ಯಲ್ಲಾಪುರ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ತಕ್ತಿಯ ಮೇಲೆ ಚಿರತೆಯೊಂದ ದಾಳಿ ಮಾಡಿ ಗಂಭೀರವಾಗಿ ಗಾಯಮಾಡಿರುವ ಘಟನೆ ತಾಲೂಕಿನ ಚನ್ನೆಹುಕ್ಕಳಿ ಬಳಿ ನಡೆದಿದೆ. ತನ್ನ ಅಡಿಕೆ ತೋಟದಲ್ಲಿ ರೈತ ಕೆಲಸ ಮಾಡುತ್ತಿದ್ದ. ಈ ವೇಳೆ ಏಕಾಏಕಿ ತೋಟಕ್ಕೆ ಬಂದ ಚಿರತೆ ರೈತನ ಮೇಲೇರಗಿ, ತಲೆ, ಮುಖಕ್ಕೆ ಪರಚಿ ಗಾಯಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ರೈತನನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಅಪ್ಪಿ ಬಾಬು ಮರಾಠಿ ಎಂದು ತಿಳಿದುಬಂದಿದೆ.
ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಶಿರೂರು ದುರಂತ: ಮತ್ತೆ ಶೋಧ ಕಾರ್ಯಾಚರಣೆ ಶುರು: ನದಿಯಲ್ಲಿ ಸಿಕ್ಕಿದ್ದೇನು? ಮೂಡಿದ ಹೊಸ ಭರವಸೆ
- ಮಗನಿಗೆ ಸರ್ವಸ್ವ ತ್ಯಾಗ ಮಾಡಿದಳು: ದೊಡ್ಡವನಾದ ಬಳಿಕ ವೃದ್ಧೆ ತಾಯಿಯನ್ನು ಮನೆಯಿಂದ ಹೊರಹಾಕಿದ ಮಗ
- Arecanut: ಅಡಿಕೆ ಧಾರಣೆ: ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಹೇಗಿದೆ?
- ಮುಗ್ದ ಹೆಣ್ಣುಮಕ್ಕಳ ವಂಚಿಸುತ್ತಿದ್ದ ಚಾಲಾಕಿ ಮಹಿಳೆ ಬಂಧನ
- ಮುಖ್ಯಾಧಿಕಾರಿ & ಜ್ಯೂನಿಯರ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಎಲ್ಲಿ ?