35 ಮಂದಿಗೆ ಹೋಮ್ ಐಸೋಲೇಷನ್
ಸೋಂಕಿತರ ಸಂಖ್ಯೆ 420ಕ್ಕೆ ಏರಿಕೆ
ಕುಮಟಾ: ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಕರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಲೇ ಇದೆ. ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 10 ಕೇಸ್ ದೃಢಪಟ್ಟಿದೆ. ಕುಮಟಾ ತಾಲೂಕಿನ ನೆಹರುನಗರ, ತೋರ್ಕೆ, ಕೂಜಳ್ಳಿ, ಕಾಗಲ್, ಮಿರ್ಜಾನ್, ಕೋರ್ಟ್ ರೋಡ್ ಸಮೀಪದಲ್ಲಿ ಇಂದು ಕರೊನಾ ಸೋಂಕಿತ ಪ್ರಕರಣ ವರದಿಯಾಗಿದೆ.
ನೆಹರುನಗರದ 53 ವರ್ಷದ ಪುರುಷ, ನೆಹರುನಗರದ 26 ವರ್ಷದ ಯುವತಿ, ಕೋರ್ಟ್ ರೋಡ್ ಸಮೀಪದ 40 ವರ್ಷದ ಪುರುಷ, ಕೋರ್ಟ್ ರೋಡ್ ಸಮೀಪದ 70 ವರ್ಷದ ವೃದ್ಧೆ, ಕೋರ್ಟ್ ರೋಡ್ ಸಮೀಪದ 78 ವರ್ಷದ ವೃದ್ಧ, ತೋರ್ಕೆಯ 20 ವರ್ಷದ ಯುವತಿ, ತೋರ್ಕೆಯ 17 ವರ್ಷದ ಯುವತಿ, ಕೂಜಳ್ಳಿಯ 60 ವರ್ಷದ ಪುರುಷ, ಮಿರ್ಜಾನಿನ 45 ವರ್ಷದ ಮಹಿಳೆ, ಕಾಗಲ್‌ನ 75 ವರ್ಷದ ವೃದ್ಧನಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 420ಕ್ಕೆ ಏರಿಕೆಯಾಗಿದೆ. ಅಲ್ಲದೆ, 35 ಮಂದಿಗೆ ಹೋಮ್ ಐಸೋಲೇಷ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ದೃಢಪಟ್ಟ 10 ಜನರೂ ಈ ಹಿಂದೆ ಸೋಂಕು ತಗುಲಿದ್ದವರ ಪ್ರಾರ್ಥಮಿಕ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಗಂಟಲು ದ್ರವವನ್ನು ಪರೀಕ್ಷೆ ಮಾಡಲಾಗಿತ್ತು. ಇದೀಗ ಇವರ ವರದಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568