ರಾವಣ ಗುದ್ದಿದ್ದರಿಂದ ತಲೆಯ ಮೇಲೆ ಹೊಂಡವಿದೆ: ದ್ವಾಪರಾಯುಗದ ಗಣಪತಿ: ಅತಿ ಪ್ರಾಚೀನ ಗಣೇಶ ವಿಗ್ರಹದಲ್ಲಿ ಒಂದು: ವಿಶೇಷತೆ ನೋಡಿ

ಒಂದು ಕೈಯಲ್ಲಿ ಮೋದಕ ಪಾತ್ರೆ, ಇನ್ನೊಂದು ಕೈಯಲ್ಲಿ ಕಮಲದ ಹೂವು

ಗೋಕರ್ಣ: ಸಮುದ್ರ ತಟದಲ್ಲಿರುವ ಗೋಕರ್ಣದ ಮಹಾಬಲೇಶ್ವರ ಶಿವನ ದೇವಾಲಯವು ದೇಶದ ಎಲ್ಲ ಹಿಂದೂ ಭಕ್ತರಿಗೆ ಪುಣ್ಯ ಸ್ಥಳ. ಕಾಶಿ, ರಾಮೇಶ್ವರ ಹಾಗೂ ಗೋಕರ್ಣ ತ್ರಿಸ್ಥಳ ಶೈವಕ್ಷೇತ್ರಗಳೆಂದೇ ಖ್ಯಾತವಾಗಿವೆ.

ಕೇಂದ್ರಕ್ಕೆ ಪತ್ರಬರೆದ ವೈದ್ಯ: ಕೂಡಲೇ ಪೆಟ್ರೋಲ್, ಡಿಸೇಲ್ ದರ ಇಳಿಕೆ! ಪತ್ರಬರೆದ ವೈದ್ಯರಿಗೆ ಪ್ರತ್ಯುತ್ತರ ಹೀಗಿದೆ ನೋಡಿ?

ಗೋಕರ್ಣದಲ್ಲಿ ಮಹಾಬಲೇಶ್ವರನ ಸ್ಥಾಪನೆಗೆ ಕಾರಣನಾದ ಪುರಾತನ ಗಣಪತಿಯ ದೇವಾಲಯೂ ಇಲ್ಲೇ ಇದೆ. ಗೋಕರ್ಣದ ಮಹಾಗಣಪತಿ ಅತ್ಯಂತ ಪುರಾತನ ಗಣಪತಿ. ದ್ವಾಪರಾಯದ ಗಣಪತಿ ಎಂದೇ ಹೇಳಲಾಗುತ್ತಿದೆ. ಇಲ್ಲಿ ನೆಲೆನಿಂತ ದ್ವಿಭುಜ ಗಣಪತಿ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತಾ, ವಿಘ್ನನಿವಾರಕನಾಗಿ ಖ್ಯಾತಿ ಗಳಿಸಿದ್ದಾನೆ. ದೇಶ-ವಿದೇಶದ ಭಕ್ತರನ್ನ ತನ್ನತ್ತ ಆಕರ್ಷಿಸುತ್ತಿದ್ದಾನೆ.

ಗೋಕರ್ಣದ ನಿಂತಿರುವ ಗಣಪನ ವಿಗ್ರಹ ಕರ್ನಾಟಕದ ಅತಿ ಪ್ರಾಚೀನ ಗಣೇಶ ವಿಗ್ರಹಗಳಲ್ಲಿ ಒಂದಾಗಿದೆ. ಇದು ಸುಮಾರು 6 ಅಥವಾ 7ನೇ ಶತಮಾನದ್ದೆನ್ನುತ್ತಾರೆ ಇತಿಹಾಸತಜ್ಞರು. ಇಲ್ಲಿಯ ಗಣಪತಿ ದ್ವಿಭುಜ ಗಣಪನಾಗಿದ್ದು ಒಂದು ಕೈಯಲ್ಲಿಮೊದಕ ಪಾತ್ರೆ, ಮತ್ತೊಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿರುವುದು ವಿಶೇಷ..

