Important
Trending

ಕುಮಟಾ ಕರೊನಾ ಅಪ್‌ಡೇಟ್ಸ್

ಗಾಳಿಸುದ್ದಿಗೆ ತೆರೆ ಎಳೆದ ಸಹಾಯಕ ಆಯುಕ್ತರು
ಇಂದಿನಿಂದ ತಾಲೂಕಿನಲ್ಲಿ ಲಾಕ್‌ಡೌನ್ ಸಮಯ ಬದಲಾವಣೆ
ಮಾಸ್ಕ್ ಬಳಕೆ, ಸಮಾಜಿಕ ಅಂತರ ಕಡ್ಡಾಯ
ಈ ಸಮಯದಲ್ಲಿ ಓಡಾಡುವಂತಿಲ್ಲ

ಕುಮಟಾ: ಮಹರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಕುಮಟಾ ತಾಲೂಕಿನ ಹೆರವಟ್ಟಾದ ಒಂದೆ ಕುಟುಂಬದ ನಾಲ್ವರಿಗೆ ಕರೊನಾ ಸೋಂಕು ದೃಢಪಟ್ಟಿರುವುದು ತಾಲೂಕಿನ ಜನತೆಗೆ ಗೊಂದಲದ ಜೊತೆಗೆ ಸ್ವಲ್ಪ ಮಟ್ಟಿಗೆ ಭಯ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಗೊಂದಲಗಳಿಗೆ ಸ್ವಷ್ಟನೆ ನೀಡಲು ಕುಮಟಾ ಸಹಾಯಕ ಆಯುಕ್ತರಾದ ಅಜೀತ್ ಎಮ್. ಅವರು ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಕುಮಟಾ ತಾಲೂಕಿನಲ್ಲಿ ಮೇ 30 ರ ಗುರುವಾರದಂದು ಪತ್ತೆಯಾದ ಕರೊನಾ ಸೋಂಕಿತರ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.

ಇದೀಗ ತಾಲೂಕಿನಲ್ಲಿ ಕರೊನಾ ಸೊಂಕು ದೃಢಪಟ್ಟ ನಾಲ್ವರು ಮಹಾರಾಷ್ಟ್ರದಿಂದ ಮೇ 26 ರಂದು ಕುಮಟಾಕ್ಕೆ ಬಂದಿದ್ದಾರೆ. ಇವರು ಕುಮಟಾಕ್ಕೆ ಬಂದರು ಸಹ ತಮ್ಮ ಮನೆಗೆ ಹೋಗದೆ ನೇರವಾಗಿ ತಾಲೂಕಾಸ್ಪತ್ರೆಗೆ ತೆರಳಿದ್ದಾರೆ. ಅದೆ ದಿನದಂದು ತಾಲೂಕಾಸ್ಪತ್ರೆಯಲ್ಲಿ ಅವರ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಕಾರವಾರಕ್ಕೆ ಕಳುಹಿಸಲಾಗಿದ್ದು, ಮೇ 30ಕ್ಕೆ ಅವರ ವರದಿ ಪಾಸಿಟಿವ್ ಎಂದು ಬಂದಿದೆ. ಆದರೆ ತಾಲೂಕಿನ ಜನತೆಯು ಈ ವಿಷಯದ ಕುರಿತು ಭಯಬೀಳುವ ಅವಶ್ಯಕತೆ ಇಲ್ಲ. ಇವರನ್ನು ತಾಲೂಕಾಸ್ಪತ್ರೆಯಿಂದ ಮನೆಗೆ ಕಳುಹಿಸಿಲ್ಲ. ಬದಲಾಗಿ ಮೂವರನ್ನು ಕುಮಟಾದ ಕೋಂಕಣ ಎಜ್ಯಕೇಶನ್ ಟ್ರಸ್ಟ್ನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಹಾಗೂ ಒಬ್ಬರನ್ನು ಕುಮಟಾ ತಾಲೂಕಾಸ್ಪತ್ರೆಯಲ್ಲಿಯೆ ಇರಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಇಂದಿನಿಂದ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ ಯಾವುದೆ ಕಾರ್ಯಚಟುವಟಿಕೆಗಳು ಇರುವುದಿಲ್ಲ. ಅಲ್ಲದೆ, ತಾಲೂಕಿನ ಜನತೆಯು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಇದ್ದಲ್ಲಿ ಅವರಿಗೆ ದಂಡವಿಧಿಸುವುದಾಗಿ ಪುರಸಭಾ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ.

ಅಜಿತ್ ಎಮ್, ಸಹಾಯಕ ಆಯುಕ್ತರು

ಇದೇ ವೇಳೆ ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕರೊನಾ ಪ್ರಕರಣಗಳು ಕಂಡುಬಂದಿಲ್ಲ.ಇದರ ವಿಡಿಯೋ ಸುದ್ದಿಯನ್ನು 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.

– ಯೋಗೀಶ್ ಮಡಿವಾಳ, ವಿಸ್ಮಯ ನ್ಯೂಸ್, ಕುಮಟಾ,

[sliders_pack id=”1487″]

Back to top button