಕೋಲಾ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿದ ಮಾತ್ರಕ್ಕೆ ಶಾಸಕಿ ರೂಪಾಲಿ ನಾಯ್ಕ, ಮುಂದಿನ ಅವಧಿಗೂ ತಾನೇ ಶಾಸಕಿಯಾಗುವೆನೆಂಬ ಕಲ್ಪನೆಯಲ್ಲಿ ಇರದೇ ಕ್ಷೇತ್ರದ ಅಭಿವೃದ್ಧಿಗೆ ತೊಡಗಿಸಿಕೊಳ್ಳಲಿ. ಕಾಗೇರಿಯವರ ಅವಧಿಯಲ್ಲಿ ಅಂಕೋಲಾ ಕ್ಷೇತ್ರಕ್ಕೆ ಸಂಬoಧಿಸಿದ ತಾಲ್ಲೂಕು ಪಂಚಾಯತ, ಜಿಲ್ಲಾ ಪಂಚಾಯತ್, ಪಟ್ಟಣ ಪಂಚಾಯತನoತಹ ಬಹುತೇಕ ಆಡಳಿತ ಬಿಜೆಪಿಯದ್ದಾಗಿರಲಿಲ್ಲಾ. ಆದರೂ ಕಾಗೇರಿಯವರು ಜನಮಾನಸದಲ್ಲಿ ತಮ್ಮ ಕಾರ್ಯಗಳ ಮೂಲಕ ನೆಲೆ ನಿಂತು ಈ ಹಿಂದೆ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಿ ಮಾತನಾಡಿದ ಅಸ್ನೋಟಿಕರ್, ಶಾಸಕರ ಆಯ್ಕೆಯ ಭವಿಷ್ಯವನ್ನು ಕ್ಷೇತ್ರದ ಜನತೆಯೇ ನಿರ್ಣಯಿಸಲಿದ್ದಾರೆ ಎಂದರು.


ಗೂಗ್ಲಿ : ತನ್ನನ್ನು ತಾನೇ ರಾಜಕೀಯವಾಗಿ ಗೂಗ್ಲಿ ಎಂದು ಹೇಳಿಕೊಂಡ ಅಸ್ನೋಟಿಕರ್ ಬಿಹಾರ ಚುನಾವಣೆಯ ಮತದಾನೋತ್ತರ ಫಲಿತಾಂಶ ಸಮೀಕ್ಷೆಯನ್ನು ಉದಾಹರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಅಂತAತ್ರ ರಾಜಕೀಯ ಸನ್ನಿವೇಶ ಏರ್ಪಡುವ ಸಾಧ್ಯತೆ ಕೇಳಿ ಬಂದಾಗಲೆಲ್ಲಾ ಪ್ರಾದೇಶಿಕ ಪಕ್ಷಗಳ ಮಹ ತ್ವನ್ನು ಸಾರಿ ಹೇಳಿದಂತಿತ್ತಲ್ಲದೇ, ತಾವು ಸಹ ರಾಜಕೀಯವಾಗಿ ಸಂದಿಗ್ಧತೆಯಲ್ಲಿರುವುದಾಗಿ ತಿಳಿಸಿದರು.
ರಾಜಕೀಯ ‘ಸಂಕ್ರಮಣ’ ಕಾಲ : ಇನ್ನುಮುಂದೆ ನನಗೆ ಬೇರೆ ಬೇರೆ ಪಕ್ಷಗಳನ್ನು ಸೇರಿ ಕೊಳ್ಳುವ ಇಚ್ಛೆಯಿಲ್ಲಾ. ಸಂಕ್ರಾತಿಯ ನಂತರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಿ ಮುಂದಿ ನ ರಾಜಕೀಯ ನಡೆಯ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವೆ ಇಲ್ಲವೇ ರಾಷ್ಟಿçÃಯ ಪಕ್ಷವೊಂದರಲ್ಲಿ ಗುರುತಿಸಿಕೊಂಡು ಕೊನೆಯವರೆಗೂ ಅಲ್ಲಿಯೇ ಸ್ಥಿರವಾಗಿರುವೆ. ಈ ಹಿಂದೆ 4 ಬಾರಿ ಶಾಸಕ ಸ್ಥಾನಕ್ಕೆ ಮತ್ತು 1 ಬಾರಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿರುವ ನಾನು ಸೋಲು-ಗೆಲುವುಗಳನ್ನು ಕಂಡಿದ್ದು, ತನಗೀಗ 40ರ ‘ವಸಂತ’ ಎಂದು ಹೇಳಿರುವುದು ಒಂದರ್ಥದಲ್ಲಿ ಅಸ್ನೋಟಿಕರ್ ರಾಜಕೀಯವಾಗಿ ಪ್ರಬುದ್ಧರಂತೆ ಮಾತನಾಡಿದಂತಿದೆ. ಈ ಮೂಲಕ ಸಂಕ್ರಾತಿಯ ನಂತರ ರಾಜಕೀಯ ಸಂಕ್ರಮಣದ ಸೂಚನೆಯನ್ನು ನೀಡಿದ್ದಾರೆ.

