ಚತುಷ್ಪತ ಕಾಮಗಾರಿಗೆ ಮರಗಳನ್ನು ಕತ್ತರಿಸಲು ಮುಂದಾಗಿರುವ ಎನ್‌ಎಚ್‌ಎಐ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಚಾಟಿ ಬೀಸಿದೆ.
ಉತ್ತರಕನ್ನಡದ ಕುಮಟಾ ಮತ್ತು ಹೊನ್ನಾವರ ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಎಷ್ಟು ಮರಗಳನ್ನು ತೆರವು ಮಾಡಬೇಕು ಎಂದು ಪ್ರಶ್ನಿಸಿದ ನ್ಯಾಯಪೀಠ, ಪರಿಹಾರವಾಗಿ ಎಷ್ಟು ಗಿಡ ನೆಡುತ್ತೀರಿ ಎಂಬ ಬಗ್ಗೆ ಸ್ಪಷ್ಪನೆ ಕೇಳಿದೆ.
ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ 2020ರ ಏಪ್ರಿಲ್ 9ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದರು . ಈ ಪತ್ರದಲ್ಲಿ 169 ಮರ ಕತ್ತರಿಸಿರುವ ಮಾಹಿತಿ ನೀಡಲಾಗಿದೆ. ಈ 169 ಮರಗಳಿಗೆ ಪರಿಹಾರವಾಗಿ ಗಿಡಗಳನ್ನು ನೆಡಲಾಗಿದೆ ಎಂದು ಕೋರ್ಟ್ ಕೇಳಿದೆ. ಎಷ್ಟು ಮರ ಕಡಿಯಲು ಮುಂದಾಗಿದ್ದೀರಿ? ಇದಕ್ಕೆ ದಕ್ಕೆ ಪ್ರತಿಯಾಗಿ ಎಷ್ಟು ಗಿಡವನ್ನು ನೆಡುತ್ತೀರಿ ಎಂಬ ಸರಿಯಾದ ಮಾಹಿತಿಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಬೇಕು ಎಂದು ಆದೇಶ ನೀಡಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್