Canara Excellence PU college: ಸುಂದರ ಪರಿಸರದಲ್ಲಿ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು

ಕುಮಟಾ: ಕರಾವಳಿ ಕಡಲತೀರದ ಸುಂದರ ಪರಿಸರದಲ್ಲಿ, ಸದ್ಗುರು ಶ್ರೀಧರ ಸ್ವಾಮಿಗಳು ಓಡಾಡಿದ ಪುಣ್ಯಕ್ಷೇತ್ರ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಕ್ಷೇತ್ರವೂ ಆದ ಗೋರೆಯಲ್ಲಿ ತಲೆ ಎತ್ತಿದೆ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು.. ( Canara Excellence PU college) ” ಕೆನರಾ ಎಕ್ಸಲೆನ್ಸ್” ಪದವಿ ಪೂರ್ವ ಕಾಲೇಜನ್ನು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದೊಂದಿಗೆ ಪ್ರಾರಂಭವಾಗಿದೆ. ಪ್ರತಿವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ತಕ್ಷಣ ನಮ್ಮ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಪಿ.ಯು.ಸಿ. ವ್ಯಾಸಂಗಕ್ಕಾಗಿ ಅನ್ಯ ಜಿಲ್ಲೆಗಳತ್ತ ಮುಖಮಾಡಬೇಕಾದ ಅನಿವಾರ್ಯತೆ ಇನ್ನೂ ಇದೆ.

canara excellence pu college photos

ಹೀಗಾಗಿ ಜಿಲ್ಲೆಯಲ್ಲಿ ವಸತಿ ಸಹಿತ ಶಿಕ್ಷಣದ ಕೊರತೆಯನ್ನು ತುಂಬುವ ಪ್ರಾಮಾಣಿಕ ಪ್ರಯತ್ನವೊಂದನ್ನು ಕುಮಟಾ ಕೆನರಾ ಹೆಲ್ತ್ ಕೇರ್‌ನ ಪ್ರಸಿದ್ಧ ಸ್ತ್ರೀರೋಗ ತಜ್ಞ ಡಾ. ಜಿ.ಜಿ. ಹೆಗಡೆಯವರು ತಮ್ಮ ತಂದೆಯವರಾದ ದಿ|| ಜಿ. ಎನ್. ಹೆಗಡೆ ಟ್ರಸ್ಟ್ನ ಮೂಲಕ ನಡೆಸಿದ್ದಾರೆ. ಭಾರತೀಯ ಸಂಸ್ಕೃತಿಯ ಹಿನ್ನೆಲೆಯುಳ್ಳ ಸಂಸ್ಕಾರಯುತವಾದ ಉತ್ತಮ ಗುಣಮಟ್ಟದ ಆಧುನಿಕ ವಸತಿಸಹಿತ ಪಿ.ಯುಸಿ. ಶಿಕ್ಷಣವನ್ನು ಪಡೆಯುವ ಅಪೂರ್ವ ಅವಕಾಶ, ಈ ವರ್ಷದಿಂದಲೇ ಜಿಲ್ಲೆಯ ಮದ್ಯವರ್ತಿ ಸ್ಥಳವಾದ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ತಮಗೀಗ ದೊರೆತಿದೆ.

( Canara Excellence PU college) ನೂತನ ಸುಸಜ್ಜಿತ ಕಟ್ಟಡದಲ್ಲಿ ಕಲಿಕೆಗೆ ಪೂರಕವಾದ ವಿಶಾಲ ತರಗತಿ ಕೋಣೆಗಳು, ಸ್ಮಾರ್ಟ್ ಕ್ಲಾಸ್ ಸೌಲಭ್ಯ, ಸುಸಜ್ಜಿತ ಗ್ರಂಥಾಲಯ, ಆಧುನಿಕ ಪ್ರಯೋಗಾಲಯ, ಯೋಗ, ಧ್ಯಾನ, ಕ್ರೀಡಾ ಸೌಕರ್ಯ, ಉಚಿತ ವೈ- ಪೈ ವ್ಯವಸ್ಥೆಯಂತಹ ಸಕಲ ಆಧುನಿಕ ಸೌಕರ್ಯಗಳು ಲಭ್ಯವಿದೆ.

ಒತ್ತಡರಹಿತ ಸಹಜ ಕಲಿಕಾ ವಾತಾವರಣ, ಪ್ರತಿಭಾವಂತ ಅನುಭವೀ ಉಪನ್ಯಾಸಕ ವೃಂದದವರಿoದ ಬೋಧನೆ, ವಿದ್ಯಾರ್ಥಿಗಳ ಕಲಿಕೆಯ ಕುರಿತು ವೈಯಕ್ತಿಕ ಕಾಳಜಿ, ನಿರಂತರ ಪರೀಕ್ಷೆ ಹಾಗೂ ಮೌಲ್ಯಮಾಪನ, ಜೆ.ಇ.ಇ. ಹಾಗೂ ನೀಟ್, ಕೆ.ಇ.ಇ.ಟಿ, ಸಿ.ಎ, ಸಿ.ಎಸ್ ಫೌಂಡೇಶನ್ ಕೋರ್ಸುಗಳ ತರಬೇತಿ ನೀಡಲಾಗುವುದು.

ಕಾಲಕಾಲಕ್ಕೆ ಪಾಲಕರ ಸಭೆ, ಪ್ರತಿಭಾವಂತ ವಿದ್ಯಾರ್ಥಿಗಳ ವಿಶೇಷ ಶಿಶ್ಯವೇತನ, ಕೈಗೆಟಕುವ ಬೋಧನಾ ಶುಲ್ಕ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ, ಸ್ಥಳೀಯ ವಿದ್ಯಾರ್ಥಿಗಳಿಗೆ ವಾಹನದ ಸೌಕರ್ಯಗಳು ಈ ಸಂಸ್ಥೆಯ ವೈಶಿಷ್ಟ್ಯಗಳಾಗಿವೆ. ಆಸಕ್ತರು ಕೂಡಲೇ ಸಂಪರ್ಕಿಸಿ.

Canara Excellence pu College Contact Number

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಡಾ|| ಜಿ.ಜಿ.ಹೆಗಡೆ ಅಧ್ಯಕ್ಷರು, “ಕೆನರಾ ಎಕ್ಸಲೆನ್ಸ್” ಕಾಲೇಜು ಗೋರೆ ಕುಮಟಾ: 9448206380, ಶ್ರೀ ಎಮ್. ಕೆ. ಹೆಗಡೆ ವ್ಯವಸ್ಥಾಪಕರು: 9482187225, ಶ್ರೀ ಡಿ. ಎನ್, ಭಟ್ ನಿವೃತ್ತ ಪ್ರಾಂಶುಪಾಲರು: 9449477473

ವಿಸ್ಮಯ ನ್ಯೂಸ್, ಕುಮಟಾ

Exit mobile version