Important
Trending

4 ಲಕ್ಷ ಮೌಲ್ಯದ ಬಂಗಾರದ ಸರ ಕಳೆದುಕೊಂಡ ಶಿಕ್ಷಕಿ: ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು

ಸಿದ್ದಾಪುರ: ಅಂಗನವಾಡಿ ಶಿಕ್ಷಕಿಯೊಬ್ಬರು ಶಾಲೆಗೆ ಹೋಗುವಾಗ 4 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಸರ ಹಾಗೂ ಮೊಬೈಲನ್ನು ಕಳೆದುಕೊಂಡಿದ್ದು, ತಕ್ಷಣ ಕಾರ್ಯಪ್ರವ್ರತ್ತರಾದ ಸಿದ್ದಾಪುರ ಪೊಲೀಸರು ಸೊರಬಾ ಬಳಿ ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

SBI Recruitment 2023: 868 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ:40 ಸಾವಿರ ಮಾಸಿಕ ವೇತನ

ತಾಲೂಕಿನ ಕಾನಗೋಡಿನ ಪೂರ್ಣಿಮಾ ನಾಯ್ಕ  ಎಂಬುವರು ಸೋಮವಾರ ಅವರಗುಪ್ಪಾ ಅಂಗನವಾಡಿಗೆ ತೆರಳುತ್ತಿರುವಾಗ ಬಳ್ಳಟ್ಟೆ ಹತ್ತಿರ ಬ್ಯಾಗನಲ್ಲಿದ್ದ 7 ತೊಲೆ ಬಂಗಾರದ ಸರ ಹಾಗೂ ಮೊಬೈಲ್ ಕಳೆದುಕೊಂಡು ಠಾಣೆಗೆ ದೂರು ನೀಡಿದ್ದು, ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಮೊಬೈಲ್ ಟ್ರೇಸ್ ಮಾಡಿ ಸೊರಬಾಕ್ಕೆ ತೆರಳಿ ಕಳೆದುಕೊಂಡ ವಸ್ತುಗಳನ್ನು ತಂದು ಪೂರ್ಣಿಮಾ ನಾಯ್ಕ ಅವರಿಗೆ ಮರಳಿಸಿ ಚಾಣಾಕ್ಷತೆ ಪ್ರದರ್ಶಿಸಿದ್ದಾರೆ. ಪಿ.ಎಸ್.ಐಗಳಾದ ಎಂ.ಜಿ.ಕುಂಬಾರ, ಮಲ್ಲಿಕಾರ್ಜುನಯ್ಯ ಕೊರಾಣಿ, ಠಾಣೆಯ ರಮೇಶ ಕೂಡಲ್, ಉದಯ ಮೇಸ್ತಾ ಹಾಗೂ ಸಂಗೀತಾ ಕಾನಡೆ ಅವರನ್ನು ಒಳಗೊಂಡ ತಂಡದ ಕ್ಷಿಪ್ರ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖಂಡ ಸಿದ್ದಾಪುರ

Related Articles

Back to top button