Important
Trending

ಜಿಲ್ಲಾಧಿಕಾರಿಗಳು ನೀಡಿದ ಎಚ್ಚರಿಕೆ ಏನು?

ಭಟ್ಕಳ: 70 ದಿನದ ಬಳಿಕ ಭಟ್ಕಳದಲ್ಲಿ ಕೊರೋನಾದಲ್ಲಿ ಸ್ವಲ್ಪ ಹತೋಟಿಗೆ ಬಂದಿದ್ದು, ಕೆಲವು ಚಟುವಟಿಕೆಗಳಿಗೆ ಸಡಿಲಿಕೆ ಮಾಡಿದ್ದೇವೆ. ಅಂಗಡಿ ಮುಂಗಟ್ಟು ತೆರೆಯಲು ಸಹ ನಿಗದಿತ ಸಮಯದ ಅವಕಾಶ ಹೆಚ್ಚು ನೀಡಿದ್ದು ಸಾಕಷ್ಟು ಕ್ರಮಗಳ ನಂತರ ಸಡಿಲಿಕೆ ಮಾಡಿದ್ದೇವೆ. ಇದನ್ನು ಭಟ್ಕಳದ ಜನರು ತಮ್ಮ ಹಕ್ಕು ಎಂದು ತಿಳಿದುಕೊಳ್ಳದೇ ಕೊರೋನಾ ಭಯದೊಂದಿಗೆ ಜೀವ ಹಾಗೂ ಜೀವನ ನಡೆಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಹೇಳಿದರು. ಶಾಸಕರು ಹಾಗೂ ತಾಲೂಕಾಢಳಿತದ ಜೊತೆಗೆ ಸಭೆಯಲ್ಲಿ ಪಾಲ್ಗೊಂಡಿದ್ದು ಸಭೆಯ ಬಳಿಕ ಪತ್ರಕರ್ತರ ಜೊತೆಗೆ ಮಾತನಾಡಿದರು.
‘ಜಿಲ್ಲೆಗೆ ಹೋಲಿಸಿದರೆ ಭಟ್ಕಳದಲ್ಲಿ ಬಹುಪಾಲು ಕೊರೋನಾ ಪ್ರಕರಣ ಕಂಡು ಬಂದಿದೆ. ಆದರೆ ಜನರ ಸಹಕಾರದಿಂದ ಸೋಂಕು ಉಲ್ಬಣವಾಗದಂತೆ ಸಹಕಾರ ನೀಡಿ ಲಾಕ್ ಡೌನ ಪಾಲನೆ ಮಾಡಲಾಗಿದೆ. ಮೊದಲ ಹಂತದಲ್ಲಿ ಬೇರೆ ದೇಶದಿಂದ ಬಂದವರಿಂದ ಸೋಂಕು ಕಂಡು ಬಂದಿದ್ದು ಬಳಿಕ ಮಂಗಳುರಿನ ಫಸ್ಟ ನ್ಯೂರೋ ಆಸ್ಪತ್ರೆಯಿಂದ ಸೋಂಕು ಭಟ್ಕಳಕ್ಕೆ ಬಂದು, ಸಾಕಷ್ಟು ಆತಂಕ ಸೃಷ್ಠಿಸಿತ್ತು. ಆದರೆ ಈಗ ಹೆಚ್ಚಾಗಿ ಮುಂಬೈ ಸೇರಿದಂತೆ ಹೊರ ರಾಜ್ಯದಿಂದ ಬಂದವರು ಕ್ವಾರಂಟೈನಲ್ಲಿದ್ದವರಾಗಿದ್ದರಿಂದ ಸಮುದಾಯಕ್ಕೆ ಹರಡುವ ಭೀತಿ ಇಲ್ಲವಾಗಿದೆ ಎಂದರಲ್ಲದೇ ಪ್ರಕರಣ ಮೊದಲ ಹಂತದಿಂದ ಇಲ್ಲಿಯ ತನಕ ಹತೋಟಿಗೆ ಬರಲು ವೈದ್ಯರಿಂದ ಆಡಳಿತದ ಅಧಿಕಾರಿಗಳ ಶ್ರಮದ ಜೊತೆಗೆ ಸಾರ್ವಜನಿಕರ ಸಹಕಾರವು ಇದೆ ಎಂದರು.
