Important
Trending

ಮನೆಗೆ ಬಿತ್ತು ಬೆಂಕಿ: 20 ಲಕ್ಷಕ್ಕೂ ಹೆಚ್ಚು ಹಾನಿ

ಹೊನ್ನಾವರ: ತಾಲೂಕಿನ ಕೆಳಗಿನ ಇಡಗುಂಜಿ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ. ಮಾಳ್ಕೋಡ್ ಅಣ್ಣಯ್ಯ ಸುಬ್ರಾಯ ಆಚಾರಿ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮೂಲಕ ಬೆಂಕಿ ತಗುಲಿ ಮನೆಯ ಮೆಲ್ಚಾವಣೆ ಸುಟ್ಟು ಕರಕಲಾಗಿದೆ. ಅಂದಾಜು 20 ಲಕ್ಷದಷ್ಟು ಹಾನಿ ಸಂಭವಿಸಿರುವ ಸಾಧ್ಯತೆ ಇದೆ. ಕೂಡಲೇ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದವರು ಬೆಂಕಿ ನಂದಿಸಲು ನೆರವಾದರು. ಅಗ್ನಿಶಾಮಕದಳದವರು ನಂತರ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button