ಕಾರವಾರ: ಉತ್ತರಕನ್ನಡದಲ್ಲಿ ಇಂದು 20 ಕರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14,036ಕ್ಕೆ ಏರಿಕೆಯಾಗಿದೆ.
116 ಸಕ್ರೀಯಪ್ರಕರಣಗಳಿವೆ. ಕಾರವಾರ 6, ಭಟ್ಕಳ 1, ಶಿರಸಿ 1, ಸಿದ್ದಾಪುರ 2, ಯಲ್ಲಾಪುರ 5 ಸೇರಿ ಇಂದು ಒಟ್ಟು 29 ಪ್ರಕರಣ ಪತ್ತೆಯಾಗಿದೆ. ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 13 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕುಮಟಾದಲ್ಲಿ ಒಂದು: ಹೊನ್ನಾವರದಲ್ಲಿ ಶೂನ್ಯ
ಕುಮಟಾ: ತಾಲೂಕಿನಲ್ಲಿ ಇಂದು ಕೇವಲ 1 ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶವಾದ ಮೂರೂರಿನ 20 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 1 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,971 ಕ್ಕೆ ಏರಿಕೆಯಾಗಿದೆ. ಹೊನ್ನಾವರದಲ್ಲಿ ಇಂದು ಯಾವುದೇ ಕರೊನಾ ಕೇಸ್ ಕಂಡುಬಂದಿಲ್ಲ.
ಅಂಕೋಲಾದಲ್ಲಿ 3 ಕೋವಿಡ್ ಕೇಸ್:
ಅಂಕೋಲಾ : ತಾಲೂಕಿನಲ್ಲಿ ಭಾನುವಾರ 3 ಹೊಸ ಕೋವಿಡ್ ಕೇಸ್‌ಗಳು ದೃಢಪಟ್ಟಿವೆ. ಹಳ್ಳವಳ್ಳಿ ವ್ಯಾಪ್ತಿಯ 40ರ ಪುರುಷ ಮತ್ತು 13 ಹಾಗೂ 14 ರ ಬಾಲಕರಲ್ಲಿ ಸೋಂಕು ಲಕ್ಷಣಗಳು ಪತ್ತೆಯಾಗಿವೆ. ಹೋಂ ಐಸೋಲೇಶನ್‌ನಲ್ಲಿರುವ 10 ಮಂದಿ ಸಹಿತ 16 ಪ್ರಕರಣಗಳು ಸಕ್ರಿಯವಾಗಿದೆ. 4 ರ‍್ಯಾಟ್ ಮತ್ತು 2 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟೂ 6 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ ಮತ್ತು ಯೋಗೇಶ್ ಮಡಿವಾಳ ಕುಮಟಾ
ಇದನ್ನು ಓದಿ: ಪ್ರಮುಖ ಸುದ್ದಿಗಳು
- ಮರಳು, ಸಿಮೆಂಟ್, ಕ್ಯೂರಿಂಗ್ ಸಮಸ್ಯೆ ಇಲ್ಲ: ಖರ್ಚು ಕಡಿಮೆ: ಜಿಪ್ಸಮ್ ಪ್ಲಾಸ್ಟರ್ ಗಾಗಿ ಸಂಪರ್ಕಿಸಿ
- ಹೆಂಡತಿ ಮನೆ ಎದುರು ಸಾವಿಗೆ ಶರಣಾದ ವಿಚ್ಛೇದಿತ
- ಮುರ್ಡೇಶ್ವರ ಮಹಾರಥೋತ್ಸವಕ್ಕೆ ಸರ್ವರಿಗೂ ಸ್ವಾಗತ
- ಶಾಲಾ ಅಡುಗೆ ಸಿಬ್ಬಂದಿ ನೀರು ತರಲು ಹೋದಾಗ ಕಂಡಿದ್ದೇನು ? ಬಾವಿಯ ಗಡಗಡೆಗೆ ಕಟ್ಟಿದ್ದ ಹಗ್ಗದ ಇನ್ನೊಂದು ತುದಿಯಲ್ಲಿ ನೇತಾಡುತ್ತಿತ್ತು ಮೃತದೇಹ
- ತಾಯಿ ಬಳಿ ಮಾರುಕಟ್ಟೆಗೆ ಹೋಗಿ ಬರುತ್ತೇನೆಂದು ಹೋದವನು ಸಾವಿಗೆ ಶರಣು