ಪ್ರಾಯೋಗಿಕ ಹಂತದಲ್ಲಿ ಭಟ್ಕಳದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದೇವೆ. ಕೋರೋನಾ ಸೋಂಕಿತರ ಚಿಕಿತ್ಸೆಯ ವಿಚಾರದಲ್ಲಿ ಸಾಕಷ್ಟು ಮಾತುಗಳು ಕೇಳಿ ಬಂದಿದ್ದು ಜನರಲ್ಲಿ ಜಿಲ್ಲೆಯಲ್ಲಿರದ ಮಲ್ಟಿ ಸ್ಪೆಪಾಲಿಟಿ ಆಸ್ಪತ್ರೆಯ ಕೂಗು ಕೇಳಿ ಬಂದಿದೆ. ಅದೃಷ್ಠವಶಾತ್ ನಮ್ಮಲ್ಲಿ ಸಾವಿನ ಸಂಖ್ಯೆ ಇಲ್ಲವಾಗಿದ್ದು, ಕೋರೋನಾ ಸೋಂಕಿತರ ಚಿಕಿತ್ಸೆಗೆ ಮಲ್ಪಿ ಸ್ಪೆಷಾಲಿಟಿ ವ್ಯವಸ್ಥೆ ಬೇಕೆನ್ನುವ ಅವಶ್ಯಕತೆ ಇಲ್ಲವಾಗಿದೆ ಎಂದರು.

ಕಾರವಾರದಲ್ಲಿ ಇಂದಿನಿಂದ ಕೊರೊನಾ ಪರೀಕ್ಷೆಯ ಪ್ರಯೋಗಾಲಯ ಪೂರ್ಣ ಪ್ರಮಾಣದಲ್ಲಿ ಕಾರ್ಯ ಮಾಡಲಿದೆ. ಬೇರೆ ಲ್ಯಾಬ್ ತರಹ ನಮ್ಮಲ್ಲಿಯೂ ಉತ್ತಮ ರೀತಿಯಲ್ಲಿ ಆರಂಭವಾಗಲಿದೆ. ವರದಿಗಾಗಿ ಈ ಹಿಂದೆ ಬೇರೆ ಬೇರೆ ಕಡೆಗಳಲ್ಲಿ ಕಳುಹಿಸಿಕೊಡಬೇಕಾಗಿದ್ದು ಈಗ ಎಲ್ಲಾ ನುರಿತ ವೈದ್ಯರು, ತಜ್ಞರ ತಂಡದಲ್ಲಿ ಪ್ರಯೋಗಾಲಯದಲ್ಲಿ ಕೋರೋನಾ ಸೋಂಕಿತರ ಪತ್ತೆ ಕಾರ್ಯ ನಡೆಸಲಾಗುವುದು ಎಂದ ಅವರು ಭಟ್ಕಳದ ಜನರ ಸಹಕಾರದಿಂದ ಕೋರೋನಾ ತಕ್ಷಣಕ್ಕೆ ನಿಯಂತ್ರಣ ಮಾಡಲು ಸಾಧ್ಯ ವಾಯಿತು. ಮೊದಲ ಹಾಗೂ ಎರಡನೇ ಹಂತದಲ್ಲಿ ತೀವ್ರ ಎಚ್ಚರಿಕೆಯಿಂದ ಕಡಿವಾಣ ಹಾಕಿದ ಹಿನ್ನೆಲೆ ಸಮುದಾಯಕ್ಕೆ ಹರಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
