ಮೀನು ತುಂಬಿದ ಕಂಟೇನರ್ ಲಾರಿ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ: ಸಿಲುಕಿಕೊಂಡಿದ್ದ ಲಾರಿ ಚಾಲಕನ ರಕ್ಷಣೆ: ಲಾರಿಯಡಿ ಸಿಲುಕಿ ಬೈಕ್ ಜಖಂ

ಅಂಕೋಲಾ: ಎಪಿಎಂಸಿ ಮೈದಾನದ ಪಕ್ಕದ ಪೆಟ್ರೋಲ್ ಪಂಪ್ ಎದುರು ಮೀನು ತುಂಬಿದ ಕಂಟೇನರ್ ಲಾರಿ ಹಾಗೂ ಸಾರಿಗೆ ಸಂಸ್ಥೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಲಾರಿ ಪಲ್ಟಿಯಾಗಿ ಮೀನು ಚೆಲ್ಲಾಪಿಲ್ಲಿಯಾಗಿದೆ. ಅಂಕೋಲಾದಲ್ಲಿ ಬುಧವಾರ ನಡೆದ ಈ ರಸ್ತೆ ಅಪಘಾತಕ್ಕೆ ರಾಂಗ್ ರೂಟ್ ನಲ್ಲಿ ಬಂದ ಬಸ್ ಡ್ರೈವರನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ.

ಕೇರಳದಿಂದ ಗೋವಾಕ್ಕೆ ಮೀನು ಸಾಗಿಸುತ್ತಿದ್ದ ಬೃಹತ್ತ ಗಾತ್ರದ ಕಂಟೇನರ್ ಲಾರಿಯನ್ನು ಚಾಲಕ ಅಂಕೋಲಾದಿoದ ಕಾರವಾರ ಮಾರ್ಗವಾಗಿ ಸರಿಯಾದ ಪಥದಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ, ಹುಬ್ಬಳ್ಳಿ ಕಾರವಾರ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.

ಚಾಲಕನ ಅಜಾಗರೂಕತೆಯಿಂದ, ಅಂಕೋಲಾ ಬಸ್ ನಿಲ್ದಾಣ ಮಾರ್ಗವಾಗಿ ತೆರಳುವ ವೇಳೆ, ಎಡಬದಿಯ ದ್ವಿಪತ ರಸ್ತೆಯಲ್ಲಿ ಚಲಿಸದೇ,ವಿರುದ್ಧ ದಿಕ್ಕಿನಲ್ಲಿ ಚಲಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ.

ಅಪಘಾತವನ್ನು ತಪ್ಪಿಸಲು ಲಾರಿ ಚಾಲಕ ಮುಂದ ದಂತ್ತಿದ್ದು,ಕೊನೆಗೂ ಗಾಡಿ ನಿಯಂತ್ರಣಕ್ಕೆ ಬರದೇ ಹೆದ್ದಾರಿ ಅಂಚಿನ ಇಳಿಜಾರಿನಲ್ಲಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಕಂಟೇನರ್ ಬಾಡಿ ಸಂಪೂರ್ಣ ಕಿತ್ತು ಬಿದ್ದಿದ್ದು ಲಕ್ಷಾಂತರ ರೂ ಮೌಲ್ಯದ ಮೀನು ಚೆಲ್ಲಾಪಿಲ್ಲಿ ಆಗಿದೆ.ಇದೇ ವೇಳೆ ಹೆದ್ದಾರಿ ಅಂಚಿಗೆ ನಿಲ್ಲಿಸಿಟ್ವ ಬೈಕೊಂದು ಲಾರಿ ಅಡಿ ಸಿಲುಕಿ ಜಖಂಗೊಂಡಿದೆ.ಕಂಟೈನರ್ ಲಾರಿಯ ಒಂದು ಭಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕನ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

ಗಂಭೀರ ಗಾಯಗೊಂಡ ಲಾರಿ ಚಾಲಕನನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿಲಾಗಿದೆ. ಬಸ್ ಚಾಲಕನಿಗೂ ಗಾಯಗಳಾಗಿದೆ. ಕೆಲ ಪ್ರಯಾಣಿಕರಿಗೂ ಚಿಕ್ಕ ಪುಟ್ಟ ಗಾಯಗಳಿಗಿದೆ ಎನ್ನಲಾಗಿದೆ. ಐಆರ್ ಬಿ, 112 ಈ ಆರ್ ಎಸ್ ಎಸ್ ವಾಹನದ ಸಿಬ್ಬಂದಿಗಳು ಹೆದ್ದಾರಿ ವ್ಯವಸ್ಥೆ ಸುಗಮ ಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಶಿರಕುಳಿ ಕ್ರಾಸ್ ನಿಂದ ಕಣಕಣೇಶ್ವರ ದೇವಸ್ಥಾನದ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿಂದ, ಕಾರವಾರ ಕಡೆಯಿಂದ ಅಂಕೋಲಾ ಪಟ್ಟಣಕ್ಕೆ ಬರುವ ವಾಹನಗಳು , ರಾ ಹೆ 66 ರ ಮೂಲಕ ಬರಬೇಕಾದ ಅನಿವಾರ್ಯತೆ ಉಂಟಾಗಿದ್ದು, ಹುಬ್ಬಳ್ಳಿ ಕಾರವಾರ ಬಸ್ ಚಾಲಕ , ಅದೇ ಸೂಚನೆ ಪಾಲಿಸಿ ಬಂದ ನಾದರೂ, ಪೆಟ್ರೋಲ್ ಪಂಪ್ ಹತ್ತಿರದ ಎಡ ರಸ್ತೆಯಲ್ಲಿ ಸಾಗೇ, ಶಾರ್ಟ ಕಟ್ ರೂಟ್ ಹಿಡಿದು ನೇರವಾಗಿ ಪಿಕಾಕ್ ಬಾರ್ ಮುಂದಿಂದ ಕೆ. ಎಲ್. ಇ ರಸ್ತೆ ಕಡೆ ತಿರುಗಿ ಬಸ್ ನಿಲ್ದಾಣ ತಲುಪುವ ಯೋಚನೆಯಲ್ಲಿ ಗಾಡಿ ಚಲಾಯಿಸಿದಂತಿದ್ದು , ರಾಂಗ್ ರೂಟ್ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ
- ಭಟ್ಕಳದ ಬೈಲೂರಿನಲ್ಲಿ ವಾತ್ಸಲ್ಯ ಮನೆ ಹಸ್ತಾಂತರ: ಸಂಸ್ಥೆಯ ಸಮಾಜಮುಖಿ ಕೆಲಸಕ್ಕೆ ಮೆಚ್ಚುಗೆ
- ಬೇಸಿಗೆ ರಜೆ ನಿಮಿತ್ತ 20 ದಿನಗಳ ಸಂಗೀತ ಸಂಸ್ಕಾರ ಶಿಬಿರ
