Follow Us On

WhatsApp Group
Important
Trending

ನಿಲ್ಲದ ಭೂಕುಸಿತ: ಜನತೆಯಲ್ಲಿ ಹೆಚ್ಚಿದ ಆತಂಕ: ಅಧ್ಯಯನ ತಂಡದಿಂದ ಭೇಟಿ, ಪರಿಶೀಲನೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಜುಲೈ ತಿಂಗಳ ಕೊನೆ ವಾರದಲ್ಲಿ ಸುರಿದ ಭಾರೀ ಮಳೆಯಿಂದ. ಜಿಲ್ಲೆಯ ಕದ್ರಾ,ಕೊಡಸಳ್ಳಿ, ಕಳಚೆ.ಅಣಶಿ ಘಾಟ, ಅರಬೈಲ್ ಘಾಟ ಸೇರಿದಂತೆ ಅನೇಕ ಕಡೆಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ಸಂಪರ್ಕ ಕೊಂಡಿಯೇ ಕಳಚ್ಚಿ ಬಿದ್ದಿದೆ. ಕೆಲವು ಕಡೆಯಗಳಲ್ಲಿ ತಾತ್ಕಾಲಿಕವಾಗಿ ಸರಿಪಡಿಸಿಕೊಂಡಿದ್ದರೆ ಇನ್ನೂ ಅನೇಕ ಕಡೆಯಲ್ಲಿ ಸಂಪರ್ಕ ಸಾಧ್ಯವಾಗತ್ತಾ ಇಲ್ಲ‌.

ಇನ್ನೂ ಕೊಡಸಳ್ಳಿ ಜಲಾಶಯ ಪ್ರದೇಶದಲ್ಲಂತೂ ಜಲಾಶಯಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ಜಲಾಶಯಕ್ಕೆ ಅಪಾಯದ ತಂದೊಡ್ಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಗೆ ಆಗಮಿಸಿದ ಅಧ್ಯಯನ ತಂಡ ಇಂದು ಕೊಡಸಳ್ಳಿ ಜಲಾಶಯದ ಸುತ್ತಮುತ್ತ ಗುಡ್ಡಕುಸಿತ ಉಂಟಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಇನ್ನೂ ಕೊಡಸಳ್ಳಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದ್ದು. ಈ ಪ್ರದೇಶದಲ್ಲಿ ಒಂದೆ ದಿನ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿರೋದೆ ಪ್ರಮುಖ ಕಾರಣ ಅಂತಾ ಹೇಳಲಾಗತ್ತಾ ಇತ್ತು .‌ಆದ್ರೆ ಇಂದು ಅಧ್ಯಯನಕ್ಕೆ ಆಗಮಿಸಿದ ತಂಡ ಹೇಳತ್ತಿರೋದೆ ಬೇರೆ.

ಈ ಮೊದಲೆ ಈ ಭಾಗದಲ್ಲಿ ಗುಡ್ಡ ಕುಸಿತವಾಗಲಿದೆ ಅಂತಾ ಗುರುತ್ತು ಹಚ್ಚಲಾಗಿತ್ತು. ಆದ್ರೆ ಅದು ಈಗ ನಿಜವಾಗಿದೆ. ಇನ್ನೂ ಕಳಚೆ ಭಾಗದಲ್ಲಿ ಆಗಿರೋ ಗುಡ್ಡ ಕುಸಿತ ಅಪಾಯಕಾರಿ ಆಗಿದ್ದು, ಆ ಭಾಗದಲ್ಲಿ ಇನ್ನೂ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಆದ್ರೆ ಕೊಡಸಳ್ಳಿ ಪ್ರದೇಶಲ್ಲಿ ಉಂಟಾಗಿರೋ ಗುಡ್ಡ ಕುಸಿತದ ಬಗ್ಗೆ ಈಗಲ್ಲೆ ಹೇಳೋದಕ್ಕೆ ಸಾಧ್ಯವಿಲ್ಲ.ಈ ಗಷ್ಟೆ ಇಲ್ಲಿನ ಕಲ್ಲು ಹಾಗೂ ಮಣ್ಣನ್ನ ತಪಾಸಣೆಗಾಗಿ ಕಳುಹಿಸಲಾವುದು.ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಗೋತ್ತಾಗಲಿದೆ ಎಂದರು.

ವಿಸ್ಮಯ ನ್ಯೂಸ್ ಕಾರವಾರ

Back to top button