ರೆಸಾರ್ಟ ರಾಜಕೀಯ :

ಆಪರೇಶನ್ ಕಮಲದ ಮೂಲಕ ನಾಡಿನ ರಾಜಕೀಯದಲ್ಲಿ ಸಂಚಲನ ಮೂಡಿಸಿ ರೆಸಾರ್ಟ ರಾಜಕೀಯದ ಮೂಲಕವೇ ಹೆಸರಾಗಿದ್ದ ಅಸ್ನೋಟಿಕರ್, ಸ್ಥಳೀಯ ಚುನಾವಣೆಗಳಿಗೆ ರೆಸಾರ್ಟ ರಾಜಕೀಯ ಬರುತ್ತಿರುವುದು ಅಷ್ಟೊಂದು ಸಮಂಜಸವಲ್ಲಾ ಎಂದು ಇತ್ತೀಚಿಗೆ ಬಿಜೆಪಿಯವರು ಕಾರವಾರ ನಗರ ಸಭೆ ಮತ್ತು ಅಂಕೋಲಾ ಪುರಸಭೆ ಗದ್ದುಗೆ ಏರಲು ನಡೆಸಿದ ರೆಸಾರ್ಟ ರಾಜಕೀಯದ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ ವೇಳೆ ಮಾತನಾಡದ ಅವರು ಎಲ್ಲರೂ ಒಗ್ಗಟ್ಟಾಗಿರಲು ರೆಸಾರ್ಟಗೆ ಹೋಗಿರಬಹುದು ಎಂದು ಹೇಳಿ ಆಯ್ಕೆಯಾದ ಸರ್ವ ಸದಸ್ಯರಿಗೆ ಅಭಿನಂದಿಸಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಶ್ರಮವಹಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.


ಉಪಸ್ಥಿತರು : ಜೆಡಿಎಸ್ ತಾಲೂಕಾ ಘಟಕದ ನೂತನ ಅಧ್ಯಕ್ಷ ಸಂದೀಪ ಬಂಟ, ರಾಜ್ಯ ಸಂಘಟನೆಯ ಮಹಿಳಾ ಕಾರ್ಯದರ್ಶಿ ಮೋಹಿನಿ ನಾಯ್ಕ, ಪ್ರಮುಖರಾದ ರವಿ ನಾಯ್ಕ, ದೇವರಾಯ ನಾಯಕ ಸಗಡ ಗೇರಿ, ಇಬ್ರಾಹಿಂ ಬಾಬಾ ಖಾನ್, ವಸಂತ ನಾಯ್ಕ, ಶ್ರೀನಿವಾಸ ನಾಯ್ಕ, ಉಮೇಶ ಟಾಕೇಕರ್, ಗೋವಿಂದ ನಾಯಕ, ಇಬ್ರಾಹಿಂ ಖಾನ ಬಾಬಾ, ಅಣ್ಣಪ್ಪ ಸಿದ್ದಿ, ಗಿರೀಶ ಗೌಡ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button