Important
Trending

ಅವಧೂತ ರಮಾನಂದ‌ ಶ್ರೀಗಳು ದೈವೈಕ್ಯ: ಶೋಕ ಸಾಗರದಲ್ಲಿ ಭಕ್ತ ಸಾಗರ

ಕುಮಟಾ: ನಾಡಿನಾದ್ಯಂತ ಅಪಾರ ಶಿಷ್ಯವೃಂದವನ್ನು ಹೊಂದಿದ್ದ ತಾಲೂಕಿನ ದೀವಗಿ ಮಠದ ಅವಧೂತ ಶ್ರೀ ರಮಾನಂದ ಸ್ವಾಮೀಜಿ ( 95 ) ಶನಿವಾರ ರಾತ್ರಿ ರಾಮೈಕ್ಯರಾದರು.

ಶ್ರೀಗಳು ಇತ್ತೀಚೆಗೆ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಶ್ರೀಗಳನ್ನು ಚಿಕಿತ್ಸೆಗಾಗಿ ಕುಮಟಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಮೈಕ್ಯರಾದರು.
ಅವಧೂತರು ಇಹಲೋಕ ತ್ಯೆಜಿಸಿದ ಸುದ್ದಿಯಿಂದ ಮಠದ ಅಪಾರ ಶಿಷ್ಯ ವೃಂದ ಶೋಕ ಸಾಗರದಲ್ಲಿ‌ ಮುಳುಗಿದೆ.

ಶ್ರೀಗಳು ಮಾರುತಿಯನ್ನು ಪ್ರತಿದಿನವೂ ಪೂಜಿಸುತ್ತಾ, ಶ್ರೀಧರರ ಪಾದುಕೆಗಳನ್ನು ಪ್ರೀತ್ಯಾದರಗಳಿಂದ ಸೇವೆ ಮಾಡುತ್ತಿದ್ದರು. ಮಠಕ್ಕೆ ಬಂದ ಭಕ್ತರನ್ನು ಉದ್ದರಿಸುತ್ತ ಭಕ್ತರು ನೀಡಿದ ಭಿಕ್ಷಗಳನ್ನು ಪಡೆಯುತ್ತ, ಭಕ್ತರನ್ನು ಹರಸುತ್ತಿದ್ದರು. ಸದ್ಗುರು ಶ್ರೀ ರಾಮಾನಂದಾವಧೂತ ಸ್ವಾಮೀಜಿಯವರ ಮಹಿಮೆ ಅಪಾರ ಎಂಬುದು ಭಕ್ತ‌ಸಮೂಹದ ಅಭಿಪ್ರಾಯ.

ಶ್ರೀಗಳ ಪೂರ್ವಾಶ್ರಮದ ಹೆಸರು ರಾಮಚಂದ್ರ ಹೆಗಡೆ, ಸದ್ಗುರು ಶ್ರೀಧರ ಸ್ವಾಮೀಜಿಯವರ ಶಿಷ್ಯರಲ್ಲಿ ಒಬ್ಬರು. ಅವರು ನಾರಾಯಣ ಹೆಗಡೆ ಮತ್ತು ಶ್ರೀಮತಿ ಲಕ್ಷ್ಮಿ ಹೆಗಡೆ ದಂಪತಿಗೆ ಉತ್ತರ ಕನ್ನಡ ಜಿಲ್ಲೆಯ ತಟ್ಟಿಕೈ ಗ್ರಾಮದಲ್ಲಿ ಜನಿಸಿದ್ದು, ಬಾಲ್ಯದಿಂದಲೂ ಧಾರ್ಮಿಕ ವಿಷಯದ ಬಗ್ಗೆ ಆಸಕ್ತಿ ಹೊಂದಿದ್ದರು.

ವಿಸ್ಮಯ‌ ನ್ಯೂಸ್ ಕುಮಟಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button