Focus News
Trending

ಮಾರ್ಗಮಧ್ಯೆ 108 ಆಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಮುಂಡಗೋಡ: ತಾಲೂಕಿನ ಹುಮಗುಂದ ಗ್ರಾಮ ಪಂಚಾಯತ ವ್ಯಾಪ್ತಿಯ ಅಗಡಿ ಗ್ರಾಮದ ಲಕ್ಷ್ಮೀ ಸುನೀಲ್ ಲಮಾಣಿ ಎಂಬ 22ವರ್ಷದ ಮಹಿಳೆ ರವಿವಾರ 108 ಅಂಬ್ಯುಲೆನ್ಸ್ ವಾಹನದಲ್ಲಿ ತಾಲೂಕಾ ಆಸ್ಪತ್ರೆಗೆ ಬರುವಾಗ ಜನ್ಮ ನೀಡಿದ್ದಾಳೆ.

ಗರ್ಭಿಣಿಯನ್ನು ಅಗಡಿ ಗ್ರಾಮದಿಂದ 108 ವಾಹನದಲ್ಲಿ ಕರೆ ತರುವಾಗ ಹುನಗುಂದ ಕ್ರಾಸ್ ಸನಿಹದ ಮಾರ್ಗ ಮಧ್ಯದಲ್ಲಿ ಹೆಣ್ಣು ಮಗುವಿಗೆ ಜನನ ನೀಡಿದ್ದಾಳೆ ಮಗುವಿನ ತೂಕ 2ಕೀಲೋ 700ಗ್ರಾಂ ಇದ್ದು ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

108ವಾಹನದ ಚಾಲಕ ಬೀಮಪ್ಪ ಬಾರಕೇರ ಹಾಗೂ ಆಶಾ ಕಾರ್ಯಕರ್ತೆ ನೀಲವ್ವ ಲಮಾಣಿ ಸುರಕ್ಷಿತ ಹೆರಿಗೆಗೆ ಸಹಾಯವಾದರು ಎಂದು ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ ತಿಳಿಸಿದ್ದಾರೆ

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

[sliders_pack id=”1487″]

Back to top button