ಅಂಕೋಲಾ: ಅಕ್ರಮವಾಗಿ ಮನೆಗಳಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಅಂಕೋಲಾದಲ್ಲಿ ನಡೆದಿದೆ. ಹೌದು, ಯುವಕನೊಬ್ಬ ಪಟ್ಟಣದ ಬಡಾವಣೆಯೊಂದರ ಮನೆಗೆ ಹಿಂಬದಿಯಲ್ಲಿ ನುಗ್ಗಿ, ಒಣಗಿಸಲು ಹಾಕಿದ್ದ ಒಳ ಉಡುಪುಗಳನ್ನು ಕದ್ದಿದ್ದ. ಇವನನ್ನ ಹಿಡಿಯಲು ಹೋದ ವೇಳೆ ತಪ್ಪಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದ.
ಅಲ್ಲಿಂದ ಪರಾರಿಯಾದ ಬಳಿಕ ಮತ್ತೊಂದು ಮನೆಗೆ ನುಗ್ಗಿದ್ದು, ಈತನನ್ನ ಕಂಡ ಮನೆಯಲ್ಲಿದ್ದ ಮಹಿಳೆಯರು ಬೊಬ್ಬೆ ಹಾಕಿದ್ದಾರೆ. ಈ ವೇಳೆ ಅಕ್ಕಪಕ್ಕ ಇದ್ದ ಸ್ಥಳೀಯರು ಜಮಾಯಿಸಿ ಯುವಕನಿಗೆ ಸರಿಯಾಘಿ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಯುವಕ ಉತ್ತರಪ್ರದೇಶ ಮೂಲದವನೆಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಅಂಕೋಲಾ