Big News
Trending

ರಿಕ್ಷಾ ಚಾಲನೆ ಮಾಡಿಕೊಂಡು ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದ ಶಾಸಕ: ಶಾಸಕರನ್ನು ಹಿಂಬಾಲಿಸಿದ ನೂರಕ್ಕೂ ಅಧಿಕ ಆಟೋ!

ಭಟ್ಕಳ: ಶಾಸಕ ಸುನೀಲ್ ನಾಯ್ಕ ಆಟೋ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ಖುದ್ದಾಗಿ ಆಟೋ ಚಲಾಯಿಸಿಕೊಂಡು ಬಂದು ಗಮನಸೆಳೆದರು. ಈ ಮೆರವಣಿಗೆಯಲ್ಲಿ ನೂರಕ್ಕೂ ಅಧಿಕ ಆಟೋ ರಿಕ್ಷಾಗಳು ಭಾಗವಹಿಸದ್ದವು. ಕ್ಷೇತ್ರದ ಆಟೋ ರಿಕ್ಷಾ ಚಾಲಕರಿಗೆ ನಿಲ್ದಾಣದಲ್ಲಿ ಬಿಸಿಲು ಮಳೆಯಿಂದ ಆಶ್ರಯ ಸಿಗಬೇಕೆಂಬ ದೃಷ್ಟಿಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಶಾಸಕ ಸುನೀಲ ನಾಯ್ಕ ಅವರು ಉತ್ತಮ ಗುಣಮಟ್ಟದ ತಗಡಿನ ಮೇಲ್ಚಾವಣಿ ಹೊದಿಕೆ ಮಾಡಿಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ರಿಕ್ಷಾ ಮಾಲಕರು ಹಾಗೂ ಚಾಲಕ ಅಪೇಕ್ಷೆಯಂತೆ ಇಂದು ಶಾಸಕ ಸುನೀಲ ನಾಯ್ಕ ಅವರಿಗೆ ಭವ್ಯ ಸ್ವಾಗತದೊಂದಿಗೆ ಅವರಿಂದ ರಿಕ್ಷಾ ನಿಲ್ದಾಣದ ಮೇಲ್ಚಾವಣಿ ಉದ್ಘಾಟನೆ ನೆರವೇರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕರು, 24 ಗಂಟೆ ದುಡಿಯುವ ಅಟ್ರೋ ಚಾಲಕರಿಗೆ ಗೌರವ ಸಲ್ಲಿಸುವ ಉದ್ದೇಶ ಹಾಗೂ ಜನರ ಸೇವೆ ಮಾಡುವವರಿಗೆ ಕೃತಜ್ಞತೆ ಸಲ್ಲಿಸಲು ನನ್ನದೊಂದು ಅಳಿಲು ಸೇವೆ. ಮುಂದಿನ ದಿನದಲ್ಲಿ ತಾಲೂಕಿನಲ್ಲಿ ಎಲ್ಲೇ ರಿಕ್ಷಾ ನಿಲ್ದಾಣದ ಮೇಲ್ಛಾವಣಿಯ ಅವಶ್ಯಕತೆ ಇದ್ದಲ್ಲಿ ನಿರ್ಮಿಸಿಕೊಡುವಲ್ಲಿ ಸಿದ್ಧನಿದ್ದೇನೆ ಎಂದ ಅವರು ಶಾಸಕನಾಗುವ ಪೂರ್ವದಲ್ಲಿ ಈ ಕಾರ್ಯ ಮಾಡಿಕೊಡಬೇಕೆಂಬ ಇಚ್ಚೆ ಹೊಂದಿದ್ದೆ. ಅದನ್ನು ಈಗ ಶಾಸಕನಾದ ಬಳಿಕ ಹಂತ ಹಂತವಾಗಿ ನಿರ್ಮಿಸುತ್ತಿದ್ದೇನೆ. ನನ್ನ ವಿಧಾನ ಸಭಾ ಕ್ಷೇತ್ರದ 6 ಕಡೆಯಲ್ಲಿ ರಿಕ್ಷಾ ನಿಲ್ದಾಣದ ಮೇಲ್ಚಾವಣಿ ನಿರ್ಮಿಸಿಕೊಟ್ಟಿದ್ದೇನೆ. ಇದರಲ್ಲಿ ಸರ್ಕಾರದ ಯಾವುದೇ ಯೋಜನೆ ಹಣವನ್ನು ಬಳಸಿಕೊಳ್ಳದೆ ನನ್ನ ವೈಯಕ್ತಿಕ ಹಣವನ್ನು ಬಳಸಿ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರುತ್ತಿದ್ದೇನೆ ಎಂದರು.

ಬಾಲ್ಯದಿoದಲೂ ಆಟೋ ಚಾಲಕರ ಮೇಲೆ ನನಗೆ ಪ್ರೀತಿ ಇದೆ. ನಾನು ಶಾಲೆಗೆ ಹೋಗಿ ಮನೆಗೆ ಬರುವ ವೇಳೆ ಹಣ ಪಡೆಯದೆ ಕೆಲವೊಂದು ಆಟೋ ಚಾಲಕರು ನನ್ನನ್ನು ಮನೆಗೆ ತಪುಪಿಸುತ್ತಿದ್ದರು . ಹೀಗಾಗಿ ಆಟೋ ಚಾಲಕರಿಗೆ ಏನಾದರೊಂದು ಸಹಾಯ ಕಲ್ಪಿಸಬೇಕೆಂಬುವುದು ನನ್ನ ಮನಸ್ಸಿನಲಿದೆ. ಅದು ನಾನು ಶಾಸಕನಾದ ಬಳಿಕ ನೆರವೇರುತ್ತಿದೆ. ಈ ನನ್ನ ಸಣ್ಣ ಕೆಲಸಕ್ಕೆ ನೀವು ಇಷ್ಟು ಪ್ರೀತಿಯಿಂದ ನನಗೆ ಭವ್ಯ ಸ್ವಾಗತದೊಂದಿಗೆ ನನ್ನನ್ನು ಬರಮಾಡಿಕೊಂಡಿದ್ದು ತುಂಬಾ ಸಂತೋಷ ತಂದಿದೆ ಎಂದರು.

ಇದರಿoದ ಈಗ ನನ್ನ ಮೇಲೆ ಜವಾಬ್ದಾರಿಗಳು ಕೂಡಾ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ರಿಕ್ಷಾ ಚಾಲಕರಿಗೆ ಯಾವುದೇ ಸಮಸ್ಯೆಯಾದಲ್ಲಿ ಶೀಘ್ರದಲ್ಲಿ ಸ್ಪಂದನೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದೆ ವೇಳೆ ಮುರುಡೇಶ್ವರ ಆಟೋ ರಿಕ್ಷಾ ರಿಕ್ಷಾ ಮಾಲಕರು ಹಾಗೂ ಚಾಲಕ ಸಂಘದಿAದ ಶಾಸಕ ಸುನೀಲ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button