
ಅಂಕೋಲಾ : ತಾಲೂಕಿನಲ್ಲಿ ಗುರುವಾರ 3 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇಂದು ಸೋಂಕಿನಿಂದ ಗುಣಮುಖರಾದ 5 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು ಒಟ್ಟೂ 60 ಸಕ್ರೀಯ ಪ್ರಕರಣಗಳಿವೆ. 65 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಬೇಲೇಕೇರಿಯ ವ್ಯಕ್ತಿಯೋರ್ವರಲ್ಲಿ ಸೋಂಕಿನ ಲಕ್ಷಣಗಳು ದೃಢಪಟ್ಟಿದ್ದು, ಇವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದ ಮಗನ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ. ಪಟ್ಟಣ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಇನ್ನೊಂದು ಪ್ರಕರಣ ಜ್ವರಲಕ್ಷಣಗಳಿಂದ ಕೂಡಿದ (ಐ.ಎಲ್.ಐ) ಮಾದರಿಯಾಗಿದೆ.
ಕರೊನಾ ವಾರಿಯರ್ಸ ವೈದ್ಯರಿಗೂ ಸೋಂಕು : ತಾಲೂಕಾ ಸರ್ಕಾರಿ ಆಸ್ಪತ್ರೆಯ ಪಿವರ್ ಕ್ಲಿನಿಕ್‍ನಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರೋರ್ವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಈ ಹಿಂದೆಯೂ ಕರೋನಾ ವಾರಿಯರ್ಸಗಳಾದ ಪೊಲೀಸ್ ಸಿಬ್ಬಂದಿ, ಗ್ರಾಮಪಂಚಾಯತ ಪಿ.ಡಿ.ಓ, ವೈದ್ಯ, ನರ್ಸ, ಡಿ ದರ್ಜೆ ನೌಕರರು, ಪುರಸಭೆಯ ಸ್ವಚ್ಛತಾ ಬಂಧು ಮತ್ತು ಇನ್ನೋರ್ವ ನೌಕರ ಸೇರಿದಂತೆ ಕೆಲವರಲ್ಲಿ ಕರೊನಾ ಪಾಸಿಟಿವ್ ಲಕ್ಷಣಗಳು ಕಂಡು ಬಂದಿತ್ತು.
ವಿವಿಧ ಸ್ತರದ ಕರೊನಾ ವಾರಿಯರ್ಸಗಳು ತಮ್ಮ ಜೀವದ ಅಪಾಯದ ಅರಿವಿದ್ದೂ, ಜನತೆಯ ಆರೋಗ್ಯ ಕಾಳಜಿಯಿಂದ ಕರ್ತವ್ಯ ಮತ್ತು ಸೇವೆ ನಿರ್ವಹಿಸುತ್ತಿರುವುದು ಶ್ಲಾಘನೀಯ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.
- ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಶಾಸಕ ದಿನಕರ ಶೆಟ್ಟಿಗೆ ಅನಂತಮೂರ್ತಿ ಮನವಿ
- ದನ ತಪ್ಪಿಸಲು ಹೋಗಿ ಪಲ್ಟಿಯಾದ ಆಟೋ: ಚಾಲಕ ಸಾವು
- ಹಣಕಾಸಿನ ವಿಷಯಕ್ಕೆ ಜಗಳ: ಆಟೋದ ಮೇಲೆ ಟಿಪ್ಪರ್ ಹಾಯಿಸಿ ಓರ್ವನ ಕೊಲೆ
- ಮಾದನಗೇರಿಯ ಶ್ರೀ ಮಹಾಲಸಾ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಕಾರ್ತಿಕ ಸಂಕಷ್ಟಿ, ಗಣಹವನ
- ಬೇಕರಿ ಎದುರು ನಿಲ್ಲಿಸಿಟ್ಟ ಬೈಕ್ ಕದ್ದ ಕಳ್ಳನ ಬಂಧನ