Big News
Trending

ನಿಧಿ ಆಸೆಗಾಗಿ ದೇವಾಲಯ ಹಾಳು ಮಾಡಿದ ನಿಧಿಗಳ್ಳರು: ಶಿವನಲಿಂಗ ಎರಡುಭಾಗ: ಗರ್ಭಗುಡಿಯ ಮಧ್ಯಭಾಗದಲ್ಲಿ ಅಗೆದು ನಿಧಿ ಶೋಧನೆ

ಕಾರವಾರ: ಹಿಂದೂ ಪರಂಪರೆಯಲ್ಲಿ ದೇವಾಲಯಗಳಿಗೆ ಪೂಜನೀಯ ಸ್ಥಾನವಿದೆ. ದೇಗುಲಗಳು ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವೂ ಹೌದು. ಆದರೆ, ಕೆಲವು ಕಿಡಿಗೇಡಿಗಳು ನಿಧಿ ಆಸೆಗಾಗಿ ದೇವಾಲಯಗಳ ಮೇಲೆ ತಮ್ಮ ವಕ್ರದೃಷ್ಟಿ ಬಿರುತ್ತಿದ್ದಾರೆ.

ಹೌದು, ನಿಧಿಯ ಆಸೆಗಾಗಿ ಪ್ರಾಚೀನ ಕಾಲದ ಶಿವನ ದೇವಾಲಯದ ಮೂರ್ತಿಗಳನ್ನು ದ್ವಂಸ ಮಾಡಿದ ಘಟನೆ ನಡೆದಿದೆ. ಈ ದೇವಾಲಯವು ಪುರಾತನ ಕಾಲದ್ದಾಗಿದೆ. ಇಲ್ಲಿನ ಸುಂದರ ಕಲ್ಲಿನ ಕೆತ್ತನೆ, ಶಿವನ ಲಿಂಗ ಇಲ್ಲಿನ ಆಕರ್ಷಣೆಯ ಕೇಂದ್ರವಾಗಿತ್ತು. ಅಲ್ಲದೆ, ಇಡೀ ದೇವಸ್ಥಾನ ಕಲ್ಲಿನಿಂದ ನಿರ್ಮಾಣವಾಗಿತ್ತು.
ಈ ದೇವಸ್ಥಾನ ದಟ್ಟಅರಣ್ಯದಲ್ಲಿ ಇದ್ದು, ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ತುಂಬಾ ವಿರಳವಾಗಿತ್ತು.

ಹೀಗಾಗಿ ಈ ಪುರಾತನ ದೇಗುಲದ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದೆ. ಇಲ್ಲಿನ ಶಿವಲಿಂಗದ ಪೀಟವನ್ನು ಕಿತ್ತು ತಳಭಾಗವನ್ನು ನಿಧಿ ಆಸೆಗಾಗಿ ಅಗೆಯಲಾಗಿದೆ. ಈ ವೇಳೆ ಶಿವನ ಲಿಂಗಕ್ಕೂ ಹಾನಿಯಾಗಿದ್ದು, ಲಿಂಗವು ಎರಡು ತುಂಡಾಗಿದೆ. ಅಲ್ಲದೆ, ಕೆಲವು ಮೂರ್ತಿಗಳಿಗೂ ಹಾನಿಮಾಡಿದ್ದಾರೆ.

ಈ ಘಟನೆ ನಡೆದಿರೋದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹಾರ್ನೋಡ ಗ್ರಾಮದಲ್ಲಿ. ದೇವಸ್ಥಾನವು ಆಕರ್ಷಕ ಕಲ್ಲಿನ ಕೆತ್ತನೆಗಳನ್ನು ಹೊಂದಿದೆ. ಅರಣ್ಯವಾಸಿಗಳು ಈ ದೇವಸ್ಥಾನವನ್ನು ಗಮನಿಸಿದ್ದರಾದರೂ ಹೊರ ಜಗತ್ತಿಗೆ ಅಪರಿಚಿತವಾಗಿಯೇ ಉಳಿದಿದೆ. ಪುರಾತನ ದೇವಸ್ಥಾನವನ್ನು ಪುರಾತತ್ವ ಇಲಾಖೆ ರಕ್ಷಣೆ ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದೇವಸ್ಥಾನ ದಟ್ಟ ಅರಣ್ಯದಲ್ಲಿ ಇರುವುದರಿಂದಾಗಿ ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ಸಹ ಇರುತ್ತಿರಲಿಲ್ಲ. ಇದರ ಲಾಭ ಪಡೆದ ನಿಧಿ ಕಳ್ಳರು ಈಶ್ವರ ಲಿಂಗ್ ಪೀಡವನ್ನು ಕಿತ್ತು ಹಾಳು ಮಾಡಿ ತಳಭಾಗದಲ್ಲಿ ಅಗೆದಿದ್ದಾರೆ. ಇನ್ನು ಈಶ್ವರ ಲಿಂಗಕ್ಕೂ ಘಾಸಿ ಮಾಡಿದ್ದು ಲಿಂಗವು ಎರಡು ತುಂಡಾಗಿದೆ. ಇಲ್ಲಿನ ಕೆಲವು ಮೂರ್ತಿಗಳಿಗೂ ಹಾನಿಮಾಡಿದ್ದಾರೆ.

ಘಟನೆ ನಡೆದಿರುವುದು ಇದೀಗ ಸ್ಥಳೀಯ ಜನರಿಗೆ ತಿಳಿದಿದ್ದು ಸ್ಥಳಕ್ಕೆ ಸ್ಥಳೀಯ ಬಿಜೆಪಿ ಮುಖಂಡ ಸುಧಾಕರರೆಡ್ಡಿ ಆಗಮಿಸಿ ವೀಕ್ಚಿಸಿದ್ದು ಸಂಬAದಪಟ್ಟ ಇಲಾಖೆಗೂ ಸಹ ಮಾಹಿತಿ ನೀಡಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button