ಜಿಲ್ಲಾ ನ್ಯಾಯಾಧೀಶರ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹ: ತಹಶೀಲ್ದಾರರವರ ಮೂಲಕ ರಾಜ್ಯಪಾಲರಿಗೆ ಮನವಿ

ಅಂಕೋಲಾ : ಜಾರ್ಖಂಡ್ ರಾಜ್ಯದಲ್ಲಿ ಧನಾಬಾದ್ ಹೆಚ್ಚುವರಿ  ಜಿಲ್ಲಾ ನ್ಯಾಯಾಧೀಶ ಉತ್ತಮ ಚಂದ್ ಅವರನ್ನು  ಹತ್ಯೆ ಮಾಡಿರುವ ಆರೋಪಿಗಳ ಮೇಲೆ ಕ್ರಮ ಜರಗಿಸುವಂತೆ ಅಂಕೋಲಾ ವಕೀಲರ ಬಳಗ ತಹಶೀಲ್ಧಾರವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಕಾನೂನು ವ್ಯವಸ್ಥೆಯಲ್ಲಿ ನ್ಯಾಯಾಧೀಶರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ನ್ಯಾಯಾಧೀಶರಿಗೆ ಹಾಗೂ ವಕೀಲರಿಗೆ ರಕ್ಷಣೆ ನೀಡುವ ಹೊಣೆ ಸರ್ಕಾರದ್ದಾಗಿದೆ.

ಈ ನಿಟ್ಟಿನಲ್ಲಿ ಕಾನೂನು ಜಾರಿಗೆ ತರುವಂತೆ ಅಂಕೋಲಾ ವಕೀಲರ ಬಳಗ ಆಗ್ರಹಿಸುತ್ತದೆ ಎಂದು ಮನವಿಯಲ್ಲಿ ಕೋರಲಾಗಿದೆ.ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಎಲ್ಲಾ ನ್ಯಾಯಾಧೀಶರಿಗೆಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಕೀಲರ ರಕ್ಷಣೆಗೆ ಕಾನೂನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ವಕೀಲರ ಗೆಳೆಯರ ಬಳಗದ  ಉಮೇಶ ನಾಯ್ಕ, ವಿನೋದ ಶಾನಭಾಗ್, ನಾಗಾನಂದ ಬಂಟ್ ಇವರು ತಹಶೀಲ್ದಾರ ಉದಯ ಕುಂಬಾರರವರಿಗೆ ಮನವಿ ಸಲ್ಲಿಸಿದರು.       

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version