ವಿಶೇಷವೆಂದರೆ, ವಟುಸ್ವರೂಪಿಯಾದ ನಿಂತ ಗಣಪತಿಯಾಗಿದ್ದಾನೆ. ತಲೆಯ ಮೇಲೆ ಹೊಂಡವಿದ್ದು ರಾವಣ ಗುದ್ದಿದ್ದರಿಂದ ಹೀಗಾಗಿದೆ ಎನ್ನುವ ಪ್ರತೀತಿ ಇದೆ. ಇಲ್ಲಿ ಯಾವುದೇ ಜಾತಿ ಮತ ಬೇಧವಿಲ್ಲದೇ ಗಣಪತಿಯನ್ನು ಮುಟ್ಟಿ ಪೂಜಿಸಬಹುದು. ಇದರಿಂದಲೇ ಭಕ್ತರನ್ನು ತನ್ನತ್ತ ಸೆಳೆಯುತ್ತಾನೆ. ಈತ ಸಿದ್ಧಿಗಣಪನಾಗಿದ್ದು ಭಕ್ತರ ಇಷ್ಟಾರ್ಥಗಳನ್ನು ಪೂರೆಸುತ್ತಾನೆ ಎಂಬ ಶ್ರದ್ಧೆ ನಂಬಿಕೆ ಅಚಲವಾಗಿ ಬೆಳೆದು ಬಂದಿದೆ. ಅಭಿಷೇಕಗಳನ್ನು ಭಕ್ತರು ತಮ್ಮ ಶ್ರದ್ಧಾ ಭಕ್ತಿಗೆ ಅನುಸಾರವಾಗಿ ಮಾಡಬಹುದಾಗಿದೆ.

ಗೋಕರ್ಣದ ಮಹಾಗಣಪತಿ, ಅತ್ಯಂತ ಪುರಾತನ ಸ್ವಯಂಭೂ ಗಣಪತಿ.. ಹೌದು, ಪರಶಿವನ ಆತ್ಮಲಿಂಗವನ್ನ ಗೋಕರ್ಣದಲ್ಲಿ ಸ್ವತ: ಸ್ಥಾಪಿಸಿ ವಟುರೂಪಿ ಗಣಪತಿಯು, ದಿವ್ಯವಾದ ಆತ್ಮಲಿಂಗದ ಆಗ್ನೇಯಕ್ಕೆ ಮೂವತ್ತೆರಡು ಅಡಿ ದೂರದಲ್ಲಿ ಪಶ್ವಿಮಾಭಿಮುಖವಾಗಿ ಅದೇ ರೂಪದಲ್ಲಿ ನಿಂತಿದ್ದಾನೆ.

ಗೋಕರ್ಣ ಮಹಾಗಣಪತಿಗೆ ದೇಶಾದ್ಯಂತ ಭಕ್ತರ ಸಮೂಹವೇ ಇದೆ. ಗೋಕರ್ಣಕ್ಕೆ ಬರುವ ವಿದೇಶಿಯರೂ ಸಹ ಹೊರಗಿನಿಂದಲೇ ದರ್ಶನ ಪಡೆದು ಕತಾರ್ಥರಾಗುತ್ತಾರೆ. ಕರ್ನಾಟಕದ ಎಲ್ಲಾ ಭಾಗದ ಭಕ್ತರು ಸೇರಿದಂತೆ ಗೋವಾ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.. ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಾರೆ

ಪ್ರತಿಯೊಂದು ಮಂಗಳ ಕಾರ್ಯದ ಆರಂಭದಲ್ಲಿ ಪ್ರಥಮ ಪೂಜೆ ಗಣೇಶನಿಗೆ ಸಲ್ಲುವುದು ಸಂಪ್ರದಾಯ. ಮಹಾಭಾರತ ಕಾಲದಿಂದಲೂ ಗಣೇಶ ಪೂಜೆ ಇತ್ತೆಂಬುದತ್ತೆ ಪುರಾಣ ಉಲ್ಲೇಖವಿದೆ. ಸ್ವಯಂ ಭಗವಾನ್ ಶ್ರೀಕೃಷ್ಣ ಪರಮಾತ್ಮನೇ ಗಣೇಶ ವ್ರತವನ್ನು ಆಚರಿಸಿದ್ದಾನಂತೆ..

ಈ ಗೋಕರ್ಣದ ಗಣಪತಿ ಅತಿಪುರಾತನ ಗಣಪತಿ ಮೂರ್ತಿಯಾಗಿರುವುದರಿಂದ , ಇನ್ನು ಹೆಚ್ಚಿನ ಮಹತ್ವ ಪಡೆದಿದೆ. ಇಲ್ಲಿ ಪ್ರತಿದಿನ 12.30ಕ್ಕೆ ಮಹಾಮಂಗಳಾರತಿ ಪೂಜೆ ನಡೆಯುತ್ತದೆ. ಈ ವೇಳೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ, ಮಹಾಗಣಪತಿಗೆ ನಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ..

ವಿಸ್ಮಯ ನ್ಯೂಸ್, ಗೋಕರ್ಣ

Exit mobile version