Follow Us On

Google News
Uttara Kannada
Trending

ರಸ್ತೆಯಂಚಿನ ದನಕದ್ದು ಸಾಗಿಸುತ್ತಿದ್ದ ಹೈಟೆಕ್ ಕಳ್ಳರ ಬಂಧನ

ರಾತ್ರಿ ಓಡಾಡುವ ಬಿಡಾಡಿ ದನಗಳೇ ಇವರ ಟಾರ್ಗೆಟ್
ದನಗಳನ್ನು ಅಕ್ರಮವಾಗಿ ಹಾನಗಲ್, ಹಾವೇರಿಗೆ ಸಾಗಿಸುತ್ತಿದ್ದರು
26 ಕೆ.ಜಿ ಗೋಮಾಂಸ ವಶಕ್ಕೆ

[sliders_pack id=”1487″]

ಶಿರಸಿ: ಕಳೆದ ಒಂದು ತಿಂಗಳುಗಳಿoದ ಶಿರಸಿ ನಗರ ಹಾಗೂ ಗ್ರಾಮೀಣ ಭಾಗದ ಬಿಡಾಡಿ ದನಗಳನ್ನು ಹೈ ಪೈ ವಾಹನಗಳ ಮೂಲಕ ಕದ್ದು ದನಗಳ ಹತ್ಯೆ ಮಾಡಲಾಗುತ್ತಿದೆ ಎಂಬ ದೂರು ಬಂದಿದ್ದ ಹಿನ್ನೆಲೆಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿರುವ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು, ದನಗಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ. ಬೆಳಗಿನ ಜಾವ ಕಾರ್ಯಾಚರಣೆ ನಡೆಸ ಬನವಾಸಿ ರಸ್ತೆ ಕೆರೆಕೊಪ್ಪ ಕ್ರಾಸ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಿಡಾಡಿ ದನಗಳೇ ಇವರ ಟಾರ್ಗೆಟ್‌ಗಳಾಗಿದ್ದು, ರಾತ್ರಿಯ ವೇಳೆಯಲ್ಲಿ ದನಗಳನ್ನು ಕದ್ದು ಮಾಂಸಕ್ಕಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಕೃತ್ಯ ಕೆಲವು ನಗರದ ಅಂಗಡಿಗಳ ಸಿ.ಸಿ. ಟಿ.ವಿಯಲ್ಲೂ ಸೆರೆಯಾಗಿದ್ದು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ದನಗಳ್ಳರು ತಮ್ಮ ಕಾರ್ಯವನ್ನು ಮಾಡುತ್ತಲೇ ಬಂದಿದ್ದರು. ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆಯಲ್ಲಿ ಶಿರಸಿಯ ಎಲ್ಲಾ ಠಾಣೆಯ ಸಿಬ್ಬಂದಿಗಳು ಹಾಗೂ ಪಿ.ಎಸ್.ಐ ಗಳು ರಾತ್ರಿ ಗಸ್ತು ಮಾಡುವಂತೆ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಅವರು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಸಹ ಕಳ್ಳರನ್ನು ಹಿಡಿಯಲು ಹೊಂಚು ಹಾಕಿದ್ದರು. ಆದರೆ ದನಗಳ್ಳರ ತಂಡ ಶಿರಸಿ ನಗರದಲ್ಲಿ ಕದ್ದ ದನಗಳನ್ನು ನಗರದ ಹೊರವಲಯದ ಬನವಾಸಿ ರಸ್ತೆಯಲ್ಲಿರುವ ಕೆರೆಕೊಪ್ಪದಲ್ಲಿ ಒಟ್ಟುಗೂಡಿಸಿ ಅಲ್ಲಿಂದ ದೂರದ ಹಾನಗಲ್, ಹಾವೇರಿಗೆ ಸಾಗಿಸುತ್ತಿದ್ದರು ಎನ್ನಲಾಗಿದೆ.

ಇದನ್ನು ಅರಿತ ಪೊಲೀಸರು ರವಿವಾರ ಬೆಳಗಿನ ಜಾವ ಗಸ್ತು ಮಾಡುತ್ತಿದ್ದಾಗ ಅನುಮಾನಾಸ್ಪದವಾಗಿ ಬೊಲೆರೋ ವಾಹನ ಅತಿ ವೇಗದಿಂದ ಬಂದಾಗ ಜೀಪನ್ನು ಅಡ್ಡಹಾಕಿ ತಡೆದಾಗ ಈ ದನಗಳ್ಳತನ ವಿಷಯ ಬೆಳಕಿಗೆ ಬಂದಿದೆ. ಈಗಾಗಲೆ ಪೊಲೀಸರು ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 7 ದನಗಳನ್ನು ಹಾಗೂ ಈ ಕೃತ್ಯಕ್ಕೆ ಬಳಸಲಾಗಿದ್ದ ಸುಮಾರು 4.74 ಲಕ್ಷದ 2 ಬೊಲೆರೋ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

24 ವರ್ಷದ ಅನೀಸ್ ಅಹಮ್ಮದ್ ಮಹಮ್ಮದ್ ಸಲೀಂ ಹಂಚಿನಮನಿ, 26 ವರ್ಷದ ಅಲ್ತಾಪ್ ಮಹಮ್ಮದ್ ಸಲೀಂ ಹಂಚಿನಮನಿ, 23 ವರ್ಷದ ಅಶ್ಪಾಕ್ ಅಹಮ್ಮದ್ ಮಹಮ್ಮದ್ ಸಲೀಂ ಹಂಚಿನಮನಿ ಹಾಗೂ 55 ವರ್ಷದ ಮಹಮ್ಮದ್ ಸಲೀಂ ಹಜರತ ಸಾಬ್ ಹಂಚಿನಮನಿ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ವರಿಷ್ಠಾಧಿಕಾರಿ ಭದ್ರಿನಾಥ್‌ರವರ ನಿರ್ದೇಶನದಂತೆ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಅವರ ಮಾರ್ಗದರ್ಶನದಲ್ಲಿ ಶಿರಸಿ ವೃತ್ತ ನಿರೀಕ್ಷರಾದ ಪ್ರದೀಪ್ ಬಿ. ಯು. ಹಾಗೂ ಶಿರಸಿ ಗ್ರಾಮೀಣ ಠಾಣೆಯ ಪಿ. ಎಸ್. ಐ ನಂಜಾ ನಾಯ್ಕ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

26 ಕೆ.ಜಿ ಗೋಮಾಂಸ ವಶಕ್ಕೆ

ಇದೇ ವೇಳೆ ಇನ್ನೊಂದು ಪ್ರಕರಣದಲ್ಲಿ ಶಿರಸಿಯಲ್ಲಿ ಅಕ್ರಮವಾಗಿ ಬೈಕ್‌ನಲ್ಲಿ ಗೋಮಾಂಸ ಸಾಗಿಸುತ್ತಿದ್ದವನ್ನು ಬಂಧಿಸಿರುವ ಪೊಲೀಸರು 26 ಕೆ.ಜಿ ಗೋಮಾಂಸ ವಶಪಡಿಸಿಕೊಂಡ ಘಟನೆ ನಡೆದಿದೆ.

ವಿಸ್ಮಯ ನ್ಯೂಸ್ ಶಿರಸಿ

Back to top button
Idagunji Mahaganapati Chandavar Hanuman