ನೌಕರಿ ಕಳೆದುಕೊಂಡರೂ ಬುದ್ದಿ ಕಲಿಯದ ಪೊಲೀಸಪ್ಪ ! ಉದ್ಯೋಗ ಕೊಡಿಸೋದಾಗಿ 12 ಮಂದಿಗೆ ವಂಚಿಸಿದ ಭೂಪ!
ಕಾರವಾರ: ಸದ್ಯದ ಸ್ಥಿತಿಯಲ್ಲಿ ಕೆಲಸ ಸಿಗುವುದೇ ಕಷ್ಟ. ಅದರಲ್ಲಿಯೂ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕು ಅಂದ್ರೆ ಅಷ್ಟೇ ಪರಿಶ್ರಮ ಕೂಡ ಪಡಬೇಕು. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಇಲ್ಲೋರ್ವ ಪೊಲೀಸಪ್ಪ ಅಂಚೆ ಇಲಾಖೆಯಲ್ಲಿ ನೌಕರಿ ಕೊಡಿಸೋದಾಗಿ ವಂಚಿಸಿ ಕೊನೆಗೆ ಸಿಕ್ಕಿಬಿದ್ದು ಕೆಲಸವನ್ನು ಕಳೆದುಕೊಂಡಿದ್ದ.
ಇಷ್ಟಾದರೂ ಹಳೆ ಚಾಳಿ ಬಿಡದೇ ಮತ್ತೊಂದಿಷ್ಟು ಮಂದಿಗೆ ಪೊಲೀಸ್ ನೌಕರಿ ಕೊಡಿಸಲು ಮುಂದಾಗಿದ್ದ ಖತರ್ನಾಕ್ ಅಸಾಮಿ ಇದೀಗ ಪೊಲೀಸರಿಗೆ ಅತಿಥಿಯಾಗಿದ್ದು ಈ ಕುರಿತ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಹೌದು, ಸದ್ಯದ ಸ್ಥಿತಿಯಲ್ಲಿ ಉದ್ಯೋಗಕ್ಕಾಗಿ ಎಲ್ಲೆಡೆ ಹಾಹಾಕಾರವೇ ಇದೆ.
ಅದರಲ್ಲಿಯೂ ಒಂದು ಸರ್ಕಾರಿ ಹುದ್ದೆ ಖಾಲಿ ಇದೆ ಅಂದ್ರೂ ಸಾವಿರಾರು ಮಂದಿ ಅರ್ಜಿ ಹಾಕಿ ಕೆಲಸಕ್ಕಾಗಿ ಕಾಯುವ ಸ್ಥಿತಿ ಇದೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಹಾವೇರಿ ಜಿಲ್ಲೆಯ ಬ್ಯಾಡಗಿಯ ಸಂತೋಷ ತಿಪ್ಪಣ್ಣ ಗುದಗಿ ಎಂಬಾತ ಪೊಲೀಸ್ ನೌಕರಿ ಕೊಡಿಸೋದಾಗಿ ಹೇಳಿ ಧಾರವಾಡ, ಬೆಳಗಾವಿ ಉತ್ತರಕನ್ನಡ ಮತ್ತು ಹಾವೇರಿ ಜಿಲ್ಲೆಯ ಒಂದಲ್ಲ ಎರಡಲ್ಲ ಬರೊಬ್ಬರಿ 12 ಅಭ್ಯರ್ಥಿಗಳಿಗೆ ನೇರ ನೇಮಕಾತಿ ಮೂಲಕ ನೌಕಾರಿ ಕೊಡಿಸೋದಾಗಿ ವಂಚಿಸಿದ್ದಾನೆ.
