ಉತ್ತರಕನ್ನಡದಲ್ಲಿ ನಾಳೆ ಲಭ್ಯವಿರುವ ಲಸಿಕೆಯ ವಿವರ: ಎಲ್ಲೆಲ್ಲಿ ಎಷ್ಟು ವ್ಯಾಕ್ಸಿನ್ ಇದೆ ನೋಡಿ?

ಹೊನ್ನಾವರ, ಅಂಕೋಲಾ, ಯಲ್ಲಾಪುರದಲ್ಲಿ ನಾಳೆ ಎಲ್ಲೆಲ್ಲಿ ವ್ಯಾಕ್ಸಿನ್ ಲಭ್ಯವಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ 40,260 ಡೋಸ್ ಕೋವಿಶೀಲ್ಡ್ ಮತ್ತು 3,740 ಕೋವಾಕ್ಸಿನ್ ಡೋಸ್ ಲಭ್ಯವಿದೆ. ಶಿರಸಿಯಲ್ಲಿ ಅತಿಹೆಚ್ಚು ಅಂದರೆ 8279 ಕೋವಿಶೀಲ್ಡ್ ಡೋಸ್ ಮತ್ತು 1520 ಕೋವ್ಯಾಕ್ಸಿನ್ ಡೋಸ್ ಲಭ್ಯವಿದೆ. ಉಳಿದ ತಾಲೂಕುಗಳ ವಿವರ ಇಲ್ಲಿದೆ

ನಾಳೆ ಹೊನ್ನಾವರ ತಾಲ್ಲೂಕಿನಲ್ಲಿ ಒಟ್ಟು 4750 ವ್ಯಾಕ್ಸಿನ್ ಲಭ್ಯವಿದ್ದು,ಕೋವಿಶೀಲ್ಡ್ 4250, ಮತ್ತು ಕೋವ್ಯಾಕ್ಸಿನ್ 500 ಲಭ್ಯವಿದ್ದು, ಇವುಗಳನ್ನು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ.

ಹೊನ್ನಾವರದಲ್ಲಿ ಎಲ್ಲೆಲ್ಲಿ?

ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಟ್ಟಡದಲ್ಲಿ ಮತ್ತು ಪಟ್ಟಣ ಪಂಚಾಯತ ಸಭಾಭವನದಲ್ಲಿ ಹಾಗೂ ತಾಲ್ಲೂಕಿನ ಕಡತೋಕಾ, ಹಳದಿಪು, ಸಾಲಕೋಡ, ಖರ್ವಾ, ಹೊಸಾಡ, ಗೇರುಸೋಪ್ಪ, ಸಂಶಿ, ಬಳ್ಕೂರ, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಳೆ ಒಟ್ಟು 4750 ವಿತರಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ.

ಅಂಕೋಲಾದಲ್ಲಿ ಎಲ್ಲೆಲ್ಲಿ.?

ಅಂಕೋಲಾ: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಅಗಸ್ಟ್ 30 ರ ಸೋಮವಾರ ಒಟ್ಟೂ 1600 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ಹಿ.ಪ್ರಾ ಶಾಲೆ ಅಜ್ಜಿಕಟ್ಟಾ(300), ಹಿ.ಪ್ರಾ.ಶಾಲೆ ಬಡಗೇರಿ (300) , ಗ್ರಾಪಂ ಅಚವೆ (250), ಹಿ.ಪ್ರಾ ಶಾಲೆ ಗುಂಡಬಾಳ (100), ಹಿ.ಪ್ರಾ.ಶಾಲೆ ಮಾಡಿಬೊಗ್ರಿ (300), ಉಪಕೇಂದ್ರ ಅಗಸೂರು (350) ಗಳಲ್ಲಿ ಲಸಿಕಾಕರಣ ನಡೆಯಲಿದೆ. ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳು ಒಳಗೊಂಡಿದೆ. ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಲ್ಲಾಪುರ ತಾಲೂಕಿನಲ್ಲಿ ಎಲ್ಲೆಲ್ಲಿ?

ತಾಲೂಕಿನಲ್ಲಿ ಸೋಮವಾರ 1500 ಡೋಸ್ ಲಸಿಕೆ ಲಭ್ಯವಿದೆ. ತಾಲೂಕಾಸ್ಪತ್ರೆಯಲ್ಲಿ 200, ಕಿರವತ್ತಿ ಪ್ರಾ.ಆರೋಗ್ಯ ಕೇಂದ್ರ 200, ದೇಹಳ್ಳಿ ಪ್ರಾ.ಆರೋಗ್ಯ ಕೇಂದ್ರ 50, ಮಲವಳ್ಳಿ ಪ್ರಾ.ಆರೋಗ್ಯ ಕೇಂದ್ರ 50, ಚವತ್ತಿ ಪ್ರಾ.ಆರೋಗ್ಯ ಕೇಂದ್ರ 50, ಮಂಚಿಕೇರಿ ಪ್ರಾ.ಆರೋಗ್ಯ ಕೇಂದ್ರ 300, ಕುಂದರಗಿ ಪ್ರಾ.ಆರೋಗ್ಯ ಕೇಂದ್ರ 200, ಕಳಚೆ ಪ್ರಾ.ಆರೋಗ್ಯ ಕೇಂದ್ರ 50, ವಜ್ರಳ್ಳಿ ಪ್ರಾ.ಆರೋಗ್ಯ ಕೇಂದ್ರ 200, ನಂದೊಳ್ಳಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 200 ಡೋಸ್ ವ್ಯಾಕ್ಸಿನ್ ಲಭ್ಯವಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ವಿಲಾಸ್ ನಾಯಕ ಅಂಕೋಲಾ

Exit mobile version