ಹಳಿಯಾಳ: ತಾಲೂಕಿನ ದೇವಸ್ಥಾನವೊಂದರಲ್ಲಿ ನ ಫೆಬ್ರುವರಿ 5 ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಪೊಲೀಸರು ಬೇಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಸುಭಾಷನಗರ ನಿವಾಸಿ ರಾಹುಲ್ ಹನುಮಂತ ಕರಗುಪ್ಪಿಕರ, ದಾಂಡೇಲಿಯ ಪಟೇಲ ನಗರ ನಿವಾಸಿ ಮೌಲಾಲಿ ಸತ್ತಾರಸಾಬ ಜಮಾದಾರ, ಸಾಯಿನಗರ ನಿವಾಸಿ ಮೈಕಲ್ ಅಲಿಯಾಸ್ ಬನ್ನಿ ಅಪ್ಪು ಕಕ್ಕೇರಿ ಎಂದು ತಿಳಿದುಬಂದಿದೆ..
ಬಂಧಿತರಿಂದ 1 ಲಕ್ಷದ 45 ರೂಪಾಯಿ ಮೌಲ್ಯದ ಬಂಗಾರ ಆಭರಣ ಮತ್ತು ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ. ಅಲ್ಲದೆ, ಕಳುವು ಮಾಡಲು ಬಳಸಿದ ಮೋಟಾರ್ ಸೈಕಲ್ ಹಾಗು ಕಬ್ಬಿಣದ ರಾಡ್ ವಶಪಡಿಸಿಕೊಳ್ಳಲಾಗಿದೆ.
ಫೆಬ್ರುವರಿ 5ರ ಮಧ್ಯರಾತ್ರಿ ಇಲ್ಲಿನ ಗ್ರಾಮದ ದುರ್ಗಾದೇವಿ ದೇವಸ್ಥಾನದ ಬಾಗಿಲ ಬೀಗವನ್ನು ಮುರಿದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ದೇವಸ್ಥಾನ ಸಮಿತಿಯ ಅಧ್ಯಕ್ಷರಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್