ಮಾತ್ರವಲ್ಲದೆ ಒಬ್ಬ ಅಭ್ಯರ್ಥಿಯಿಂದ 2 ಲಕ್ಷ ಹಣವನ್ನು ಮುಂಗಡವಾಗಿ ಬ್ಯಾಂಕ ಅಕೌಂಟ್ ಮೂಲಕ ಪಡೆದುಕೊಂಡಿದ್ದಾನೆ. ಅಲ್ಲದೆ ವಿವಿಧ ಜಿಲ್ಲೆಯ ಪೊಲೀಸ್ ಅಧೀಕ್ಷಕರ ಸಹಿ ಇರುವ ಸುಳ್ಳು ನೇಮಕಾತಿ ಆದೇಶ ಪತ್ರವನ್ನು ಕೊಟ್ಟು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಇನ್ನು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಪೊಲೀಸರು ಬಂದಿಸಿದ್ದು, ಆರೋಪಿಯಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಇನ್ನು ಆರೋಪಿ ಸಂತೋಷ್ ಗುದಗಿ 2007 ರಲ್ಲಿ ಪೊಲೀಸ್ ಪೇದೆಯಾಗಿ ನೇಮಕಗೊಂಡು ಬೆಂಗಳೂರು ನಗರದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ. ಸರ್ಕಾರಿ ನೌಕರಿ ಆದರೂ ತೆಪ್ಪಗೆ ಕೆಲಸ ಮಾಡಿಕೊಂಡು ಜೀವನ ನೀಭಾಯಿಸಿಕೊಂಡು ಇರುವುದನ್ನು ಬಿಟ್ಟು ಈತ ಅಡ್ಡದಾರಿ ಹಿಡಿದಿದ್ದ. ಅಂಚೆ ಇಲಾಖೆಯಲ್ಲಿ ವಿಶೇಷ ಖೋಟಾದಡಿ ನೌಕರಿ ಕೊಡಿಸೋದಾಗಿ ಲಕ್ಷಾಂತರ ವಂಚಿಸಿ ಇಲಾಖೆ ತನಿಖೆಯನ್ನು ಎದುರಿಸಿದ್ದ ಈತ ಕೊನೆಗೆ ಸಸ್ಪೆಂಡ್ ಕೂಡ ಆಗಿದ್ದ.
ಇಷ್ಟಾದರೂ ತೆಪ್ಪಗಿದ್ದು ಜೀವನ ನಡೆಸುವುದನ್ನು ಬಿಟ್ಟು ತಾನು ಪೊಲೀಸ್ ತನಗೆ ಹಿರಿಯ ಅಧಿಕಾರಿಗಳು ಗೊತ್ತು. ಅವರ ಮೂಲಕ ನೇರ ನೇಮಕಾತಿ ಮಾಡಿಸುವುದಾಗಿ ನಂಬಿಸಿ ಹಣ ಪೀಕತೊಡಗಿದ್ದ. ಆದರೆ ಈ ಬಗ್ಗೆ ವಂಚನೆಗೊಳಗಾದ ಮುಂಡಗೋಡ ಪಟ್ಟಣದ ಗುರುರಾಜ್ ರಾಯ್ಕರ್ ದೂರು ದಾಖಲಿಸಿದ್ದರು.
ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಕೊನೆಗು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನು ಎಷ್ಟು ಮಂದಿಗೆ ವಂಚನೆ ಮಾಡಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಯಾರಾದರೂ ಮೋಸ ಹೊದವರು ಇದ್ದರೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಇಂತಹ ಯಾವುದೇ ಅನ್ಯ ಮಾರ್ಗದಿಂದ ನೇಮಕಾತಿ ನಡೆಯುವುದಿಲ್ಲ. ಜನರು ಇಂತಹ ಯಾವುದೇ ರಿತಿಯ ಆಮೀಷಗಳಿಗೆ ಬಲಿಯಾಗುವ ಮುನ್ನ ಎಚ್ಚರವಹಿಸುವಂತೆ ಸೂಚಿಸಿದ್ದಾರೆ.
ಒಟ್ಟಾರೆ ಸಿಕ್ಕ ನೌಕರಿ ಬಿಟ್ಟು ಅಡ್ಡದಾರಿ ಮೂಲಕ ಹಣ ಮಾಡಲು ಮುಂದಾಗಿದ್ದ ಪೊಲೀಸಪ್ಪ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಆದರೆ ಅಡ್ಡದಾರಿ ಮೂಲಕ ಯಾರದ್ದೋ ಮಾತನ್ನು ನಂಬಿ ನೌಕರಿ ಪಡೆಯಲು ಮುಂದಾದವರೂ ಇದೀಗ ಹಣವೂ ಇಲ್ಲದೇ ನೌಕರಿಯೂ ಇಲ್ಲದಂತಾಗಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಓದಿ ಪರಿಶ್ರಮದ ಮೂಲಕ ನೌಕರಿ ಗಿಟ್ಟಿಸಿಕೊಳ್ಳಲು ಮುಂದಾಗಬೇಕಿದೆ.
ವಿಸ್ಮಯ ನ್ಯೂಸ್ ಕಾರವಾರ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581