ಕಾರವಾರ: ನೆರೆ ಪ್ರವಾಹದಿಂದಾಗಿ ತಡರಾತ್ರಿಯಿಂದ ಮುಳುಗಡೆಯಾಗಿದ್ದ ಮಣ್ಣಿನ ಮನೆಯೊಂದು, ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಿರುವ ಘಟನೆ ಅಂಕೋಲಾ ಹಿಚ್ಕಡ ಗ್ರಾಮದಲ್ಲಿ ನಡೆದಿದೆ. ಗಂಗಾವಳಿ ನದಿ ಪ್ರವಾಹದಿಂದ ತಡರಾತ್ರಿಯೇ ಮನೆಗಳಿಗೆ ನುಗ್ಗಿದ್ದ ನೀರು ಇಂದು ಕೂಡ ಇಳಿಯ ಕಾರಣ ಮಣ್ಣಿನ ಗೋಡೆ ನೆನೆದಿತ್ತು. ಇಂದು ಮಧ್ಯಾಹ್ನದ ಬಳಿಕ ಮನೆಯವರ ಎದುರೇ ಮನೆ ಸಂಪೂರ್ಣ ಕುಸಿದು ಬಿದ್ದಿದ್ದು, ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಇನ್ನು ಹಿಚ್ಕಡ ಗ್ರಾಮ ಬಹುತೇಕ ನೆರೆಯಿಂದ ಜಲಾವೃತಗೊಂಡಿದ್ದು 50ಕ್ಕೂ ಹೆಚ್ಚು ಮನೆಗಳು ಭಾಗಶಃ ಮುಳುಗಡೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಈ ಭಾಗದ ಸ್ಥಳೀಯರನ್ನು ಸ್ಥಳಾಂತರ ಮಾಡಲಾಗಿದ್ದು, ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಇಂದಿನ ಪ್ರಮುಖ ಸುದ್ದಿಗಳ ಲಿಂಕ್ ಈ ಕೆಳಗೆ ಇದೆ.
- ಅರಬೈಲ್ ಘಾಟ್ ಬಳಿ ಭೀಕರ ಅಪಘಾತ: 9 ಜನರ ಸಾವು: 14 ಕ್ಕೂ ಹೆಚ್ಚು ಜನರಿಗೆ ಗಾಯ
- ಮರಳು, ಸಿಮೆಂಟ್, ಕ್ಯೂರಿಂಗ್ ಸಮಸ್ಯೆ ಇಲ್ಲ: ಖರ್ಚು ಕಡಿಮೆ: ಜಿಪ್ಸಮ್ ಪ್ಲಾಸ್ಟರ್ ಗಾಗಿ ಸಂಪರ್ಕಿಸಿ
- ಹೆಂಡತಿ ಮನೆ ಎದುರು ಸಾವಿಗೆ ಶರಣಾದ ವಿಚ್ಛೇದಿತ
- ಮುರ್ಡೇಶ್ವರ ಮಹಾರಥೋತ್ಸವಕ್ಕೆ ಸರ್ವರಿಗೂ ಸ್ವಾಗತ
- ಶಾಲಾ ಅಡುಗೆ ಸಿಬ್ಬಂದಿ ನೀರು ತರಲು ಹೋದಾಗ ಕಂಡಿದ್ದೇನು ? ಬಾವಿಯ ಗಡಗಡೆಗೆ ಕಟ್ಟಿದ್ದ ಹಗ್ಗದ ಇನ್ನೊಂದು ತುದಿಯಲ್ಲಿ ನೇತಾಡುತ್ತಿತ್ತು ಮೃತದೇಹ
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್