Focus NewsImportant
Trending

ಊರಿನ ಜಾತ್ರೆಗೆ ಬಂದಿದ್ದ ಯುವ ಜೋಡಿ ಸಾವಿನ ಯಾತ್ರೆಗೆ ನಡೆದಿದ್ದೇಕೆ ?ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ

ಅಂಕೋಲಾ: ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ  ಸಂಭವಿಸಿದ ಬೆನ್ನಿಗೇ ಅದೇ ಗ್ರಾಮದ ಯುವತಿಯೂ ವಿಷ ಸೇವಿಸಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದು ದುರಂತ ಅಧ್ಯಾಯದಂತಿದೆ.  ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ಇತ್ತೀಚೆಗೆ ತನ್ನೂರಿನ ಜಾತ್ರೆಗೆ ಬಂದಿದ್ದವ  ಕಳೆದ ವಾರದ ಒಂದು ದಿನ ಮದ್ಯಾಹ್ನ ತನ್ನೂರಿನ ಕಡಲ ತೀರದಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿದ್ದ ಎನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡವನನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪ್ರಾಪ್ತ ಬಾಲಕಿಯನ್ನು ಮೊಬೈಲ್ ನಲ್ಲಿಯೇ ಪರಿಚಯಿಸಿಕೊಂಡ ಡಿಪ್ಲೋಮಾ ವಿದ್ಯಾರ್ಥಿ: ದೂರದೂರಿಂದ ಬಂದು ಬೀಚಿಗೆ ಕರೆದುಕೊಂಡು ಹೋಗಿ ಗರ್ಭವತಿ ಮಾಡಿದ ಭೂಪ

ನಂತರ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಆ ಯುವಕ ಮೃತ ಪಟ್ಟಿದ್ದ ಎಂದು ತಿಳಿದು ಬಂದಿದೆ. ಸರಿ ಸುಮಾರು ಇದೇ ವೇಳೆ ಹಾಗೂ ಇದೇ ಮಾದರಿಯಲ್ಲಿ ಉಡುಪಿಯಲ್ಲಿ ಕೆಲಸಕ್ಕೆ ಇದ್ದು , ಅಂಕೋಲಾದ  ತನ್ನೂರಿನ ಜಾತ್ರೆಗೆ ಬಂದಿದ್ದ ಯುವತಿ ಯೋರ್ವಳೂ ಹೊಟ್ಟೆ ನೋವು ವಾಂತಿ ಮತ್ತಿತರ ಕಾರಣಗಳಿಂದ ಅಸ್ವಸ್ಥ ಗೊಂಡಿದ್ದರೂ,ಮನೆಯಿಂದ ಉಡುಪಿಯ ಕೆಲಸಕ್ಕೆ ಹೋಗುತ್ತೇನೆಂದು ಮರಳಿ ಹೋದವಳು ಅಲ್ಲಿ ಅಸಹನೀಯ ವೇದನೆ ಹಾಗೂ ಅಸ್ವಸ್ಥತೆಯಿಂದ ಬಳಲಿ ,ಕುಟುಂಬದವರ ಕರೆಯ ಮೇರೆಗೆ ಮರಳಿ ಬಂದು,ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಾದವಳು,ತಾನು ಸಹ ವಿಷ ಸೇವಿಸಿರುವುದರ  ಕುರಿತು ಈ ವೇಳೆ ಹೇಳಿಕೊಂಡಿದ್ದಳು ಎನ್ನಲಾಗಿದೆ.

