Focus News
Trending

ಉತ್ತರಕನ್ನಡದ ಇಂದಿನ ಕರೊನಾ ವಿವರ : ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 43 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೇ ವೇಳೆ ಇಂದು ಒಂದು ಸಾವು ಸಂಭವಿಸಿದೆ.

ಅಂಕೋಲಾದಲ್ಲಿ 3, ಕುಮಟಾದಲ್ಲಿ 6, ಹೊನ್ನಾವರ 3, ಭಟ್ಕಳದಲ್ಲಿ 6, ಕಾರವಾರದಲ್ಲಿ 7, ಶಿರಸಿಯಲ್ಲಿ 5, ಸಿದ್ದಾಪುರದಲ್ಲಿ 3, ಯಲ್ಲಾಪುರದಲ್ಲಿ 7 ಹಳಿಯಾಳದಲ್ಲಿ 2, ಜೋಯಿಡಾದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನೊಂದೆಡೆ ಇಂದು, 48 ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೊನ್ನಾವರದಲ್ಲಿ ಒಂದು ಸಾವು ಸಂಭವಿಸಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ‌ ಸಂಖ್ಯೆ 712ಕ್ಕೆ ಏರಿಕೆಯಾಗಿದೆ.

ಅಂಕೋಲಾದಲ್ಲಿ 4 ಹೊಸ ಕೊವಿಡ್ ಕೇಸ್: ಜುಲೈ 12ರಂದು ನೀಡಲು 200 ಡೋಸ್ ಕೋವಿಶಿಲ್ಡ್ ಲಸಿಕೆ

ಅಂಕೋಲಾ ಜುಲೈ 11: ತಾಲೂಕಿನಲ್ಲಿ ರವಿವಾರ 4 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟು ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 35ಕ್ಕೆ ಏರಿಕೆಯಾದೆ. ತಾಲೂಕು ಆಸ್ಪತ್ರೆ (5), ಕಾರವಾರ ಕ್ರಿಮ್ಸ್ (3), ಸಿರ್ಸಿ(1), ಸೇರಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟೂ 9 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕು ಲಕ್ಷಣಗಳುಳ್ಳ ಇತರೆ 26 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ.

ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಸ್ವಾತಂತ್ರ್ಯ ಸ್ಮಾರಕ ಸಭಾಭವನದಲ್ಲಿ ಜುಲೈ 12 ರಂದು ಬೆಳಿಗ್ಗೆ 9.30 ರಿಂದ 200 ಡೋಸ್ ಕೋವಿ ಶೀಲ್ಡ್ ( ಎರಡನೇ ಡೋಸ್ ನವರಿಗೆ ಮಾತ್ರ) ಲಸಿಕೆ ನೀಡಲಾಗುತ್ತಿದೆ ಎ೦ದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button