Important
Trending
ಪೊಲೀಸರು ಅಡ್ಡಗಟ್ಟಿದರೂ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನ: ಐಷಾರಾಮಿ ಕಾರಿನಲ್ಲಿತ್ತು 170 ಕೆ.ಜಿ ದನದ ಮಾಂಸ
ಹೊನ್ನಾವರ: ಸ್ವಿಫ್ಟ್ ಕಾರಿನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಅಡ್ಡಗಟ್ಟಿದ್ದಾರೆ. ಈ ವೇಳೆ ಕಾರು ನಿಲ್ಲಿಸಿದೆ ಆರೋಪಿತರು ಪರಾರಿಯಾಗಿಲು ಯತ್ನಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ.
ಗೇರಸೊಪ್ಪಾ ಚೆಕ್ ಪೋಸ್ಟ್ ಅಲ್ಲಿ ಪೊಲೀಸರು ಕಾರನ್ನ ತಡೆಯಲು ಮುಂದಾಗಿದ್ದು, ಆರೋಪಿಗಳು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾರೆ.
ಈ ಸಂಬಂಧ ಮಾಹಿತಿ ಪಡೆದುಕೊಂಡು ಹೊನ್ನಾವರ ಪೊಲೀಸರು ಗೇರಸೊಪ್ಪಾ ಸರ್ಕಲ್ ಬಳಿ ಕಾರನ್ನು ತಡೆಹಿಡಿದಿದ್ದಾರೆ. ಈ ವೇಳೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ 170 ಕೆಜಿ ದನದ ಮಾಂಸವಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಹಾನಗಲ್ ತಾಲೂಕಿನ ಕರಗುದ್ರಗಿ ಮೂಲದ ಮೌಲಾಲಿ ಭಾಷಾಸಾಬ್ ತೊಟದ ಹಾಗು ಮಂಜುನಾಥ ಲಕ್ಷ್ಮಣ ಓಲೇಕಾರ್ ಎಂದು ಗುರುತಿಸಲಾಗಿದೆ. ಮೌಲಾಲಿ ಸಾಬ್ ಚಾಲಕ ವೃತ್ತಿ ಮಾಡುತ್ತಿದ್ದು, ಮಂಜುನಾಥ ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದ..
ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