ಆದರೆ ಅಷ್ಟರಲ್ಲಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿದ್ದು,ಚಿಕಿತ್ಸೆಗೆ ಸ್ಪಂದಿಸದೇ ಅವಳ ಬದುಕು ಕೊನೆಗೊಳ್ಳುವಂತಾಗಿರುವುದು, ಮಗಳನ್ನು ಕಳೆದು ಕೊಂಡ ಬಡ ಕುಟುಂಬದಲ್ಲಿ ಕಾರ್ಮೋಡ ಕವಿದಂತಾಗಿದೆ. ಒಂದೇ ಗ್ರಾಮದ ಯುವಕ ಹಾಗೂ ಯುವತಿ ಪಕ್ಕದ ಜಿಲ್ಲೆಯ ಬೇರೆ ಬೇರೆ ಕಡೆ ಕೆಲಸ ಮಾಡಿಕೊಂಡಿದ್ದವರು, ತಮ್ಮ ಊರಿನ ಜಾತ್ರೆಯ ಸಮಯಕ್ಕೇ ಊರಿಗೆ ಬಂದವರು,ಸರಿಸುಮಾರು ಒಂದೇ ಫಳಿಗೆಯಲ್ಲಿ ವಿಷ ಸೇವಿಸಿ,ನಂತರ ಬೇರೆ ಬೇರೆ ದಿನಗಳಂದು ಇಬ್ಬರೂ ಮೃತಪಟ್ಟು ಪ್ರತ್ಯೇಕ ಪ್ರತ್ಯೇಕ ಪ್ರಕರಣ ದಾಖಲಾದರೂ ಸಹ ಮೇಲ್ನೋಟಕ್ಕೆ ಈ ಎಲ್ಲಾ ಘಟನೆಗಳ ಹಿಂದೆ ಈ ಜೋಡಿ ಮಾನಸಿಕವಾಗಿ ನೊಂದಿಕೊಳ್ಳಲು ಕಾರಣಗಳೇನಿರಬಹುದು ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಂತಿದೆ.

ಇವರ ಸಾವಿಗೆ ನೈಜ ಕಾರಣಗಳು ಅದೇನೆ ಇದ್ದರೂ ದಿನದಿಂದ ದಿನಕ್ಕೆ ತಾಲೂಕಿನಲ್ಲಿ ನಾನಾ  ಕಾರಣಗಳಿಂದ,ಬೇರೆ ಬೇರೆ ರೀತಿಯಲ್ಲಿ ಯುವಜನರು ಸೇರಿ ಇತರೆ ಕೆಲವರು ಆತ್ಮಹತ್ಯೆಯ ದಾರಿ ತುಳಿಯುತ್ತಿರುವುದು ಖೇದಕರ ವಿಚಾರವಾಗಿದೆ. ಯಾರಿಗೇ ಆಗಲಿ, ಯಾವ ಸಮಸ್ಯೆಯೇ ತಲೆದೋರಿರಲಿ, ಆತ್ಮಹತ್ಯೆ ಅದಕ್ಕೆ ಪರಿಹಾರವಲ್ಲ ಎಂಬ ಕಟು ಸತ್ಯವನ್ನು ಅರಿತು ಛಲದಿಂದ ಬಾಳಿ ಬದುಕಿ ಈ ಸಮಾಜಕ್ಕೆ ಮತ್ತು ತಮ್ಮ ತಮ್ಮ  ಕುಟುಂಬಕ್ಕೆ ನೆಮ್ಮದಿ ನೀಡಿ,ಮಾದರಿಯಾಗಬೇಕಿದೆ.

ಶಾಲಾ-ಕಾಲೇಜುಗಳು,ಸಂಬಂಧಿತ ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಮತ್ತಿತರರು ಹಾಗೂ ವಿಶೇಷವಾಗಿ ವಿದ್ಯಾರ್ಥಿ ಪಾಲಕರು ,ಹದಿಹರೆಯ ಮತ್ತಿತರ ಕಾರಣಗಳಿಂದ ಮಕ್ಕಳಲ್ಲಿ ಆಗಬಹುದಾದ ಸೂಕ್ಷ್ಮ ಬದಲಾವಣೆ,ಖಿನ್ನತೆಯನ್ನು ಸರಿಪಡಿಸಲು ಮುಂಜಾಗ್ರತೆ ಕೈಗೊಂಡು,ಅವರನ್ನು ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ಸ್ವಾಸ್ಥ್ಯ ಹೆಚ್ಚಿಸಲು ಜವಾಬ್ದಾರಿ ಮೆರೆಯಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button