70 ದಿನದಿಂದ ಲಾಕ್ ಡೌನ ಪಾಲನೆ ಮಾಡಿದ ಜನರು ಸಹಕಾರ ನೀಡಿದ್ದಾರೆ. ಸೋಂಕಿತರು ಸಹ ವೈದ್ಯರ ಚಿಕಿತ್ಸೆಗೆ ಸಹಕರಿಸಿ ಗುಣಮುಖರಾಗಿದ್ದಾರೆ. ತಮ್ಮ ಊರಿಗೆ ಬರುವವರ ಬಗ್ಗೆ ಸಾರ್ವಜನಿಕರು ಇನ್ನು ಮುಂದೆ ನಿಗಾ ಅತ್ಯಗತ್ಯವಾಗಿದೆ. ಪ್ರತಿಯೊಬ್ಬರ ಮೇಲೆ ಜಿಲ್ಲಾಢಳಿತ ಅಥವಾ ಪೊಲೀಸ್ ಇಲಾಖೆ ನಿಗಾ ವಹಿಸಿ ಪೊಲೀಸ ಸಿಬ್ಬಂದಿಯನ್ನು ಕಾವಲಿಗೆ ಇಡಲು ಅಸಾಧ್ಯ ಎಂದರು. ಒಂದು ವೇಳೆ ಹೊರ ರಾಜ್ಯದಿಂದ ಬಂದವರು ಸರಕಾರದ ಸೂಚನೆಯ ಉಲ್ಲಂಘನೆ ಮಾಡಿದರೆ ಮೊದಲ ಹಂತದಲ್ಲಿ ಎಚ್ಚರಿಕೆ, ನಂತರ ಸರಕಾರಿ ಕ್ವಾರಂಟೈನನಲ್ಲಿ ಅವರ ನಿಗಾ. ಇದಕ್ಕು ಸಹಕರಿಸದಿದ್ದರೆ ಅಂತಹವರ ಮೇಲೆ ಪ್ರಕರಣ ದಾಖಲಾಗುವದು ಎಚ್ಚರಿಸಿದರು.

ಇನ್ನು ಮುಂದಿನ ದಿನದಲ್ಲಿ ಮಳೆಗಾಲ ಆರಂಭವಾಗಲಿದ್ದು, ಜ್ವರ ಸೇರಿ ಯಾವುದೇ ಲಕ್ಷಣ ಕಂಡು ಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ತಿಳಿಸಬೇಕು. ಜನರಿಗೆ ಸಮಸ್ಯೆಯಾಗದಂತೆ ಇಲಾಖೆ ಸಹಕಾರ ಮಾಡಲಿದೆ. ಮುಂದಿನ ದಿನದಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಪಿಡಿ ಆರಂಭವಾಗಲಿದೆ. ಇನ್ನು ಮುಖ್ಯವಾಗಿ ಭಟ್ಕಳದಲ್ಲಿ ಮದುವೆ ಕಾರ್ಯಕ್ರಮ ನಡೆಸಲು ನೋಡಲ್ ಅಧಿಕಾರಗಳನ್ನು ನೇಮಿಸಲಿದ್ದೇವೆ ನಿಗದಿತ ಎಲ್ಲಾ ಮಾಹಿತಿಯನ್ನು ನೀಡಿ ಜನರು ಹೆಚ್ಚಿನ ನಿಗಾ ವಹಿಸಬೇಕಿದೆ. ಕಾನೂನು ಮೀರಿ ಹೋದಲ್ಲಿ ಮದುವೆ ಕಾರ್ಯಕ್ರಮ ರದ್ದು ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಈ ಸಂಧರ್ಬದಲ್ಲಿ ಸಹಾಯಕ ಆಯುಕ್ತ ಭರತ ಎಸ್., ತಹಸೀಲ್ದಾರ ಎಸ್. ರವಿಚಂದ್ರ, ಡಿವೈಎಸ್ಪಿ ನಿಖಿಲ್ ಬಿ. ಇತರರು ಇದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button