Follow Us On

WhatsApp Group
Important
Trending

ಅಪ್ರಾಪ್ತ ಬಾಲಕಿಯನ್ನು ಮೊಬೈಲ್ ನಲ್ಲಿಯೇ ಪರಿಚಯಿಸಿಕೊಂಡ ಡಿಪ್ಲೋಮಾ ವಿದ್ಯಾರ್ಥಿ: ದೂರದೂರಿಂದ ಬಂದು ಬೀಚಿಗೆ ಕರೆದುಕೊಂಡು ಹೋಗಿ ಗರ್ಭವತಿ ಮಾಡಿದ ಭೂಪ

ಅಂಕೋಲಾ:ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಬಲತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿ ಅವಳು ಗರ್ಭಿಣಿಯಾಗಲು ಕಾರಣವಾದ ಯುವಕನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪೋ-ಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

SBI Recruitment 2023: 868 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ:40 ಸಾವಿರ ಮಾಸಿಕ ವೇತನ

ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶರಣ ರಾಮಪ್ಪ ಪೂಜಾರ(26) ಎಂದು ಗುರುತಿಸಲಾಗಿದ್ದು ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ಈತ ಅಂಕೋಲಾ ತಾಲೂಕಿನ 16 ವರ್ಷದ ಬಾಲಕಿಯನ್ನು ಮೊಬೈಲ್ ನಲ್ಲಿ ಮೂರು ವರ್ಷಗಳ ಹಿಂದೆ ಪರಿಚಯ ಮಾಡಿಕೊಂಡು ಕಳೆದ ಜನವರಿ ತಿಂಗಳಲ್ಲಿ ಅಂಕೋಲಾಕ್ಕೆ ಬಂದು ಬಾಲಕಿಗೆ ಬೊಬ್ರವಾಡದ ನದಿಭಾಗ ಬೀಚಿಗೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಮಾಡಿದ್ದು ನಂತರದ ದಿನಗಳಲ್ಲಿ ಸಹ ಇದೇ ರೀತಿಯ ವರ್ತನೆ ಮುಂದುವರೆಸಿ ಬಾಲಕಿ ಗರ್ಭಿಣಿಯಾಗಲು ಕಾರಣವಾಗಿದ್ದಾನೆ ಎನ್ನಲಾಗಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಕ್ಸೊ ಪ್ರಕರಣದಡಿ ಆರೋಪಿತನನ್ನು ಬಂಧಿಸಿದ ಪೋಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಗೀಳು ಬೆಳೆಸಿಕೊಂಡಿರುವ ಯುವಜನತೆ, ಅಪರಿಚಿತರೊಂದಿಗೆ ಸ್ನೇಹ – ಸಲುಗೆ ಬೆಳೆಸಿ ನಂತರ ಅದೇ ಅವರ ಜೀವ ಮತ್ತು ಜೀವನಕ್ಕೆ ಕಂಟಕವಾಗುವ ಮೊದಲು ತಾನೆಷ್ಟು ಸುರಕ್ಷಿತ ಎಂದು ಯೋಚಿಸಿ,ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button