ಹೊನ್ನಾವರ: ಮಂಗಳವಾರ ಬರುವ ಸಂಕಷ್ಟಿ ಚತುರ್ಥಿಯನ್ನೇ ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಅಂಗಾರಕ ಸಂಕಷ್ಟಿಗೆ ವಿಶೇಷ ಮಹತ್ವವಿದೆ. ಈ ದಿವಸ ಭಗವಾನ್ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥದಲ್ಲಿ ಹೇಳಾಗಿದೆ. ಹೀಗಾಗಿ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯುವ ಗಣೇಶ ಮತ್ತು ಮಂಗಳನ ಆಶೀರ್ವಾದವನ್ನು ಪಡೆಯುತ್ತಾನೆ. ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬ ನಂಬಿಕೆ ಭಕ್ತರದ್ದು.
ಕರೊನಾ ಎರಡನೇ ಅಲೆ ಬಳಿಕ ಎಲ್ಲಾ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲವಾಗಿತ್ತು. ಅದರಂತೆಯೇ ಇಡಗುಂಜಿಯಲ್ಲೂ ಭಕ್ತರ ದರ್ಶನಕ್ಕೆ ಅವಕಾಶ ನಿಷೇಧಿಸಲಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆ ಬಳಿಕ ಭಕ್ತರಿಗೆ ಸರ್ವವಿಧ ಸೇವೆಗೆ ಅವಕಾಶ ನೀಡಲಾಗಿದೆ. ವಿಶೇಷವಾಗಿ ಇಂದು ಅಂಗಾರಕ ಸಂಕಷ್ಠಿ ಬಂದಿರುವುದರಿoದ ಭಕ್ತರ ದಂಡೆ ಇಡಗುಂಜಿಗೆ ಹರಿದುಬರುವ ಸಾದ್ಯತೆಯಿದೆ.
ಅಂಗಾರಕ ಸಂಕಷ್ಟಿಯ ಅಂಗವಾಗಿ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಮುಂಜಾನೆಯಿoದಲೆ ಜನರು ಸಾಗರೋಪಾದಿಯಲ್ಲಿ ಬಂದು ವಿಘ್ನನವಿನಾಷಕನ ದರ್ಶನ ಪಡೆಯುತ್ತಾರೆ. ಹೊನ್ನಾವರ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಸ್ಥಳವಾದ ಶ್ರೀ ಕ್ಷೇತ್ರ ಇಡಗುಂಜಿ ವಿನಾಯಕ ದೇವಸ್ಥಾಕ್ಕೆ ಅಂಗಾರಕ ಸಂಕಷ್ಟಿಯ ನಿಮಿತ್ತ ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಹಣ್ಣು-ಕಾಯಿ, ಪಂಚಕಜ್ಜಾಯ ಗಣಹೋಮ ಸತ್ಯನಾರಾಯಣ ವೃತ ಸತ್ಯಗಣಪತಿ ವ್ರತ, ಇತ್ಯಾದಿ ಸೇವೆ ಸಲ್ಲಿಸಿ ಭಕ್ತರು ಹರಕೆ ಸಲ್ಲಿಸುತ್ತಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್