
ಯುವತಿಯ ಬಟ್ಟೆಗೆ ಬೆಂಕಿ
ಅರ್ಧದೇಹ ಸುಟ್ಟಿ ಗಂಭೀರ ಗಾಯ
ಕುಮಟಾ: ಯುವತಿಯೊಬ್ಬಳು ಒಲೆಗೆ ಬೆಂಕಿ ಹತ್ತಿಸುವಾಗ ಅಕಸ್ಮಾತಾಗಿ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ. ಈ ವೇಳೆ ಯುವತಿ ತೊಟ್ಟಿದ್ದ ಬಟ್ಟೆಗೆ ಬೆಂಕಿ ತಾಗಿ, ಯುವತಿಯ ದೇಹಕ್ಕೂ ಆವರಿಸಿದೆ. ಬೆಂಕಿ ತಗುಲಿದ ಪರಿಣಾಮ ಅರ್ಧದೇಹವೇ ಸುಟ್ಟಿಹೋಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವು ಬದುಕಿಬ ಮಧ್ಯೆ ಹೋರಾಡುತ್ತಿದ್ದಾಳೆ.
ಒಲೆಗೆ ಬೆಂಕಿ ಹೊತ್ತಿಸುವ ವೇಳೆ ಸೀಮೆ ಎಣ್ಣೆ ಸುರಿದ ವೇಳೆ, ಇದು ಬಟ್ಟೆಗೂ ತಾಗಿದ್ದು, ಹೀಗಾಗಿ ಬೆಂಕಿ ಏಕಾಏಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಯುವತಿಯ ಇಡೀ ದೇಹವನ್ನು ಆವರಿಸಿ, ಅರ್ಧ ದೇಹ ಸುಟ್ಟಿಹೋಗಿದೆ. ಯುವತಿಯನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಸ್ಮಯ ನ್ಯೂಸ್ ಕುಮಟಾ
- ಸಾಹಿತ್ಯ ಕ್ಷೇತ್ರದಲ್ಲಿ ಅಂಕೋಲೆ ಕೊಡುಗೆ ಅನನ್ಯ: ಕೆ.ವಿ.ನಾಯಕ
- Rain Update: ಹವಾಮಾನ: ಕರಾವಳಿಯಲ್ಲಿ ಮೂರು ದಿನ ಭಾರೀ ಮಳೆ: ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ
- Job Alert: ಕ್ಯಾಶ್ಯೂ ಇಂಡಸ್ಟ್ರಿಸ್ ನಲ್ಲಿ ಉದ್ಯೋಗಾವಕಾಶ: 15 ಸಾವಿರ ಮಾಸಿಕ ವೇತನ
- Cycling: ಕಾರು ಮತ್ತು ಬೈಕ್ ಇದ್ದರೂ ಈ ಅಧಿಕಾರಿ ಪ್ರತಿದಿನ 56 ಕಿಲೋಮೀಟರ್ ಸೈಕಲ್ ರೈಡ್ ಮಾಡುವುದೇಕೆ?
- ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹ: ಶಿರಸಿಯಿಂದ ಕಾರವಾರದ ತನಕ 8 ದಿನಗಳ ಕಾಲ ಪಾದಯಾತ್ರೆ: ಅನಂತಮೂರ್ತಿ ಹೆಗಡೆ ಘೋಷಣೆ