Important
Trending

22,800 ಲಸಿಕೆ ನಾಳೆ ಉತ್ತರಕನ್ನಡದಲ್ಲಿ ಲಭ್ಯ: ಎಲ್ಲೆಲ್ಲಿ ವ್ಯಾಕ್ಸಿನೇಷನ್ ನಡೆಯಲಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು ನಾಳೆ ಅತಿಹೆಚ್ಚು ಪ್ರಮಾಣದ ಲಸಿಕೆ ಲಭ್ಯವಿದೆ. ಎಲ್ಲಾ ತಾಲೂಕುಗಳಿಗೂ 22,800 ವ್ಯಾಕ್ಸಿನ್ ಹಂಚಿಕೆ ಮಾಡಲಾಗಿದೆ. ಅಂಕೋಲಾ 2 ಸಾವಿರ, ಭಟ್ಕಳ 3,500, ಹಳಿಯಾಳ 1,200, ಹೊನ್ನಾವರ 2,500, ಜೋಯ್ಡಾದಲ್ಲಿ 800 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ©Copyright reserved by Vismaya tv    

ಅಲ್ಲದೆ, ಕಾರವಾರದಲ್ಲಿ 2 ಸಾವಿರ, ಮುಂಡಗೋಡ 1,200, ಕುಮಟಾ 2,800, ಶಿರಸಿ 2,800, ಸಿದ್ದಾಪುರ 1,300 , ಯಲ್ಲಾಪುರ 1,200, ದಾಂಡೇಲಿ 1 ಸಾವಿರ, ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ವ್ಯಾಕ್ಸಿನ್ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂಕೋಲಾದಲ್ಲಿ ಎಲ್ಲೆಲ್ಲಿ?

ಅಂಕೋಲಾ : ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಅಗಸ್ಟ್ 20 ರ ಶುಕ್ರವಾರ ಒಟ್ಟೂ 2000 ಕೋವಿಡ್ ಲಸಿಕೆಗಳು ಲಭ್ಯವಿದೆ. ಕಾಪಿರೈಟ್ ವಿಸ್ಮಯ ಟಿ.ವಿ ಭಾವಿಕೇರಿ, ಉಳುವರೆ,ಅರ‍್ಸಾ ಹಾಗೂ ಪಟ್ಟಣದ ಸ್ವಾತಂತ್ರ‍್ಯ ಸಂಗ್ರಾಮ ಸಂಗ್ರಾಮ ಸ್ಮಾರಕ ಭವನಗಳಲ್ಲಿ ತಲಾ 300ಡೋಸ್ ಲಸಿಕೆಗಳು ಲಭ್ಯವಿದ್ದು ಅವುಗಳಲ್ಲಿ ಪ್ರಥಮ ಡೋಸ್ (140),ದ್ವಿತೀಯ ಡೋಸ್ ( 140) ಹಾಗೂ ರ‍್ಭಿಣಿಯರು ಮತ್ತು ಬಾಣಂತಿಯರಿಗೆ (20 ) ಡೋಸ್ ಕಾಯ್ದಿರಿಸಲಾಗಿದೆ.

‘ ಅಂಬಾರಕೋಡ್ಲ, ಗುಂಡಬಾಳ, ಸುಂಕಸಾಳ, ರಾಮನಗುಳಿ ವ್ಯಾಪ್ತಿಯಲ್ಲಿ ತಲಾ 200 ಡೋಸ ಲಸಿಕೆಗಳು ಲಭ್ಯವಿದ್ದು ಅವುಗಳಲ್ಲಿ 1ನೇ ಡೋಸ್ ಗೆ (90), ದ್ವಿತೀಯ ಡೋಸ್ ಗೆ (90) ಹಾಗೂ ರ‍್ಭಿಣಿಯರು ಮತ್ತು ಬಾಣಂತಿಯರಿಗೆ ( 20) ಡೋಸ್ ಲಸಿಕೆ ಕಾಯ್ದಿರಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕರ‍್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿರಸಿಯಲ್ಲಿ ಎಲ್ಲೆಲ್ಲಿ?

ತಾಲೂಕಿನಲ್ಲಿ ಒಟ್ಟು 2,650 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಕಾಪಿರೈಟ್ ವಿಸ್ಮಯ ಟಿ.ವಿ ಸಾಲ್ಕಣಿಯಲ್ಲಿ 250, ಮೆಣಸಿ 100, ಬನವಾಸಿಯಲ್ಲಿ 300, ಹೆಗಡೆಕಟ್ಟಾದಲ್ಲಿ 300, ಕಕ್ಕಳ್ಳಿ 200, ಹುಲೇಕಲ್ 200, ಬಿಸಲಕೊಪ್ಪ 200, ಸುಗಾವಿ 200, ಸಿಂಪಿಗಲ್ಲಿ ರುದ್ರ ದೇವಚರ ಮಠದಲ್ಲಿ 200, ದಾಸನಕೊಪ್ಪ 200, ರೇವಣಕಟ್ಟಾ 200 ಡೋಸ್ ಲಸಿಕೆ ಲಭ್ಯವಿದೆ. ಮೊದಲ ಮತ್ತು 2ನೇ ಡೋಸ್ ಲಸಿಕೆ ಪಡೆಯುವವರು ಇದರ ಸೌಲಭ್ಯ ಪಡೆದುಕೊಳ್ಳಬಹುದು.

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಪ್ರಮುಖ ಸುದ್ದಿಗಳು: ಇದನ್ನೂ ಓದಿ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button