Big News
Trending

ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ-2021ಕ್ಕೆ ಆಯ್ಕೆ: ಸಾವಿರಕ್ಕಿಂತಲೂ ಹೆಚ್ಚು ವಿಶೇಷ ನಾಣ್ಯಗಳ ಸಂಗ್ರಹ ನೋಡಿ

ಉತ್ತರಕನ್ನಡದ ಯುವಕನಿಗೆ ಒಲಿದ ಪ್ರಶಸ್ತಿ

ಕಾರವಾರ: ಇವರಿಗಿದ್ದ ವಿಶಿಷ್ಠ ಹವ್ಯಾಸ ಇವರನ್ನು ಇದೀಗ ವರ್ಲ್ಡ್ ರೆಕಾರ್ಡ್ ಇಂಡಿಯಾಗೆ ಆಯ್ಕೆ ಮಾಡುವಂತೆ ಮಾಡಿದೆ. ಹೌದು, ಉತ್ತರಕನ್ನಡ ಜಿಲ್ಲೆಯ ಕಾರವಾರದ ವಾಸುದೇವ ಅನಂತ್ ಹರ್ಚಕರ ವರ್ಲ್ಡ್ ರೆಕಾರ್ಡ್ ಇಂಡಿಯಾ 2021ಕ್ಕೆ ಆಯ್ಕೆಯಾಗಿದ್ದಾರೆ. ಇವರ ಬಳಿ ದೇಶ- ವಿದೇಶದ ಸಾವಿರಕ್ಕಿಂತಲೂ ಹೆಚ್ಚು ನಾಣ್ಯಗಳ ಸಂಗ್ರಹವಿದೆ.

ಕಳೆದ ಮೂರು ವರ್ಷಗಳಿಂದ ಇವರು ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದು, ವಿವಿಧ ರೀತಿಯ ನಾಣ್ಯಗಳು ಇವರ ಸಂಗ್ರಹದಲ್ಲಿದೆ. 2006 ರಿಂದ 2020ರ ವರೆಗಿನ ಭಾರತ ಸರ್ಕಾರ ಬಿಡುಗಡೆಗೊಳಿಸಿದ 21 ವಿವಿಧ ರೀತಿಯ ಕಾಯಿನ್‌ಗಳನ್ನು ಸಂಗ್ರಹಿಸಿದ್ದಾರೆ.

ದೇಶದಲ್ಲಿ ಕೆಲವು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಎರಡೂ ಕಾಲು ಆಣೆ, ಕಾಲು ಆಣೆ, ಅರ್ಧ ಆಣೆ, ಕಾಲು ಟಾಂಗಾ, ಅರ್ಧ, ಒಂದು, ಎರಡು, ಮೂರು, 10, 20, 25, 50 ಪೈಸೆಗಳನ್ನು ವಿಶೇಷವಾಗಿ ಮುತುವರ್ಜಿ ವಹಿಸಿ ಸಂಗ್ರಹಿಸಿದ್ದಾರೆ. ಉತ್ತರಕನ್ನಡದ ಯುವಕನೊಬ್ಬ ಈ ಸಾಧನೆ ಮಾಡಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಇವರು ನಗರದ ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಅಂತಿಮ ವರ್ಷ ಓದುತ್ತಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಕಾರವಾರ

Back to top button