Follow Us On

Google News
Focus NewsImportant
Trending

ಚಾಲಕನ ನಿಯಂತ್ರಣ ತಪ್ಪಿ ಅವಾಂತರ: ಸೇಬು ತುಂಬಿದ ಲಾರಿ ಪಲ್ಟಿ

ದೆಹಲಿಯಿಂದ ಸೇಬು ತುಂಬಿಕೊoಡು ಮಂಗಳೂರ ಕಡೆಗೆ ಸಂಚರಿಸುತ್ತಿದ್ದ ಲಾರಿ

ಹೊನ್ನಾವರ; ಸೇಬು ತುಂಬಿದ ಲಾರಿ ಪಲ್ಟಿಯಾದ ಘಟನೆ ಪಟ್ಟಣದ ಗೇರುಸೊಪ್ಪಾ ವೃತ್ತದ ಬಳಿ ನಡೆದಿದೆ. ದೆಹಲಿಯಿಂದ ಸೇಬು ತುಂಬಿಕೊoಡು ಮಂಗಳೂರ ಕಡೆಗೆ ಸಂಚರಿಸುತ್ತಿದ್ದ ಲಾರಿ , ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೆಳಗಿನಜಾವ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಈ ಘಟನೆಯಲ್ಲಿ ಲಾರಿ ಚಾಲಕನ ಕಾಲಿಗೆ ಗಾಯವಾಗಿದ್ದು , ಕ್ಲೀನರ್‌ಗೆ ಮುಖಕ್ಕೆ ಗಾಯವಾಗಿದೆ.

ಹನಿ ನಿರಾವರಿ ಮತ್ತು ತುಂತುರು ನೀರಾವರಿ ಘಟಕ ಅಳವಡಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ: ಸದುಪಯೋಗ ಪಡೆದುಕೊಳ್ಳುವಂತೆ ಮನವಿ

ಲಾರಿ ಬಿದ್ದ ರಭಸಕ್ಕೆ ಸೇಬು ತುಂಬಿದ ಬಾಕ್ಸ್ ಒಡೆದು ಹೋಗಿ ರಸ್ತೆಯ ಪಕ್ಕಕ್ಕೆ ಲಾರಿಯಲಿದ್ದ ಸೇಬು ಬಾಕ್ಸ್ಗಳು ಬಿದ್ದಿದ್ದವು. ಕೆಳಗೆ ಬಿದ್ದಿದ್ದ ಎಲ್ಲಾ ಸೇಬುಗಳನ್ನು ಸಂಗ್ರಹಿಸಿ ಲಾರಿಯನ್ನು ಮೇಲೆತ್ತಲಾಗಿದೆ, ಹೊನ್ನಾವರ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸ್ಥಳದಲ್ಲಿ ಪದೆ ಪದೆ ಇಂತಹ ಘಟನೆಗಳು ಸಂಭವಿಸುತ್ತಿದ್ದರು ಸಂಬoಧಪಟ್ಟ ಅಧಿಕಾರಿಗಳು ಗಮನ ಹರಿಸದೆ ಇರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

hitendra naik

Back to top button