Important
Trending

ಉತ್ತರಕನ್ನಡದ ಇಂದಿನ ಕೋವಿಡ್ ವಿವರ: ಹೊನ್ನಾವರ ತಾಲೂಕಿನಲ್ಲಿ ನಾಳೆ ಎಲ್ಲೆಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯಲಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 43 ಕೋವಿಡ್ ಕೇಸ್ ದಾಖಲಾಗಿದ್ದು ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ. ಕಾರವಾರ 11, ಅಂಕೋಲಾ 8, ಕುಮಟಾ 3, ಹೊನ್ನಾವರ 4, ಭಟ್ಕಳ 10, ಶಿರಸಿ 3, ಸಿದ್ದಾಪುರ 1, ಯಲ್ಲಾಪುರ 3 ಕೇಸ್ ದಾಖಲಾಗಿದೆ. ಇದೇ ವೇಳೆ, ಇಂದು ವಿವಿಧ ಆಸ್ಪತ್ರೆಯಿಂದ 55 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ©Copyright reserved by Vismaya tv

ಹೊನ್ನಾವರ ತಾಲೂಕಿನಲ್ಲಿ ಎಲ್ಲೆಲ್ಲಿ ಎಷ್ಟು ಡೋಸ್ ವ್ಯಾಕ್ಸಿನ್ ಇದೆ ನೋಡಿ?

ಹೊನ್ನಾವರ ತಾಲೂಕಿನಲ್ಲಿ ನಾಳೆ 6 ಸಾವಿರ ಕೋವಿಶೀಲ್ಡ್ ವಿತರಿಸಲು ತಯಾರಿ ನಡೆದಿದೆ. ಹೊನ್ನಾವರ ಪಟ್ಟಣ ಪಂಚಾಯತ ಸಭಾಭವನದಲ್ಲಿ 200 ಜನರಿಗೆ ಲಸಿಕೆ ನೀಡಲಾಗುವುದು. ತಾಲೂಕಾ ಆಸ್ಪತ್ರೆಯ ವತಿಯಿಂದ ಮಾರ್ಥೋಮಾ ಶಾಲೆಯಲ್ಲಿ ನೀಡಲಾಗುತಿತ್ತು . ಆದರೆ, ಶಾಲೆ ಆರಂಭವಾಗಿರುವ ಹಿನ್ನಲೆಯಲ್ಲಿ ಹಳೆಯ ಡಿ ಎಫ್ ಓ ಕಚೇರಿ ಕಟ್ಟಡದಲ್ಲಿ ನೀಡಲಾಗುತ್ತಿದೆ. ಉಳಿದಂತೆ ಕಡತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1000 ಡೋಸ್ ಬಂದಿದ್ದು, ಈ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಂದಾವರ ಮತ್ತು ಹೋದ್ಕೆ ಶಿರೂರ ಭಾಗದಲ್ಲಿ ಕೇಂದ್ರಗಳನ್ನು ತೆರೆದು ನೀಡಲಾಗುತ್ತದೆ, ©Copyright reserved by Vismaya tv

ಹಳದೀಪುರ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ 600 ಡಓಸ್ ನೀಡಲಾಗಿದೆ, ಮಾದಿಕೋಟ್ಟಿಗೆ, ಅಪ್ಪಿಕೆರೆ, ಕರ್ಕಿ ಈ ಮೂರು ಕಡೆಗಳಲ್ಲಿ ತಲಾ ಎರಡನೂರು ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ. ಕಾಪಿರೈಟ್ ವಿಸ್ಮಯ ಟಿ.ವಿ ಸಾಲಕೋಡ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ 600 ವ್ಯಾಕ್ಸಿನ್ ಬಂದಿದ್ದು, ಇದನ್ನು ದರ್ಬೆಜಡ್ಡಿ ಮತ್ತು ಗುಡ್ಡೆಭಾಳದಲ್ಲಿ ತಲಾ ಮೂರು ನೂರರಂತೆ ನೀಡಲಾಗುವುದು, ಮಂಕಿ ಪ್ರಾಥಮಿಕ ಕೇಂದ್ರ ವ್ಯಾಪ್ತಿಗೆ ಬಂದ 600 ಲಸಿಕೆಯಲ್ಲಿ ನೆಲವಕ್ಕಿ, ಹೆಬ್ಬಾರ ಹಿತ್ಲ, ಮುಗಳಿ ಈ ಭಾಗದವರಿಗಾಗಿ ಗುಣವಂತೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯಲಿದೆ.

ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 500 ಲಸಿಕೆ ಹಂಚಿಕೆಯಾಗಿದ್ದು, ಇದನ್ನು ಕೆಳಗಿನೂರು, ಅಪ್ಸರಕೊಂಡ, ಕಾಸರಕೋಡ ಭಾಗದಲ್ಲಿ ನೀಡಲಾಗುತ್ತದೆ, ಹೊಸಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 500 ವಿತರಣೆಯಾಗಿದ್ದು, ಅದರಲ್ಲಿ 300 ಹೊಸಾಡ , ಮಾವಿನಕುರ್ವಾ ಭಾಗಕ್ಕೆ , 300 ಜಲವಳ್ಳಿ ಭಾಗಕ್ಕೆ ನೀಡಲಾಗುತ್ತದೆ, ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯಾಕ್ಸಿನ್ ಬಂದಿದ್ದು ಅದನ್ನು ಹಿರೆಬೈಲ್ ಮತ್ತು ಕಡಗೇರಿಯಲ್ಲಿ ತಲಾ ಎರಡು ನೂರರಂತೆ ನೀಡಲಾಗುತ್ತಿದೆ.

ಗೇರುಸೋಪ್ಪಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 600 ವ್ಯಾಕ್ಸಿನ್ ಬಂದಿದ್ದು, ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕೆಂದು ಕೋರಲಾಗಿದೆ. ಕಾಪಿರೈಟ್ ವಿಸ್ಮಯ ಟಿ.ವಿ ಅಲ್ಲದೆ, ಹೆಚ್ಚಿನ ಮಾಹಿತಿಗಾಗಿ ತಮ್ಮ ತಮ್ಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯಕೇಂದ್ರವನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.

ಶಿರಸಿಯಲ್ಲಿ ಎಲ್ಲೆಲ್ಲಿ ಲಸಿಕೆ ಲಭ್ಯ:

ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300, ಇಕ್ರಾ ಎಜುಕೇಶನ್ ಟ್ರಸ್ಟ್ ಮುಸ್ಲಿಂ ಗಲ್ಲಿಯಲ್ಲಿ 900, ಕೊಳಗಿಬೀಸ್ 500, ವಡ್ಡಳ್ಳಾ 350, ಅಂಡಗಿ 350, ಕುಳವೆ 500, ಮೇಲಿನ ಓಣಿಕೇರಿ 500, ದೇವನಳ್ಳಿ 700, ಎಸಳೆ 400, ರಾಮನಬೈಲಿನಲ್ಲಿ 500, ಕೆಎಂಎಫ್ ಅಗಸೇಬಾಗಿಲು 400, ಕಾಯಿಗುಡ್ಡೆಯಲ್ಲಿ 300, ಬೈರುಂಭೆಯಲ್ಲಿ 600, ತಿಗಣಿ 300, ಮಧುರವಳ್ಳಿಯಲ್ಲಿ 300 ಡೋಸ್ ಲಸಿಕೆ ಲಭ್ಯವಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button