Focus News
Trending

ಭಾರತೀಯ ತಟರಕ್ಷಕ ಪಡೆಯಿಂದ ಹಲವು ಕಾರ್ಯಕ್ರಮ| ಸಾಮಾಜಿಕ ಕಾರ್ಯಕರ್ತನಿಗೂ ಗೌರವ

ಶಾಲಾ ಪುಟಾಣಿಗಳಿಗೂ ರಾಷ್ಟ್ರಾಭಿಮಾನದ ಸಂದೇಶ

ಅಂಕೋಲಾ :ಆಜಾದೀ ಕಾ ಅಮೃತ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ಭಾರತೀಯ ತಟರಕ್ಷಕ ಪಡೆ ಇತರ ಇಲಾಖೆ, ಸಂಘ ಸಂಸ್ಥೆಗಳು , ಶಾಲಾ ಕಾಲೇಜು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಬೈಕ್ ರ್ಯಾಲಿ, ಸ್ವಾತಂತ್ರ್ಯ ಯೋಧರಿಗೆ ಹಾಗೂ ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನ, ಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮ ಕೈಗೊಂಡು ದೇಶಾಭಿಮಾನ ಪ್ರೇರೇಪಿಸುವ ಕೆಲಸ ಮಾಡುತ್ತಿದೆ.

ಕಾರು ಅಪಘಾತ: ನಿಶ್ಚಿತಾರ್ಥವಾಗಿದ್ದ ಯುವಕ ಸಾವು

ತಾಲೂಕಿನ ಬೆಲೇಕೇರಿಯಲ್ಲಿಯೂ ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಲೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಧ್ವಜಗಳನ್ನು ವಿತರಿಸಿ ರಾಷ್ಟ್ರಧ್ವಜವನ್ನು ಗೌರವಿಸುವದರ ಬಗ್ಗೆ ವಿವರಿಸಿ ಸಿಹಿ ವಿತರಿಸಲಾಯಿತು. ಭಾರತೀಯ ತಟ ರಕ್ಷಕ ಪಡೆಯ ಹಿರಿಯ ಅಧಿಕಾರಿ ಜಿ.ಕೆ.ರೈ ನೇತೃತ್ವದಲ್ಲಿ ಶಾಲೆ – ಗ್ರಾಮದ ಪ್ರಮುಖ ಸ್ಥಳಗಳಿಗೆ ತೆರಳಿ ಸ್ಥಳೀಯ ಮೀನುಗಾರರು ಸೇರಿದಂತೆ ಇತರ ಮತ್ತಿತರ ಪ್ರಮುಖರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಪ್ರಯಕ್ತ ಸಾಂಕೇತಿಕವಾಗಿ ಧ್ವಜ ನೀಡಿ ದೇಶಾಭಿಮಾನದ ಸಂದೇಶ ಸಾರಲಾಯಿತು.

ತಟರಕ್ಷಕ ಪಡೆಯ ಸಬೋರ್ಡಿನೇಟ್ ಆಫೀಸರ್ ಜಿ.ಕೆ ರೈ ನೇತೃತ್ವದಲ್ಲಿ ರೋಶನಕುಮಾರ, ಗೌತಮ್, ಪ್ರಮೋದ ಎಂ, ವೆಂಕಟೇಶ ಸಾಯಿ ಮತ್ತಿತರರಿದ್ದರು., ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ, ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಊರ ಪ್ರಮುಖರು , ಸಾರ್ವಜನಿಕರು ಪಾಲ್ಗೊಂಡಿದ್ದರು. ಕರೊನಾ ಕಷ್ಟ ಕಾಲ ಸೇರಿದಂತೆ ಇತರೆ ಅನೇಕ ಸಂದರ್ಭಗಳಲ್ಲಿ ಶವ ಸಾಗಾಣಿಕೆ,ಅನಾಥ ಶವ ಮತ್ತಿತರ ಶವಗಳ ಸಂಸ್ಕಾರಕ್ಕೆ ಸೇವೆ ಸಹಕಾರ ನೀಡುತ್ತಿರುವ ಕನಸಿಗದ್ದೆಯ ವಿಜಯ ಕುಮಾರ ವ್ಹಾಯ್ ನಾಯ್ಕ ಇವರ ಬಗ್ಗೆ ಕೇಳಿ ತಿಳಿದು, ಅವರ ಸಾಮಾಜಿಕ ಕಳಕಳಿಯನ್ನು ಪ್ರಶಂಸಿದ ಭಾರತೀಯ ತಟರಕ್ಷಕ ಪಡೆಯವರು ಧ್ವಜ ನೀಡಿ ವಿಶೇಷವಾಗಿ ಗೌರವಿಸಿದರು.

ಮಹೇಶ ರಾಮಾ ನಾಯ್ಕ, ನಾಗರಾಜ ಜಾಂಬಳೇಕರ ಮತ್ತಿತರರಿಗೂ ಧ್ವಜ ನೀಡಿ ದೇಶಾಭಿಮಾನದ ಸಂದೇಶ ಸಾರಲಾಯಿತು. ಸ್ಥಳೀಯ ಕರಾವಳಿ ಕಾವಲು ಪಡೆ ಮತ್ತಿತರ ಇಲಾಖೆಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಸೇರಿದಂತೆ ಇತರರು ಭಾರತೀಯ ತಟರಕ್ಷಕ ಪಡೆ ಕಾರ್ಯಕ್ರಮಕ್ಕೆ ಕೈ ಜೋಡಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button