ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 24 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರ 14, ಅಂಕೋಲಾ 1, ಕುಮಟಾ 4, ಭಟ್ಕಳ 1, ಶಿರಸಿ 1, ಸಿದ್ದಪುರ 1, ಯಲ್ಲಾಪುರದಲ್ಲಿ ಎರಡು ಕೇಸ್ ದಾಖಲಾಗಿದೆ. ಇದೆ ವೇಳೆ ಸಿದ್ದಾಪುರದಲ್ಲಿ ಒಂದು ಸಾವಾಗಿದ್ದು,ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 763ಕ್ಕೆ ಏರಿಕೆಯಾಗಿದೆ.
ಕುಮಟಾದಲ್ಲಿ ನಾಳೆ ಎಲ್ಲೆಲ್ಲಿ ವ್ಯಾಕ್ಸಿನೇಷನ್?
ಕುಮಟಾ: ತಾಲೂಕಿನಲ್ಲಿ ನಾಳೆ ಒಟ್ಟು 2,450 ಕೋವಿಶೀಲ್ಡ್ ಮತ್ತು 500 ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಆಸ್ಪತ್ರೆ ಕುಮಟಾದಲ್ಲಿ 300, ಪ್ರಾಥಮಿಕ ಆರೋಗ್ಯ ಕೇಂದ್ರ ಗೋಕರ್ಣ 300, ಪ್ರಾಥಮಿಕ ಆರೋಗ್ಯ ಕೇಂದ್ರ ಬಂಕಿಕೊಡ್ಲು 100, ನಾಡುಮಾಸ್ಕೇರಿ ಪಂಚಾಯತ್ 200, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುತ್ತಿ 150, ಉರ್ದು ಪ್ರೌಢಶಾಲೆ ಮಿರ್ಜಾನ್ 150., ಪ್ರಾಥಮಿಕ ಆರೋಗ್ಯ ಕೇಂದ್ರ ಕೋಡಾಣಿ 150 ಡೋಸ್ ಲಭ್ಯವಿದೆ.ವಿಸ್ಮಯ ನ್ಯೂಸ್
ಪ್ರಾಥಮಿಕ ಆರೋಗ್ಯ ಕೇಂದ್ರ ಕಾಗಾಲ್ 100, ಪ್ರಾಥಮಿಕ ಆರೋಗ್ಯ ಕೇಂದ್ರ ಕತಗಾಲ್ 150, ಗುಡೇಅಂಗಡಿ ಹಿರಿಯ ಪ್ರಾಥಮಿಕ ಶಾಲೆ 300, ಎಪ್‌ಫಿಎಐ ಮಣಕಿ ಮೈದಾನ 250, ಧಾರಾನಾಥ ಸಭಾಭವನ 200, ಪ್ರಾಥಮಿಕ ಆರೋಗ್ಯ ಕೇಂದ್ರ ಸಂತೇಗಳಿ 100 ಡೋಸ್ ಕೋವಿಶೀಲ್ಡ್ ಲಭ್ಯವಿದೆ. ಅಲ್ಲದೆ, ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ 500 ಡೋಸ್ ಕೋವ್ಯಾಕ್ಸಿನ್ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಹೊನ್ನಾವರ ತಾಲೂಕಿನಲ್ಲಿ ನಾಳೆ ಎಲ್ಲೆಲ್ಲಿ ವ್ಯಾಕ್ಸಿನೇಷನ್?
ಹೊನ್ನಾವರ: ತಾಲೂಕಿನಲ್ಲಿ ಒಟ್ಟು, 3030 ವ್ಯಾಕ್ಸಿನ್ ಲಭ್ಯವಿದ್ದು, 2890 ಕೋವಿಶೀಲ್ಡ್ ಮತ್ತು 140 ಕೋವ್ಯಾಕ್ಸಿನ್ ಲಭ್ಯವಿದೆ.
ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಚೇರಿಯಲ್ಲಿ ಹಾಗೂ ತಾಲ್ಲೂಕಿನ ಕಡತೋಕಾ, ಹಳದೀಪುರ. ಸಾಲಕೋಡ, ಖರ್ವಾ, ಹೊಸಾಡ, ಗೇರುಸೋಪ್ಪಾ, ಶಂಶಿ ಬಳ್ಕೂರ, ಮಂಕಿ ಸೇರಿದಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಣೆ ನಡೆಯಲಿದೆ.
ಅಂಕೋಲಾದಲ್ಲಿ ನಾಳೆ 1340 ಕೋವಿಡ್ ಲಸಿಕೆ ಲಭ್ಯ
ಅಂಕೋಲಾ ಸೆ 6: ತಾಲೂಕಿನಲ್ಲಿ ಸೋಮವಾರ ಯಾವುದೇ ಹೊಸ ಕೋವಿಡ್ ಪಾಸಿಟಿವ್ ಕೇಸುಗಳು ದಾಖಲಾಗಿಲ್ಲ.ಸೋಂಕು ಮುಕ್ತರಾದ 2 ಜನರನ್ನು ಬಿಡುಗಡೆಗೊಳಿಸಲಾಗಿದ್ದು, 22 ಸಕ್ರಿಯ ಪ್ರಕರಣಗಳಿವೆ. ವಿವಿಧ ಆಸ್ಪತ್ರೆಗಳಲ್ಲಿ 8 ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 14 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3643 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು , 71 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.
ನಾಳೆ ಸೆ 7 ರ ಮಂಗಳವಾರ ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳೂ ಸೇರಿ ಒಟ್ಟೂ 1340 ಕೋವಿಡ್ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಅಲಗೇರಿ (ದೊಡ್ಡ ಅಲಗೇರಿ), ಭಾವಿಕೇರಿ, ತಾಲೂಕಾ ಆಸ್ಪತ್ರೆ, ಅಗ್ರಗೋಣಗಳಲ್ಲಿ ತಲಾ (200), ಕಾಕರಮಠ (300), ಮೊಗಟಾ (100), ಮಕ್ಕಿಗದ್ದೆ – ಮಾರುಗದ್ದೆ ವ್ಯಾಪ್ತಿಗೆ (140 ) ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿಗಳು ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ ಮತ್ತು ಶ್ರೀಧರ್ ನಾಯ್ಕ ಹೊನ್ನಾವರ