Follow Us On

WhatsApp Group
Important
Trending

ಉತ್ತರಕನ್ನಡದಲ್ಲಿ ನಾಳೆ 10,700 ಲಸಿಕೆ ಲಭ್ಯ: ಎಲ್ಲೆಲ್ಲಿ ಎಷ್ಟು ಡೋಸ್ ಲಸಿಕೆ ಇದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 10,700 ಲಸಿಕೆ ಲಭ್ಯವಿದೆ. ಇವುಗಳಲ್ಲಿ 8,200 ಕೋವಿಶೀಲ್ಡ್ ಮತ್ತು 2,500 ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಅಧಿಕಾರಿಗಳು ವಿಸ್ಮಯ ಟಿವಿಗೆ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟು ಲಸಿಕೆ ಲಭ್ಯವಿದೆ ಎಂಬುದರ ವಿವರ ಈ ಕೆಳಗಿದೆ.

ಹೊನ್ನಾವರದಲ್ಲಿ ಎಲ್ಲೆಲ್ಲಿ?

ಹೊನ್ನಾವರ ತಾಲೂಕಿನಲ್ಲಿ ನಾಳೆ ಒಟ್ಟು 1160 ಡೋಸ್ ವ್ಯಾಕ್ಸಿನ್ ಲಭ್ಯವಿದೆ. 1000 ಕೋವಿಶೀಲ್ಡ್ ಮತ್ತು 160 ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊನ್ನಾವರ ಪಟ್ಟಣದ ಹಳೆಯ ಡಿ ಎಫ್ ಓ ಕಚೇರಿ ಕಟ್ಟಡದಲ್ಲಿ ಹಾಗೂ ಸಾಲಕೋಡ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ, ಕಡತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮತ್ತು ಹಳದೀಪುರ ಪ್ರಾಥಮಿಕ ಆರೋಗ್ಯ ಕೆಂದ್ರ ವ್ಯಾಪ್ತಿಯಲ್ಲಿ ವ್ಯಾಕ್ಸಿನ್ ನೀಡಲಾಗುವುದು.

ಅಂಕೋಲಾದಲ್ಲಿ 1000 ಡೋಸ್ ಕೋವಿಡ್ ಲಸಿಕೆಗಳು ಲಭ್ಯ,

ಅಂಕೋಲಾ ಸೆ. 4: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಸಪ್ಟೆಂಬರ್ 5 ರ ರವಿವಾರ ಒಟ್ಟೂ 1000 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಕಿ.ಪ್ರಾ ಶಾಲೆ ಪಳ್ಳಿಕೇರಿ (200), ದೇಸಿನಭಾಗ (200) ಹಿ.ಪ್ರಾ.ಶಾಲೆ ಬೊಗ್ರಿಬೈಲ್ (200), ಹಿ ಪ್ರಾಶಾಲೆ ಉಳುವರೆ (200) ಸುಂಕಸಾಳ (100), ಹಳವಳ್ಳಿ (100),ಡೋಸ್ ಲಸಿಕೆಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳು ಒಳಗೊಂಡಿದೆ. ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂಕೋಲಾದಲ್ಲಿ 4 ಹೊಸ ಪಾಸಿಟಿವ್ ಕೇಸ್.
ಅಂಕೋಲಾ ಸೆ 4: ತಾಲೂಕಿನಲ್ಲಿ ಶನಿವಾರ 4 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಸೋಂಕು ಮುಕ್ತರಾದ 9 ಜನರನ್ನು ಬಿಡುಗಡೆಗೊಳಿಸಲಾಗಿದ್ದು, 23 ಸಕ್ರಿಯ ಪ್ರಕರಣಗಳಿವೆ. ವಿವಿಧ ಆಸ್ಪತ್ರೆಗಳಲ್ಲಿ 6 ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 17 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3638 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು , 71 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.


ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ವಿಲಾಸ ನಾಯಕ ಅಂಕೋಲಾ.

Back to top button